ಕನ್ನಡ ಚಿತ್ರರಂಗದಲ್ಲಿ ಸ್ಟಾರ್ ನಟರಂತೆ, ಅವರ ಮಕ್ಕಳು ಕೂಡ ಸ್ಟಾರ್ ಕಿಡ್ಗಳಾಗಿ ಗಮನ ಸೆಳೆಯುವ ಟ್ರೆಂಡ್ ಈಗಾಗಲೇ ಶುರುವಾಗಿದೆ. ಸದ್ಯ ಸೋಷಿಯಲ್ ಮೀಡಿಯಾದಲ್ಲಿ ಯಶ್ ಮತ್ತು ರಾಧಿಕಾ ಪಂಡಿತ್ ಮಕ್ಕಳು, ನಟಿ ಶ್ವೇತಾ ಶ್ರೀವಾತ್ಸವ್ ಮಗಳು, ಅನು ಪ್ರಭಾಕರ್ ಮಗಳು ಒಂದಲ್ಲ ಒಂದು ವಿಷಯಕ್ಕೆ ಗಮನ ಸೆಳೆಯುತ್ತಿರುತ್ತಾರೆ.
ಈ ಸ್ಟಾರ್ಸ್ ಕಿಡ್ಗಳ ಜೊತೆಗೆ ದಿವಂಗತ ಚಿರಂಜೀವಿ ಸರ್ಜಾ ಮತ್ತು ಮೇಘನಾ ರಾಜ್ ಮಗ ರಾಯನ್ ರಾಜ್ ಸರ್ಜಾ ಕೂಡ ಸೋಷಿಯಲ್ ಮೀಡಿಯಾದಲ್ಲಿ ಸಖತ್ ಸೌಂಡ್ ಮಾಡುತ್ತಿದ್ದಾನೆ.
ಕೆಲವು ತಿಂಗಳ ಹಿಂದೆ ಹಿಂದೂ ಮತ್ತು ಕ್ರಿಶ್ಚಿಯನ್ ಸಂಪ್ರದಾಯದಂತೆ, ಮೇಘನಾ ರಾಜ್ ಬಹಳ ಗ್ರ್ಯಾಂಡ್ ಆಗಿ ಮಗನ ನಾಮಕರಣ ಮಾಡಿದ್ದರು. ಈಗ ರಾಯನ್ ರಾಜ್ ಸರ್ಜಾನಿಗೆ 11 ತಿಂಗಳು ತುಂಬುತ್ತಿದೆ. ಇನ್ನು ತೊದಲು ಮಾತಿನ ಮೂಲಕ ಚಿರು - ಮೇಘನಾ ಅಭಿಮಾನಿಗಳಿಗೆ ಖುಷಿ ನೀಡಿದ್ದಾನೆ.