ಕರ್ನಾಟಕ

karnataka

ETV Bharat / sitara

ಮತ್ತೆ ತೆರೆ ಮೇಲೆ ಚಿರು ಅಭಿನಯದ ಶಿವಾರ್ಜುನ... - ಚಿರಂಜೀವಿ ಸರ್ಜಾ ಚಿತ್ರ ಶಿವಾರ್ಜುನ

ನಟ ಚಿರಂಜೀವಿ ಸರ್ಜಾ ಅಭಿನಯದ ಶಿವಾರ್ಜುನ ಚಿತ್ರ ಇದೇ ಅಕ್ಟೋಬರ್​ 16 ರಂದು ಮತ್ತೆ ತೆರೆ ಮೇಲೆ ಬರಲು ರೆಡಿಯಾಗಿದ್ದು, ಇಂದು ಚಿತ್ರತಂಡ ಈ ಬಗ್ಗಿ ಸುದ್ದಿಗೋಷ್ಟಿ ನಡೆಸಿದೆ.

Chiranjeevi Sarja
ಚಿರಂಜೀವಿ ಸರ್ಜಾ

By

Published : Oct 12, 2020, 7:20 PM IST

ಲಾಕ್​ಡೌನ್​ಗೆ ಕೆಲವೇ ದಿನಗಳ ಮುನ್ನ ಬಿಡುಗಡೆಯಾಗಿದ್ದ ಚಿರಂಜೀವಿ ಸರ್ಜಾ ಅಭಿನಯದ ಶಿವಾರ್ಜುನ್ ಸಿನಿಮಾ ಇದೀಗ ಮರು ಬಿಡುಗಡೆ ಆಗೋದಕ್ಕೆ ಸಜ್ಜಾಗಿದೆ. ಇದೇ ಶುಕ್ರವಾರ ಅಕ್ಟೋಬರ್ 16 ರಂದು, ರಾಜ್ಯಾದ್ಯಂತ ನೂರಕ್ಕೂ ಅಧಿಕ ಚಿತ್ರಮಂದಿರಗಳಲ್ಲಿ ಚಿರಂಜೀವಿ ಸರ್ಜಾನ ಚಿತ್ರ ಮತ್ತೆ ತೆರೆ ಮೇಲೆ ನೋಡುವ ಸೌಭಾಗ್ಯ ಅಭಿಮಾನಿಗಳಿಗೆ ಸಿಗಲಿದೆ.

ಚಿರಂಜೀವಿ ಸರ್ಜಾ ಇಲ್ಲದೆ, ಶಿವಾರ್ಜುನ್ ಸಿನಿಮಾ ಚಿತ್ರತಂಡ ಇಂದು ಪತ್ರಿಕಾಗೋಷ್ಠಿಯನ್ನು ಹಮ್ಮಿಕೊಂಡಿತ್ತು‌. ಈ ಸಿನಿಮಾ ಬಗ್ಗೆ ಮಾತಾಡೋದಿಕ್ಕೆ ಹಿರಿಯ ನಟಿ ತಾರಾ ಅನುರಾಧ, ನಟಿ ಅಮೃತ ಅಯ್ಯಂಗಾರ್, ನಿರ್ದೇಶಕ ಶಿವ ತೇಜಸ್ ನಿರ್ಮಾಪಕ ಶಿವಾರ್ಜುನ್ ಹಾಗೂ ಮತ್ತೊಬ್ಬ ಸಿನಿಮಾ ನಿರ್ಮಾಪಕ ಉದಯ್ ಮೆಹ್ತಾ ಉಪಸ್ಥಿತರಿದ್ದರು.

ಶಿವಾರ್ಜುನ ಚಿತ್ರತಂಡ

ದಿವಂಗತ ಚಿರಂಜೀವಿ ಸರ್ಜಾ ಇಂದು ನಮ್ಮೊಂದಿಗೆ ಇಲ್ಲಾ. ಆದರೆ ಅವರ ನಟನೆಯ ಶಿವಾರ್ಜುನ್ ಚಿತ್ರವನ್ನು ಮತ್ತೆ ರಿ ರೀಲಿಸ್ ಮಾಡುತ್ತಿರುವುದಾಗಿ ಚಿತ್ರ ತಂಡ ತಿಳಿಸಿದೆ. ನಿರ್ದೇಶಕ ಶಿವ ತೇಜಸ್ ಮಾತನಾಡಿ ಮತ್ತೆ ಚಿರಂಜೀವಿ ಸರ್ಜಾ ಅವರನ್ನ ತೆರೆ ಮೇಲೆ ನೋಡುವ ಅವಕಾಶ ಅಭಿಮಾನಿಗಳಿಗೆ ಸಿಗಲಿದೆ‌ ಎಂದರು.

ಇನ್ನು ಚಿತ್ರರಂಗದಲ್ಲಿ ಇಪ್ಪತ್ತು ವರ್ಷಗಳಿಂದ ಸಿನಿಮಾ ಪ್ರೊಡಕ್ಷನ್ ಕೆಲಸ ಮಾಡಿಕೊಂಡು, ಮೊದಲ ಬಾರಿಗೆ ನಿರ್ಮಾಪಕನಾಗಿರೋ ಶಿವಾರ್ಜುನ್ ಮಾತನಾಡಿ, ನಮಗೆ ಮತ್ತೆ ಈ ಸಿನಿಮಾ ರಿ ರಿಲೀಸ್ ಮಾಡ್ತಾ ಇರೋದಿಕ್ಕೆ, ಧ್ರುವ ಸರ್ಜಾ, ಅರ್ಜುನ್ ಸರ್ಜಾ ತುಂಬಾ ಸಪೋರ್ಟ್ ಮಾಡ್ತಾ ಇದ್ದಾರೆ, ನಾವು ಯಾವುದೇ ಸಿಂಪತಿಗಾಗಿ, ಸಿನಿಮಾ ರಿಲೀಸ್ ಮಾಡ್ತಾ ಇಲ್ಲಾ ಎಂದರು. ಚಿತ್ರಕ್ಕೆ ಹೆಚ್​.ಸಿ ವೇಣು ಛಾಯಾಗ್ರಹಣವಿದ್ದು, ಸುರಾಗ್ ಸಂಗೀತ ಇದೆ‌. ಚಿರಂಜೀವಿ ಸರ್ಜಾ ಅಲ್ಲದೇ ಅವಿನಾಶ್, ಕುರಿ ಪ್ರತಾಪ್, ಶಿವರಾಜ್ ಕೆ ಆರ್ ಪೇಟೆ ಸೇರಿದಂತೆ ಸಾಕಷ್ಟು ಕಲಾವಿದರು ಚಿತ್ರದಲ್ಲಿದ್ದಾರೆ‌.

ABOUT THE AUTHOR

...view details