ಕರ್ನಾಟಕ

karnataka

ETV Bharat / sitara

ಒಂದು ದಿನ ಮುನ್ನವೇ ಚಿರಂಜೀವಿ ಸರ್ಜಾ ಮೊದಲ ತಿಂಗಳ ಕಾರ್ಯ ಮುಗಿಸಿದ ಕುಟುಂಬ - Chiranjeevi sarja family

ಜೂನ್ 7 ರಂದು ಚಿರಂಜೀವಿ ಸರ್ಜಾ ಹೃದಯಾಘಾತದಿಂದ ನಿಧನರಾಗಿದ್ದರು. ನಿನ್ನೆ ಸರ್ಜಾ ಕುಟುಂಬ ಚಿರು ಅವರ ಮೊದಲನೇ ತಿಂಗಳ ಪುಣ್ಯತಿಥಿ ಕಾರ್ಯವನ್ನು ಮಾಡಿದೆ. ಕುಟುಂಬದವರು, ಆತ್ಮೀಯರು ಈ ಕಾರ್ಯದಲ್ಲಿ ಭಾಗಿಯಾಗಿದ್ದರು.

Chiru first month death anniversary
ಚಿರಂಜೀವಿ ಸರ್ಜಾ

By

Published : Jul 7, 2020, 10:20 AM IST

ಸ್ಯಾಂಡಲ್​ವುಡ್​ ನಟ, ಯುವಸಾಮ್ರಾಟ್ ಚಿರಂಜೀವಿ ಸರ್ಜಾ ನಮ್ಮನ್ನು ಅಗಲಿ ಇಂದಿಗೆ 1 ತಿಂಗಳು. ಚಿರು ಕುಟುಂಬ ವರ್ಗ ನಿನ್ನೆ ಚಿರಂಜೀವಿ ಸರ್ಜಾ ಅವರ ಮೊದಲನೇ ತಿಂಗಳ ಪುಣ್ಯತಿಥಿ ಕಾರ್ಯವನ್ನು ಮಾಡಿ ಮುಗಿಸಿದೆ.

ಚಿರಂಜೀವಿ ಸರ್ಜಾ ಮೊದಲ ತಿಂಗಳ ಪುಣ್ಯತಿಥಿ

ಇಂದು ದಿನ ಚೆನ್ನಾಗಿಲ್ಲ ಎಂದು ಪುರೋಹಿತರು ಹೇಳಿದ ಕಾರಣ ಒಂದು ದಿನ ಮುನ್ನವೇ ಚಿರು ತಿಂಗಳ ಕಾರ್ಯವನ್ನು ಮಾಡಲಾಗಿದೆ. ಕನಕಪುರ ರಸ್ತೆಯ ಧ್ರುವಾ ಸರ್ಜಾ ಫಾರ್ಮ್​ಹೌಸ್​​​ನಲ್ಲಿ ಚಿರು ಸಮಾಧಿಗೆ ಪೂಜೆ ಸಲ್ಲಿಸಲಾಗಿದೆ. ಮೇಘನಾ, ಧ್ರುವಾ ಸರ್ಜಾ ಸೇರಿದಂತೆ ಕುಟುಂಬ ಸದಸ್ಯರು ಭಾರವಾದ ಮನಸ್ಸಿನಿಂದಲೇ ಚಿರು ಸಮಾಧಿಗೆ ಪೂಜೆ ಸಲ್ಲಿಸಿ ಬಂದಿದ್ದಾರೆ. ಇದು ಖಾಸಗಿ ಸಮಾರಂಭವಾಗಿದ್ದು ಅಭಿಮಾನಿಗಳಿಗಾಗಲೀ, ಸಾರ್ವಜನಿಕರಿಗಾಗಲೀ ಕಾರ್ಯದಲ್ಲಿ ಪ್ರವೇಶವಿರಲಿಲ್ಲ. ಚಿರು ಕುಟುಂಬ ಹಾಗೂ ಆತ್ಮೀಯರಷ್ಟೇ ನಿನ್ನೆಯ ಕಾರ್ಯದಲ್ಲಿ ಭಾಗಿಯಾಗಿದ್ದರು.

ಅಣ್ಣನ ಸಮಾಧಿಗೆ ಪೂಜೆ ಸಲ್ಲಿಸುತ್ತಿರುವ ಧ್ರುವಾ ಸರ್ಜಾ

ಇನ್ನು ಕೆಲವು ದಿನಗಳಿಂದ ಧ್ರುವಾ ಸರ್ಜಾ ಮಾನಸಿಕ ಖಿನ್ನತೆಯಿಂದ ಬಳಲುತ್ತಿದ್ದು ಆಸ್ಪತ್ರೆಗೆ ಸೇರಿದ್ದಾರೆ ಎಂಬ ಊಹಾಪೋಹಗಳಿಗೆ ಧ್ರುವಾ ಸರ್ಜಾ ತೆರೆ ಎಳೆದಿದ್ದಾರೆ. ಶೀಘ್ರದಲ್ಲೇ ಧ್ರುವಾ 'ಪೊಗರು' ಶೂಟಿಂಗ್​​ನಲ್ಲಿ ಭಾಗಿಯಾಗಲಿದ್ದಾರೆ. ಚಿರಂಜೀವಿ ಸರ್ಜಾ ಅಭಿನಯದ 'ರಾಜ ಮಾರ್ತಾಂಡ' ಚಿತ್ರಕ್ಕೆ ಕೂಡಾ ಅಣ್ಣನ ಭಾಗದ ಡಬ್ಬಿಂಗ್ ಮಾಡುವುದಾಗಿ ಕೂಡಾ ಹೇಳಿದ್ದಾರೆ.

ಚಿರಂಜೀವಿ ಸರ್ಜಾ ಸಮಾಧಿ

ABOUT THE AUTHOR

...view details