ಕರ್ನಾಟಕ

karnataka

ETV Bharat / sitara

ಮಗಳು ನಿಹಾರಿಕಾ ಬಗ್ಗೆ ಭಾವನಾತ್ಮಕ ಟ್ವೀಟ್​​ ಮಾಡಿದ ಜಿರಂಜೀವಿ - ನಿಹಾರಿಕಾ-ಚೈತನ್ಯ ಮದುವೆ

ಸಹೋದರ ನಾಗಬಾಬು ಮಗಳ ಮದುವೆ ಸಂಭ್ರಮದ ಸಮಯದಲ್ಲಿಯೇ ತಾವು ಮತ್ತು ನಿಹಾರಿಕಾ ಜೊತೆ ಇರುವ ಫೋಟೋವನ್ನು ಶೇರ್​​ ಮಾಡಿರುವ ಚಿರಂಜೀವಿ ಭಾವುಕ ಟ್ವೀಟ್​​ ಮಾಡಿದ್ದಾರೆ..

chiranjeevi tweet about niharika
ಮಗಳ ಬಗ್ಗೆ ಭಾವನಾತ್ಮಕ ಟ್ವೀಟ್​​ ಮಾಡಿದ ಜಿರಂಜೀವಿ

By

Published : Dec 9, 2020, 3:42 PM IST

Updated : Dec 9, 2020, 3:55 PM IST

ಕೊಣಿದೆಲ ಕುಟುಂಬದಲ್ಲಿ ಬಹಳ ದಿನಗಳ ನಂತ್ರ ಮದುವೆಯೊಂದು ನಡೆಯುತ್ತಿದೆ. ಹಾಗಾಗಿ ನಿಹಾರಿಕಾ ಮತ್ತು ಚೈತನ್ಯ ಮದುವೆಗೆ ಫ್ಯಾಮಿಲಿಯ ಎಲ್ಲಾ ಸ್ಟಾರ್​​ ನಟರು ಭಾಗವಹಿಸಿ ಶುಭ ಕೋರುತ್ತಿದ್ದಾರೆ.

ನಿಹಾರಿಕಾ ಮತ್ತು ಚಿರಂಜೀವಿ

ಸಹೋದರ ನಾಗಬಾಬು ಮಗಳ ಮದುವೆ ಸಂಭ್ರಮದ ಸಮಯದಲ್ಲಿಯೇ ತಾವು ಮತ್ತು ನಿಹಾರಿಕಾ ಜೊತೆ ಇರುವ ಫೋಟೋವನ್ನು ಶೇರ್​​ ಮಾಡಿರುವ ಚಿರಂಜೀವಿ ಭಾವುಕ ಟ್ವೀಟ್​​ ಮಾಡಿದ್ದಾರೆ. ನಿಹಾರಿಕಾ ಮಗುವಿದ್ದಾಗಿನ ಒಂದು ಫೋಟೋ ಮತ್ತು ಮದುವೆ ಸಮಾರಂಭದ ಒಂದು ಫೋಟೋವನ್ನು ಹಿರಿಯ ನಟ ಚಿರಂಜೀವಿ ಟ್ವಿಟರ್​​ನಲ್ಲಿ ಶೇರ್​​ ಮಾಡಿದ್ದಾರೆ.

ನಿಹಾರಿಕಾ ಮತ್ತು ಚಿರಂಜೀವಿ

ಇದನ್ನೂ ಓದಿ : ನಿಹಾರಿಕಾಗೆ ದುಬಾರಿ ಗಿಫ್ಟ್​​​​ ಕೊಟ್ಟ ಚಿರಂಜೀವಿ!

ಮುದ್ದು ಮಗಳ ಬಗ್ಗೆ ಭಾವನಾತ್ಮಕವಾಗಿ ಬರೆದಿರುವ ಚಿರಂಜೀವಿ, ನನ್ನ ತೋಳಲ್ಲಿ ಮಗುವಾಗಿ ಆಟವಾಡಿದ ಚಿನ್ನಾರಿ ನಿಹಾರಿಕಾಳನ್ನು ಇದೀಗ ಚೈತನ್ಯ ಕೈಗೆ ಒಪ್ಪಿಸುತ್ತಿದ್ದೇನೆ. ಚಿನ್ನಾರಿ ನಿಹಾರಿಕಾ ನಿನಗೆ ನನ್ನ ಶುಭಾಶಯ ಮತ್ತು ಆಶೀರ್ವಾದಗಳು. ಇಬ್ಬರ ಜೀವನ ಸುಂದರವಾಗಿರಲಿ ಎಂದು ಬರೆದಿದ್ದಾರೆ.

Last Updated : Dec 9, 2020, 3:55 PM IST

ABOUT THE AUTHOR

...view details