ಅಯೋಧ್ಯೆಯಲ್ಲಿ ನಿರ್ಮಾಣವಾಗುತ್ತಿರುವ ಶ್ರೀರಾಮ ಮಂದಿರಕ್ಕೆ ದೇಶಾದ್ಯಾಂತ ಹಣ ಸಂಗ್ರಹಿಸಲಾಗುತ್ತಿದೆ. ಕಾರ್ಯಕರ್ತರು ಪ್ರತಿ ಮನೆಗೂ ತೆರಳಿ ಹಣ ಸಂಗ್ರಹಿಸುತ್ತಿದ್ದಾರೆ. ಜನರೂ ಕೂಡಾ ಮಂದಿರ ನಿರ್ಮಾಣಕ್ಕೆ ತಮ್ಮ ಕೈಲಾದ ಸಹಾಯ ಮಾಡುತ್ತಿದ್ದಾರೆ. ಕನ್ನಡ ಚಿತ್ರರಂಗ ಕಲಾವಿದರು ಕೂಡಾ ರಾಮಜನ್ಮಭೂಮಿಗೆ ತಮ್ಮ ನಿಧಿ ಅರ್ಪಿಸಿದ್ದಾರೆ.
ರಾಮಮಂದಿರ ನಿರ್ಮಾಣಕ್ಕೆ ಹಣ ಸಹಾಯ ಮಾಡಿದ ಸಿನಿ ಕಲಾವಿದರು
ಉತ್ತರ ಪ್ರದೇಶದ ಅಯೋಧ್ಯೆಯಲ್ಲಿ ನಿರ್ಮಾಣವಾಗುತ್ತಿರುವ ರಾಮ ಮಂದಿರಕ್ಕೆ ದೇಶಾದ್ಯಂತ ಹಣ ಸಂಗ್ರಹಿಸಲಾಗುತ್ತಿದೆ. ಕನ್ನಡ ಸಿನಿ ಕಲಾವಿದರು ಕೂಡಾ ಮಂದಿರ ನಿರ್ಮಾಣಕ್ಕೆ ಹಣ ಸಹಾಯ ಮಾಡಿದ್ದಾರೆ.
ಇದನ್ನೂ ಓದಿ:ಸಂಭಾವನೆ ಇಲ್ಲದೆ ಆ ಮಹತ್ಕಾರ್ಯ ಮಾಡಲು ಒಪ್ಪಿಕೊಂಡ ಚಾಲೆಂಜಿಂಗ್ ಸ್ಟಾರ್
ನಿಧಿ ಸಮರ್ಪಣೆ ಬಗ್ಗೆ ಮಾತನಾಡಿದ ಕರ್ನಾಟಕ ಚಲನಚಿತ್ರ ಮಂಡಳಿ ಅಧ್ಯಕ್ಷರಾದ ಸುನಿಲ್ ಪುರಾಣಿಕ್, ಕಲಾವಿದರು ಮುಕ್ತ ಮನಸ್ಸಿನಿಂದ ಶ್ರೀರಾಮ ಕಾರ್ಯ ಮಾಡಲು ಸಿದ್ಧರಿದ್ದಾರೆ ಎಂದು ಹೇಳಿದರು. ಎಲ್ಲರೂ ಈಗಷ್ಟೇ ಹಣ ನೀಡಲು ಆರಂಭಿಸಿದ್ದಾರೆ. ಇದು ಮೊದಲ ಸುತ್ತು ಇನ್ನೂ ಬಹಳಷ್ಟು ಮಂದಿ ಕೊಡುವವರಿದ್ದಾರೆ ಎಂದರು. ಅಭಿಯಾನದ ಪ್ರಮುಖರಾದ ನಾ.ತಿಪ್ಪೇಸ್ವಾಮಿ ನಿಧಿ ಸ್ವೀಕರಿಸಿ ಮಾತನಾಡಿ ಶ್ರೀರಾಮ ಪ್ರತಿಯೊಬ್ಬರ ಆದರ್ಶ ಪುರುಷ, ಶ್ರೀರಾಮನ ಮಂದಿರ ನಿರ್ಮಾಣಕ್ಕೆ ಇಡೀ ದೇಶಾದ್ಯಂತ ಹಬ್ಬದ ವಾತಾವರಣ ನಿರ್ಮಾಣವಾಗಿದೆ. ಬಡವ, ಶ್ರೀಮಂತ ಎನ್ನುವ ಭೇದ,ಭಾವ ಇಲ್ಲದೆ ಪ್ರತಿಯೊಬ್ಬರೂ ಇದು ನಮಗೆ ಸಿಕ್ಕಿದ ಆಜನ್ಮ ಪುಣ್ಯ ಎಂದು ತಿಳಿದು ತಮ್ಮ ಪಾಲಿನ ನಿಧಿ ಸಮರ್ಪಿಸುತ್ತಿದ್ದಾರೆ ಎಂದರು. ನಿರ್ದೇಶಕ ಪವನ್ ಒಡೆಯರ್, ರೂಪ ಐಯ್ಯರ್, ಪ್ರಮೀಳಾ ಸುಬ್ರಹ್ಮಣ್ಯ, ಅನಿರುದ್ಧ್ ಬಾಲಾಜಿ, ಮಾಲತಿ ದೇಶಪಾಂಡೆ, ಸ್ವಾತಿ,ಯಮುನಾ,ಭಾಸ್ಕರ್, ಬಿರಾದಾರ್, ಶಿವಕುಮಾರ್ ಆರಾಧ್ಯ ಸೇರಿದಂತೆ ಹಲವರು ನಿಧಿ ಸಮರ್ಪಣೆ ಮಾಡಿದರು.