'ರಗಡ್' ಚಿತ್ರದಿಂದ ಚೈತ್ರ ರೆಡ್ಡಿ ಹಾಗೂ ಲಂಡನ್ನಲ್ಲಿ ಲಂಬೋದರ ಸಿನಿಮಾ ಮೂಲಕ ಶೃತಿ ಪ್ರಕಾಶ್ ಉದಯೋನ್ಮುಖ ನಟಿಯಾಗಿ ಹೊರಹೊಮ್ಮಿದ್ದಾರೆ. ಚೈತ್ರ ಅವರ ಹೆಚ್ಚು ಆಕರ್ಷಕ ಸೌಂದರ್ಯ. ಅಷ್ಟೇ ಅಲ್ಲದೇ ಅವರ ಪಾತ್ರಕ್ಕೆ ಉತ್ತರ ಕರ್ನಾಟಕ ಶೈಲಿಯಲ್ಲಿ ಕನ್ನಡ ಡಬ್ ಮಾಡಿರುವುದು ಹೆಚ್ಚು ವರ್ಕೌಟ್ ಆಗಿದೆ. ಚೈತ್ರ ನಾಯಕ ವಿನೋದ್ ಪ್ರಭಾಕರ್ ಎತ್ತರಕ್ಕೆ ಸರಿ ಹೊಂದುವ ನಟಿ ಕೂಡ. ಚಿತ್ರದ ಉದ್ದಕ್ಕೂ ಅವರು ಬಹಳ ಸಹಜವಾದ ಅಭಿನಯ ನೀಡಿದ್ದಾರೆ.
ಯಾರಿದು ಚೈತ್ರ ರೆಡ್ಡಿ?
ಇವರು ತಮಿಳು ಧಾರವಾಹಿಗಳಲ್ಲಿ ಬಹಳ ಬ್ಯುಸಿಯಾದ ಬೆಂಗಳೂರಿನ ಬೆಡಗಿ. ಕನ್ನಡದಲ್ಲಿ ‘ಅವನು ಮತ್ತು ಶ್ರಾವಣಿ’ ಧಾರಾವಾಹಿಯಿಂದ ಶ್ರಾವಣಿ ಪಾತ್ರದಲ್ಲಿ ಫೇಮಸ್ ಆಗಿರುವ ನಟಿ. ನಾಲ್ಕು ವರ್ಷಗಳಲ್ಲಿ ಎರಡು ಮೆಗಾ ಧಾರಾವಾಹಿ ಹಾಗೂ ಒಂದು ತಮಿಳು ಮತ್ತು ಕನ್ನಡ ಸಿನಿಮಾ ಮಾಡಿರುವರು. ತಮಿಳಿನಲ್ಲಿ ‘ಯಾರಡಿ ನೀ ಮೊಹಿನಿ’ ಹಾಗೂ ಕಲ್ಯಾಣ ಮೊದಲ್ ಕಾದಲ್ ವರೈ’ ಧಾರಾವಾಹಿಗಳಲ್ಲಿ ಅಭಿನಯಿಸಿದ್ದಾರೆ.
ಶೃತಿ ಪ್ರಕಾಶ್ ‘ಲಂಡನಲ್ಲಿ ಲಂಬೋದರ’ ಸಿನಿಮಾ ಮೂಲಕ ನಾಯಕಿ ಆಗಿ ಪರಿಚಯ ಆಗಿದ್ದಾರೆ. ಮೂಲತಃ ಗಾಯಕಿ. ಬಿಗ್ ಬಾಸ್ ಮನೆಯಲ್ಲಿ ಇವರು ಹೆಚ್ಚು ಪ್ರಸಿದ್ಧಿ ಪಡೆದವರು. ಲಂಡನಲ್ಲಿ ಲಂಬೋದರ ಸಿನಿಮಾದಲ್ಲಿ ಸಿನಿಮಾದಲ್ಲಿ ರಶ್ಮಿ ಪಾತ್ರದಲ್ಲಿ ತಮ್ಮ ಮುದ್ದಾದ ಅಭಿನಯದಿಂದ, ಸಹಜವಾದ ಮಾತುಗಳಿಂದ ಆಕರ್ಷಿಸುತ್ತಾರೆ.
ಈ ಶೃತಿ ಕನ್ನಡದ ಬಿಗ್ ಬಾಸ್ ಸೀಸನ್-5ರಿಂದ ಹೆಚ್ಚು ಪರಿಚಯ ಆದವರು. ಬೆಳಗಾವಿಯಲ್ಲಿ ಪಿಯುಸಿ ಹಾಗೂ ಪೀಪುಲ್ ಟ್ರೀ ಕಾಲೇಜಿನಲ್ಲಿ ಬ್ಯುಸಿನೆಸ್ ಮ್ಯಾನೇಜ್ಮೆಂಟ್ ಓದಿದ ಇವರು ಹಿಂದಿ ಧಾರಾವಾಹಿ ‘ಸಾಥ್ ನಿಭಾನ ಸಾತಿಯ’ ಇಂದ ಜನಪ್ರಿಯತೆ ಗಳಿಸಿದ್ದಾರೆ. ಕರ್ನಲ್ ವಿ.ಸಿ. ಪ್ರಕಾಶ್ ಅವರ ಪುತ್ರಿ ಶೃತಿ, ಹಿಂದಿಯ ದಿಲ್ ದೋಸ್ತಿ ಡ್ಯಾನ್ಸ್, ಕನ್ನಡದ ತಕಧಿಮಿತ ಡ್ಯಾನ್ಸ್ ಕಾರ್ಯಕ್ರಮಗಳಲ್ಲದೆ ‘ರಂಗಮಂದಿರ’ ಎನ್ನುವ ಕನ್ನಡ ಸಿನಿಮಾದಲ್ಲೂ ಅಭಿನಯಿಸಿದ್ದಾರೆ.