ಚುನಾವಣೆಯಲ್ಲಿ ಅಭೂತಪೂರ್ವ ವಿಜಯ ಸಾಧಿಸಿದ ನಂತರ ಪ್ರಧಾನಿ ಮೋದಿ, ತಮ್ಮ ಹೆಸರಿನ ಜತೆ ಅಂಟಿಸಿಕೊಂಡಿದ್ದ 'ಚೌಕಿದಾರ್' ಪದ ಕಳಚಿದರು. ಚುನಾವಣೆಯಲ್ಲಿ ಪ್ರಬಲವಾಗಿ ಕೇಳಿ ಬಂದಿದ್ದ ಚೌಕಿದಾರ್ ಈಗ ಕನ್ನಡ ಚಿತ್ರರಂಗದಲ್ಲೂ ಧ್ವನಿಸುತ್ತಿದೆ. ವಿಶೇಷ ಅಂದ್ರೆ, ಈ ಹೆಸರಿನಲ್ಲಿ ಕನ್ನಡ ಚಿತ್ರವೊಂದು ಸೆಟ್ಟೇರುತ್ತಿದೆ.
ಮೋದಿ ಹೇಳಿದ ಆ ಪದದ ಹೆಸರಲ್ಲೇ ಸಿನಿಮಾ ನಿರ್ಮಾಣ! - undefined
ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಹೆಚ್ಚು ಸದ್ದು ಮಾಡಿದ್ದು 'ಚೌಕಿದಾರ್' ಅನ್ನೋ ಪದ. ಈ ಹೆಸರಿನಲ್ಲಿ ರಾಷ್ಟ್ರಾದ್ಯಂತ ಬಿಜೆಪಿ ಅಭಿಯಾನ ನಡೆಸಿತ್ತು.
![ಮೋದಿ ಹೇಳಿದ ಆ ಪದದ ಹೆಸರಲ್ಲೇ ಸಿನಿಮಾ ನಿರ್ಮಾಣ!](https://etvbharatimages.akamaized.net/etvbharat/prod-images/768-512-3443391-thumbnail-3x2-chowkidha.jpg)
'ತಾರಕಾಸುರ', 'ರಥಾವರ' ಸಿನಿಮಾಗಳ ನಿರ್ದೇಶಕ ಚಂದ್ರಶೇಖರ್ ಬಂಡಿಯಪ್ಪ ಈಗ 'ಚೌಕಿದಾರ್' ಹೆಸರಿನಲ್ಲಿ ಸಿನಿಮಾ ಮಾಡುತ್ತಿದ್ದಾರೆ. ಫಿಲ್ಮ್ ಚೇಂಬರ್ನಲ್ಲಿ ಈಗಾಗಲೇ ಈ ಟೈಟಲ್ ನೋಂದಾವಣೆ ಆಗಿದೆ. ಅಗಸ್ಟ್ಲ್ಲಿ 'ಚೌಕಿದಾರ್' ಸಿನಿಮಾ ಸೆಟ್ಟೇರುವ ಸಾಧ್ಯತೆ ಇದೆ. ಈ ಚಿತ್ರದಲ್ಲಿ ಪ್ರಧಾನಿ ಮೋದಿ ಕುರಿತಾದ ವಿಚಾರಗಳೂ ಇರುತ್ತವೆ ಎನ್ನುವ ಸುಳಿವು ಬಿಟ್ಟುಕೊಟ್ಟಿದ್ದಾರೆ ನಿರ್ದೇಶಕರು.
ಈ ಚಿತ್ರದಲ್ಲಿ ಗೋಲ್ಡನ್ ಸ್ಟಾರ್ ಗಣೇಶ್ ನಾಯಕನಾಗಿ ನಟಿಸಲಿದ್ದಾರೆ ಎನ್ನಲಾಗುತ್ತಿದೆ. ಸದ್ಯಕ್ಕಿಷ್ಟು ಮಾಹಿತಿ ಲಭ್ಯವಾಗಿದ್ದು, ಮುಂದಿನ ದಿನಗಳಲ್ಲಿ ಚಿತ್ರದ ನಾಯಕ-ನಾಯಕಿ ಯಾರು? ಬಂಡವಾಳ ಹೂಡುವರು ಯಾರು? ಎಂಬೆಲ್ಲಾ ಕುತೂಹಲಕಾರಿ ಪ್ರಶ್ನೆಗಳಿಗೆ ಉತ್ತರ ಸಿಗಬಹುದು.