ಕರ್ನಾಟಕ

karnataka

ETV Bharat / sitara

ಇಂದಿನಿಂದ ಸಿನಿಮಾ ಥಿಯೇಟರ್​ಗಳು ಓಪನ್​: ತೆರೆಗೆ ಬರ್ತಿದೆ ಚಿರು ಅಭಿನಯದ 'ಶಿವಾರ್ಜುನ' - ಕನ್ನಡದ ಸಿನಿಮಾಗಳ ಇತ್ತೀಚಿನ ಸುದ್ದಿ

ಏಳು ತಿಂಗಳ ಬಳಿಕ ಬೆಳ್ಳಿತೆರೆ ಮೇಲೆ ಸಿನಿಮಾ ರಿಲೀಸ್ ಆಗುತ್ತಿದೆ. ನಟ ದಿ. ಚಿರಂಜೀವಿ ಸರ್ಜಾ ಹುಟ್ಟುಹಬ್ಬದ ಹಿನ್ನೆಲೆಯಲ್ಲಿ ಇಂದಿನಿಂದ ಅವರ ಅಭಿನಯದ 'ಶಿವಾರ್ಜುನ' ಚಿತ್ರ ಬೆಂಗಳೂರಿನ ಚಿತ್ರಮಂದಿರದಲ್ಲಿ ತೆರೆ ಕಾಣಲಿದೆ.

ಸಂತೋಷ್​ ಥಿಯೇಟರ್​ ಮುಂಭಾಗ ಭರ್ಜರಿ ಸಿದ್ಧತೆ
ಸಂತೋಷ್​ ಥಿಯೇಟರ್​ ಮುಂಭಾಗ ಭರ್ಜರಿ ಸಿದ್ಧತೆ

By

Published : Oct 16, 2020, 10:35 AM IST

ಬೆಂಗಳೂರು: ಕೊರೊನಾ ಲಾಕ್​ಡೌನ್​ ಹಿನ್ನೆಲೆಯಲ್ಲಿ ಬಂದ್​ ಆಗಿದ್ದ ಚಿತ್ರಮಂದಿರಗಳು ಮತ್ತೆ ತೆರೆದುಕೊಳ್ಳುತ್ತಿವೆ. ಅರ್ಧ ವರ್ಷ ಕಳೆದ ಬಳಿಕ ಮೊದಲ ಥಿಯೇಟರ್‌ನಲ್ಲಿ ಸಿನಿಮಾ ರಿಲೀಸ್ ಆಗುತ್ತಿವೆ. ನಿನ್ನೆಯಿಂದ ಚಿತ್ರಮಂದಿರ, ಮಲ್ಟಿಪ್ಲೆಕ್ಸ್​ ತೆರೆಯಲು ಅವಕಾಶ ಸಿಕ್ಕಿದ್ದರೂ ಕೂಡ ಬೆಂಗಳೂರಿನಲ್ಲಿ ಇಂದಿನಿಂದ ಚಿತ್ರ ಪ್ರದರ್ಶನ ಶುರುವಾಗುತ್ತಿದೆ.

ಸಿನಿಮಾ ಬಿಡುಗಡೆಗೆ ಚಿತ್ರಮಂದಿರಗಳಲ್ಲಿ ಸಕಲ ಸಿದ್ಧತೆ ನಡೆದಿದೆ. ಆದರೆ ಪ್ರೇಕ್ಷಕರು ಥಿಯೇಟರ್ ಕಡೆ ಮುಖ ಮಾಡುತ್ತಾರಾ? ಎಂಬುದನ್ನು ಕಾದು ನೋಡಬೇಕಿದೆ.

ನಾಳೆ ನಟ ದಿ. ಚಿರಂಜೀವಿ ಸರ್ಜಾ ಹುಟ್ಟುಹಬ್ಬದ ಹಿನ್ನೆಲೆಯಲ್ಲಿ ಇಂದಿನಿಂದ ಅವರ ಅಭಿನಯದ ಶಿವಾರ್ಜುನ ಚಿತ್ರ ಮತ್ತೆ ತೆರೆ ಕಾಣಲಿದೆ. ಸಂತೋಷ ಚಿತ್ರಮಂದಿರದಲ್ಲಿ ಈ ಸಿನಿಮಾ ಇಂದು ರಿಲೀಸ್ ಆಗಲಿದ್ದು, ಗ್ರ್ಯಾಂಡ್​ ರಿಲೀಸ್​ಗೆ ಭರ್ಜರಿ ಸಿದ್ಧತೆ ನಡೆಯುತ್ತಿದೆ. ಸಿನಿಮಾ ಮಂದಿರ ಮುಂಭಾಗ ಚಿರು ಅವರ ಬೃಹತ್​ ಗಾತ್ರದ ಕಟೌಟ್​ ನಿರ್ಮಿಸಲಾಗಿದೆ.

ಸಂತೋಷ್​ ಥಿಯೇಟರ್​ ಮುಂಭಾಗ ಶಿವಾರ್ಜುನ ಚಿತ್ರ ಬಿಡುಗಡೆಗೆ ಸಿದ್ಧತೆ

ಸಿನಿಮಾ ನೋಡಲು ಬರುವ ಪ್ರೇಕ್ಷಕರು ಮಾಸ್ಕ್ ಹಾಗೂ ಸಾಮಾಜಿಕ ಅಂತರ ಕಡ್ಡಾಯವಾಗಿ ಪಾಲಿಸಬೇಕಾಗಿದೆ. ಸ್ವಪ್ನ, ಸಂತೋಷ್​, ಭೂಮಿಕಾ ಥಿಯೇಟರ್​ನಲ್ಲಿ ಇಂದಿನಿಂದ ಸಿನಿಮಾ ಪ್ರದರ್ಶನ ನಡೆಯಲಿದೆ.

ಕನ್ನಡದ 7 ಚಿತ್ರಗಳೂ ಸೇರಿದಂತೆ 12ಕ್ಕೂ ಹೆಚ್ಚು ಸಿನಿಮಾಗಳು ರಿ-ರಿಲೀಸ್ ಆಗಲಿವೆ. ಲವ್ ಮಾಕ್ಟೆಲ್, ಮಾಯಾಬಜಾರ್, ಶಿವಾಜಿ ಸುರತ್ಕಲ್, ಶಿವಾರ್ಜುನ, 3rd ಕ್ಲಾಸ್, 5 ಅಡಿ 7 ಅಂಗುಲ ಸಿನಿಮಾಗಳು ಮರು ಬಿಡುಗಡೆ ಆಗಲಿವೆ. ಹಿಂದಿಯ ಥಪ್ಪಡ್, ತೆಲುಗಿನ ಭೀಷ್ಮ, ತಮಿಳಿನ ಧಾರಾಳಪ್ರಭು, ಇಂಗ್ಲೀಷ್ ಸಿನಿಮಾ ಐ ಸ್ಪೈ ಕೂಡ ಮತ್ತೆ ತೆರೆ ಕಾಣಲಿದೆ.

ಬರೋಬ್ಬರಿ ಏಳು ತಿಂಗಳಿನಿಂದ ಥಿಯೇಟರ್ ಓಪನ್​ ಆಗಿದ್ದು, ಈ ಹಿನ್ನೆಲೆಯಲ್ಲಿ ಜನರನ್ನು ಸೆಳೆಯೋಕೆ ಹೊಸ ತಂತ್ರ ರೂಪಿಸಲಾಗಿದೆ. ಟಿಕೆಟ್​ ದರದಲ್ಲಿ ಭಾರೀ ಇಳಿಕೆ ಕಂಡಿದ್ದು, ಸಂತೋಷ್ ಥಿಯೇಟರ್​ನಲ್ಲಿ ಈ ಹಿಂದೆ ಬಾಲ್ಕನಿ ಟಿಕೆಟ್​ ದರ 110 ರೂ. ಮತ್ತು ಸಾಮಾನ್ಯ ಟಿಕೆಟ್​ 100 ರೂ. ಇತ್ತು. ಇದೀಗ ಬಾಲ್ಕನಿ-100 ರೂ. ಮತ್ತು ಸಾಮಾನ್ಯ- 90ರೂ.ಗೆ ಇಳಿಸಲಾಗಿದೆ. ಇನ್ನು, ಕೆಲ ಥಿಯೇಟರ್​ಗಳಲ್ಲಿ 20 ರೂ.ಗಳಷ್ಟು ಟಿಕೆಟ್​ ದರ ಇಳಿಸಲಾಗಿದೆ.

ABOUT THE AUTHOR

...view details