ಲಾಕ್ ಡೌನ್ ಬಳಿಕ ಇಂದಿನಿಂದ ಚಿತ್ರಮಂದಿರಗಳಲ್ಲಿ ಸಿನಿಮಾ ಪ್ರದರ್ಶನ ಆರಂಭವಾಗಿದೆ. ಬೆಂಗಳೂರಿನ ಸಂತೋಷ್, ಪ್ರಸನ್ನ, ತ್ರಿವೇಣಿ, ಭೂಮಿಕಾ ಸೇರಿದಂತೆ ಹಲವು ಚಿತ್ರಮಂದಿರಗಳಲ್ಲಿ ಹಲವು ಸಿನಿಮಾಗಳು ತೆರೆ ಕಂಡಿವೆ.
ಮಗನ ಸಿನಿಮಾ ನೋಡಿ ಭಾವುಕರಾದ ಚಿರು ಸರ್ಜಾ ತಾಯಿ - ಸರ್ಜಾ ತಾಯಿ ಅಮ್ಮಾಜಿ
ಮೊದಲ ಶೋ ನೋಡಲು ಚಿರಂಜೀವಿ ಸರ್ಜಾ ತಾಯಿ ಅಮ್ಮಾಜಿ, ಸರ್ಜಾ ತಾಯಿ ಚಿತ್ರಮಂದಿರಕ್ಕೆ ಆಗಮಿಸಿ, ಸಿನಿಮಾ ನೋಡಿದ್ದಾರೆ. ಆದ್ರೆ ಚಿತ್ರದಲ್ಲಿ ತೋರಿಸಿರುವ ತಾಯಿ ಮಗನ ಸೆಂಟಿಮೆಂಟ್ ಸೀನ್ ನೋಡಿದಾಗ ಚಿರು ತಾಯಿ ಅಮ್ಮಾಜಿ ಸಂತೋಷ್ ಭಾವುಕರಾಗಿದ್ದಾರೆ.
ಕೆ ಜಿ ರಸ್ತೆಯಲ್ಲಿರೋ ಸಂತೋಷ್ ಚಿತ್ರಮಂದಿರದಲ್ಲಿ ದಿವಂಗತ ಚಿರಂಜೀವಿ ಸರ್ಜಾ ಅಭಿನಯದ ಶಿವಾರ್ಜುನ ಸಿನಿಮಾ ರೀ ರಿಲೀಸ್ ಆಗಿದೆ. ಮೊದಲ ಶೋ ನೋಡಲು ಚಿರಂಜೀವಿ ಸರ್ಜಾ ತಾಯಿ ಅಮ್ಮಾಜಿ, ಸಂತೋಷ್ ಚಿತ್ರಮಂದಿರಕ್ಕೆ ಆಗಮಿಸಿ, ಸಿನಿಮಾ ನೋಡಿದ್ದಾರೆ. ಆದ್ರೆ ಚಿತ್ರದಲ್ಲಿ ತೋರಿಸಿರುವ ತಾಯಿ ಮಗನ ಸೆಂಟಿಮೆಂಟ್ ಸೀನ್ ನೋಡಿದಾಗ ಚಿರು ತಾಯಿ ಅಮ್ಮಾಜಿ ಸಂತೋಷ್ ಭಾವುಕರಾಗಿದ್ದಾರೆ.
ಈ ಬಗ್ಗೆ ಮಾತನಾಡಿರುವ ಅವರು, ಚಿರಂಜೀವಿ ಸರ್ಜಾ ನಮ್ಮಿಂದ ದೂರ ಆಗಿಲ್ಲ, ನಮ್ಮ ಜೊತೆಗೆ ಇದ್ದಾರೆ. ಇನ್ನು ಮೊದಲ ದಿನ ಸಿನಿಮಾ ನೋಡುವುದಕ್ಕೆ ಐದರಿಂದ ಹತ್ತು ಜನ ಬರ್ತಾರೆ ಅಂತಾ ಅಂದು ಕೊಂಡಿದ್ದೇ, ಐವತ್ತಕ್ಕೂ ಹೆಚ್ಚಿನ ಪ್ರೇಕ್ಷಕರು ಬಂದಿದ್ದಾರೆ. ಇಷ್ಟು ಸಾಕು ಚಿತ್ರರಂಗ ನಿಧಾನಕ್ಕೆ ಚೇತರಿಕೆ ಆಗುತ್ತಿದೆ ಎಂದರು ಅಂತಾ ಹೇಳಿದರು. ಇದರ ಜೊತೆಗೆ ಸಿನಿಮಾ ಪ್ರೇಕ್ಷಕರು ಸಿನಿಮಾ ನೋಡಿ ಹೊರಗಡೆ ಬಂದು ತಮ್ಮ ಅಭಿಪ್ರಾಯ ಹಂಚಿಕೊಂಡರು.