ಹೈದರಾಬಾದ್: ಸಿನಿಮಾ ಚಿತ್ರಮಂದಿರಗಳಲ್ಲಿ ಶೇ. 100ರಷ್ಟು ಆಸನ ಭರ್ತಿಗೆ ಕೇಂದ್ರ ಸರ್ಕಾರ ಅನುಮತಿ ನೀಡುತ್ತಿದ್ದಂತೆ ಎಲ್ಲಾ ಭಾಷೆಗಳ ಚಿತ್ರಗಳು ಒಂದರ ಹಿಂದೆ ಒಂದರಂತೆ ರಿಲೀಸ್ ಆಗ್ತಿದ್ದು, ಇದೀಗ ಮೆಗಾಸ್ಟಾರ್ ಚಿರಂಜೀವಿ ನಟನೆಯ ಬಹು ನಿರೀಕ್ಷಿತ ಆಚಾರ್ಯ ಚಿತ್ರ ರಿಲೀಸ್ ಡೇಟ್ ಪ್ರಕಟಗೊಂಡಿದೆ.
ಇದನ್ನೂ ಓದಿ:'ಆಚಾರ್ಯ' ಟೀಸರ್ ರಿಲೀಸ್
ಚಿರಂಜೀವಿ ನಟನೆಯ ಆಚಾರ್ಯ ಚಿತ್ರದ ಟೀಸರ್ ಇಂದು ಸಂಜೆ ರಿಲೀಸ್ ಆಗಿದ್ದು, ಇದರ ಬೆನ್ನಲ್ಲೇ ಚಿತ್ರ ರಿಲೀಸ್ ದಿನಾಂಕ ಕೂಡ ಘೋಷಣೆಯಾಗಿದೆ. ಟೀಸರ್ ಅದ್ಭುತವಾಗಿ ಮೂಡಿ ಬಂದಿದ್ದು, ಪ್ರೇಕ್ಷಕರ ಮನ ಗೆಲ್ಲುವಲ್ಲಿ ಯಶಸ್ವಿಯಾಗಿದೆ.
ಚಿತ್ರಕ್ಕೆ ಕೊರಟಾಲ್ ಶಿವ ನಿರ್ದೇಶನವಿದ್ದು, ಕಾಜಲ್ ಅಗರವಾಲ್, ಸೂನು ಸೂದ್ ನಟನೆ ಮಾಡಿದ್ದಾರೆ. ಚಿರಂಜೀವಿ ಮಗ ರಾಮಚರಣ್ ವಿಶೇಷ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಚಿತ್ರ ರಿಲೀಸ್ ಆಗುವುದರ ಬಗ್ಗೆ ಖುದ್ದಾಗಿ ಚಿರಂಜೀವಿ ತಮ್ಮ ಟ್ವಿಟರ್ ಅಕೌಂಟ್ನಲ್ಲಿ ಬರೆದುಕೊಂಡಿದ್ದಾರೆ.