ಕರ್ನಾಟಕ

karnataka

ETV Bharat / sitara

ನಾಲ್ಕು ತಿಂಗಳ ಬಳಿಕ 'ಭಜರಂಗಿ 2' ಶೂಟಿಂಗ್‌ ಶುರು: ಶಿವಣ್ಣ ಹೇಳಿದ್ದೇನು?

ರಾಜ್ಯ ಹಾಗೂ ಕೇಂದ್ರ ಸರ್ಕಾರದ ಕೋವಿಡ್​ ಮಾರ್ಗಸೂಚಿಗಳನ್ನು ಅನುಸರಿಸಿ ಸಿನಿಮಾ ಶೂಟಿಂಗ್​ ಪ್ರಾರಂಭಿಸಲಾಗಿದ್ದು, ಯಾರೂ ಭಯಪಡುವ ಅಗತ್ಯವಿಲ್ಲ. ಧೈರ್ಯದಿಂದ ಚಿತ್ರೀಕರಣ ಪ್ರಾರಂಭಿಸಿ ಎಂದು ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಹೇಳಿದ್ದಾರೆ.

ಭಜರಂಗಿ 2 ಚಿತ್ರ ತಂಡ
ಭಜರಂಗಿ 2 ಚಿತ್ರ ತಂಡ

By

Published : Aug 21, 2020, 4:29 PM IST

Updated : Aug 21, 2020, 5:15 PM IST

ಕೊರೊನಾ ಹಿನ್ನೆಲೆಯಲ್ಲಿ ಕಳೆದ ಆರು ತಿಂಗಳಿನಿಂದ ಕನ್ನಡ ಚಿತ್ರರಂಗವು ಸಿನಿಮಾ ಶೂಟಿಂಗ್ ಹಾಗೂ ಸಿನಿಮಾ ಪ್ರದರ್ಶನವಿಲ್ಲದೆ ಸ್ತಬ್ಧಗೊಂಡಿದೆ. ಕೇಂದ್ರ ಹಾಗೂ ರಾಜ್ಯ ಸರ್ಕಾರ ಗೈಡ್​ಲೈನ್ಸ್ ನೀಡಿದ್ದರೂ ಸಹ ಕೆಲ ನಿರ್ಮಾಪಕ, ನಿರ್ದೇಶಕರಿಗೆ ಸಮಸ್ಯೆಯಾಗಿತ್ತು. ಈ ಹಿನ್ನೆಲೆಯಲ್ಲಿ ಶೂಟಿಂಗ್​ ಪ್ರಾರಂಭಿಸಲು ಮೀನಮೇಷ ಎಣಿಸುತ್ತಿದ್ದರು. ಆದರೆ ಇದೀಗ ಕನ್ನಡ ಚಿತ್ರರಂಗದ ಕೆಲಸಗಳನ್ನು ನಿಧಾನವಾಗಿ ಆರಂಭಿಸಲಾಗುತ್ತಿದೆ.

ಸಿನಿಮಾ ಶೂಟಿಂಗ್​ ಪ್ರಾರಂಭಿಸಿ ಎಂದ ನಟ ಶಿವರಾಜ್​ ಕುಮಾರ್

ಕೆಲ ದಿನಗಳ ಹಿಂದಷ್ಟೇ ಸರ್ಕಾರದ ಗೈಡ್​ಲೈನ್ಸ್ ಪ್ರಕಾರ, ಸುದೀಪ್ ಅಭಿನಯದ 'ಫ್ಯಾಂಟಮ್' ಸಿನಿಮಾದ ಚಿತ್ರೀಕರಣಕ್ಕೆ ಹೈದರಾಬಾದ್​ನಲ್ಲಿ ಚಾಲನೆ ನೀಡಲಾಗಿತ್ತು. ಈಗ ಕರ್ನಾಟಕದಲ್ಲಿ ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಅಭಿನಯದ 'ಭಜರಂಗಿ 2', ಚಿತ್ರದ ಚಿತ್ರೀಕರಣ ಕಾರ್ಯ ಶುರುವಾಗಿದೆ. ನಾಲ್ಕು ತಿಂಗಳ ಬಳಿಕ ಸೆಂಚುರಿ ಸ್ಟಾರ್ ಅಭಿನಯದ 'ಭಜರಂಗಿ 2' ಚಿತ್ರದ ಚಿತ್ರೀಕರಣ ನಡೆಯುತ್ತಿದೆ.

ಶಿವರಾಜ್​ಕುಮಾರ್ ಮಾತನಾಡಿ​, ಸರ್ಕಾರದ ಗೈಡ್‌ಲೈನ್ಸ್ ಪ್ರಕಾರ ಭಜರಂಗಿ 2 ಚಿತ್ರದ ಶೂಟಿಂಗ್ ಸ್ಟಾರ್ಟ್ ಮಾಡಿದ್ದೇವೆ. ಆದರೆ ಮೊದಲ ದಿನ ಸ್ವಲ್ಪ ಭಯ ಇತ್ತು. ಶೂಟಿಂಗ್​ ಸೆಟ್​ನಲ್ಲಿ ನೂರಕ್ಕೂ ಹೆಚ್ಚು ಜನ ಕೆಲಸ ಮಾಡಬೇಕಿರುವುದು ನಮ್ಮ ಆತಂಕಕ್ಕೆ ಕಾರಣ. ಆದರೆ ಎಲ್ಲರೂ ಸ್ಯಾನಿಟೈಸರ್ ಹಾಗು ಮಾಸ್ಕ್ ಧರಿಸಿ ಮುಂಜಾಗೃತೆಯಿಂದ ಕೆಲಸ​ ಪ್ರಾರಂಭಿಸಿದ್ದೇವೆ ಎಂದರು.

ಮೋಹನ್ ಬಿ ಕೆರೆಯ ಸ್ಟುಡಿಯೋದಲ್ಲಿ ಅದ್ದೂರಿ ಸೆಟ್​ ಹಾಕಿ ಆಕ್ಷನ್ ಸಿಕ್ವೇನ್ಸ್​ ಚಿತ್ರೀಕರಣ ಮಾಡಿದ್ದೇವೆ. ಸಾಹಸ ನಿರ್ದೇಶಕ ರವಿವರ್ಮ ಫೈಟ್ ಸಿಕ್ವೇನ್ಸ್ ಕಂಪೋಸ್ ಮಾಡಿದ್ದಾರೆ. ಚಿತ್ರಕ್ಕೆ ನಿರ್ಮಾಪಕರಾದ ಜಯಣ್ಣ ಭೋಗೇಂದ್ರ ಸಹಕಾರವಿದೆ. ಜೊತೆಗೆ ನಿರ್ದೇಶಕ ಎ.ಹರ್ಷ ಕೂಡ ಆ್ಯಕ್ಷನ್ ಸೀನ್​ಗಳನ್ನು ಚಿತ್ರೀಕರಿಸಿಕೊಂಡಿದ್ದಾರೆ. ಯಾರೂ ಕೊರೊನಾಗೆ ಹೆದರಬೇಕಿಲ್ಲ, ಧೈರ್ಯವಾಗಿ ಸಿನಿಮಾ ಶೂಟಿಂಗ್ ಪ್ರಾರಂಭಿಸಬಹುದು ಶಿವರಾಜ್ ಕುಮಾರ್ ಹೇಳಿದ್ದಾರೆ.

Last Updated : Aug 21, 2020, 5:15 PM IST

ABOUT THE AUTHOR

...view details