ಕನ್ನಡ ಚಿತ್ರರಂಗದಲ್ಲಿ ನಿರ್ಮಾಪಕ ಹಾಗೂ ಪ್ರದರ್ಶಕ ವಲಯದಲ್ಲಿ ಜಟಾಪಟಿ ನಡೆಯುತ್ತಿದೆ. ಅದು ಕೇವಲ 5 ರೂಪಾಯಿ ವಿಚಾರವಾಗಿ ಗಲಾಟೆ ಶರುವಾಗಿದೆ.
ಕರ್ನಾಟಕ ಚಲನಚಿತ್ರ ಪ್ರದರ್ಶಕರ ವಲಯದ ಅಧ್ಯಕ್ಷ ಕೆ. ವಿ. ಚಂದ್ರಶೇಖರ್ ಅವರು ಲಾಕ್ಡೌನ್ ತೆರವುಗೊಳಿಸಿದ ಬಳಿಕ ಸಿನಿಮಾ ಮಂದಿರಗಳು ತೆರೆಯುತ್ತವೆ. ಆಗ ಪ್ರತೀ ಟಿಕೆಟ್ ಬೆಲೆಯಲ್ಲಿ 5 ರೂ. ಹೆಚ್ಚಿಸಬೇಕು ಎಂದು ಅನಿಸಿಕೆ ಮಂಡಿಸಿದ್ದರು. ಆದರೆ ಇದಕ್ಕೆ ಕರ್ನಾಟಕ ಚಲನಚಿತ್ರ ನಿರ್ಮಾಪಕರ ಸಂಘದ ಅಧ್ಯಕ್ಷ ಪ್ರವೀಣ್ ಕುಮಾರ್(ರಾಮಕೃಷ್ಣ) ವಿರೋಧ ವ್ಯಕ್ತಪಡಿಸಿದ್ದಾರೆ.