ಕರ್ನಾಟಕ

karnataka

ETV Bharat / sitara

ಧ್ರುವಾ ಸರ್ಜಾ ಪತ್ನಿ ಪ್ರೇರಣಾ ಜೊತೆ ಚಿರು ಮಾಡಿದ್ದ ಟಿಕ್​​ಟಾಕ್ ವಿಡಿಯೋ ವೈರಲ್ - Chiru Ticktock video viral

ಧ್ರುವಾ ಸರ್ಜಾ ಪತ್ನಿ ಪ್ರೇರಣಾ ಅವರೊಂದಿಗೆ ಚಿರಂಜೀವಿ ಸರ್ಜಾ ಮಾಡಿದ್ದ ಟಿಕ್​​​​ಟಾಕ್ ವಿಡಿಯೋವೊಂದು ವೈರಲ್ ಆಗಿದೆ. ಇದನ್ನು ನೋಡಿದ ಅಭಿಮಾನಿಗಳು ಇಂದು ಚಿರು ಕೂಡಾ ಇಲ್ಲ, ಟಿಕ್​ಟಾಕ್ ಕೂಡಾ ಇಲ್ಲ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.

Chiranjeevi sarja Ticktock video with Prerana
ಚಿರಂಜೀವಿ ಸರ್ಜಾ ಟಿಕ್​ಟಾಕ್ ವಿಡಿಯೋ ವೈರಲ್

By

Published : Jul 1, 2020, 4:30 PM IST

ಜುಲೈ 7 ಕ್ಕೆ ಸ್ಯಾಂಡಲ್​​ವುಡ್​ ಯುವಸಾಮ್ರಾಟ್ ಚಿರಂಜೀವಿ ಸರ್ಜಾ ನಮ್ಮನ್ನು ಅಗಲಿ ಒಂದು ತಿಂಗಳಾಗುತ್ತದೆ. ಆ ಕರಾಳ ಭಾನುವಾರವನ್ನು ನಿಜಕ್ಕೂ ಸ್ಯಾಂಡಲ್​ವುಡ್​ ಪ್ರೇಮಿಗಳು ಮರೆಯಲು ಸಾಧ್ಯವೇ ಇಲ್ಲ. ಚಿರು ನೆನಪು ಪ್ರತಿದಿನ ಎಲ್ಲರನ್ನೂ ಕಾಡುತ್ತಿದೆ.

ಪ್ರೇರಣಾ ಜೊತೆ ಚಿರು ಟಿಕ್​ಟಾಕ್​

ಚಿರಂಜೀವಿ ಸರ್ಜಾ ನಿಧನರಾದಾಗ ಅವರು ಮಾಡಿದ್ದ ಟಿಕ್​​​ಟಾಕ್ ವಿಡಿಯೋಗಳು ಬಹಳ ವೈರಲ್ ಆಗಿತ್ತು. ಇದೀಗ ಚಿರಂಜೀವಿ ಸರ್ಜಾ ಕೂಡಾ ಇಲ್ಲ, ಟಿಕ್​ಟಾಕ್ ಕೂಡಾ ಬ್ಯಾನ್ ಆಗಿದೆ. ಧ್ರುವಾ ಸರ್ಜಾ ಪತ್ನಿ ಪ್ರೇರಣಾ ಜೊತೆ ಚಿರಂಜೀವಿ ಸರ್ಜಾ ಮಾಡಿದ್ದ ಟಿಕ್​​ಟಾಕ್​ ವಿಡಿಯೋವೊಂದು ವೈರಲ್ ಆಗಿದೆ. ಚಿರಂಜೀವಿ ಸರ್ಜಾ ತಮ್ಮ ಕುಟುಂಬದ ಸದಸ್ಯರೊಂದಿಗೆ ಎಷ್ಟು ಸ್ನೇಹದಿಂದ ಇದ್ದರು ಎಂಬುದಕ್ಕೆ ಈ ವಿಡಿಯೋ ಸಾಕ್ಷಿ. ಪ್ರೇರಣಾ ಹಾಗೂ ಚಿರು ಇಬ್ಬರೂ ಫನ್ ಮಾಡುತ್ತಾ ಟಿಕ್​​ಟಾಕ್​​ ಮಾಡಿದ್ದಾರೆ.

ಚಿರಂಜೀವಿ ಸರ್ಜಾ, ಧ್ರುವಾ ಸರ್ಜಾ

ಈ ವಿಡಿಯೋ ನೋಡಿ ಚಿರು ಅಭಿಮಾನಿಗಳು ಬಹಳ ಬೇಸರ ವ್ಯಕ್ತಪಡಿಸಿದ್ದಾರೆ. ತಾನೊಬ್ಬ ಸಿನಿಮಾ ನಟ ಎಂಬ ಸ್ವಲ್ಪವೂ ಅಹಂ ಇಲ್ಲದೆ ಬಹಳ ಪ್ರೀತಿಯಿಂದ, ಸಲುಗೆಯಿಂದ ಚಿರಂಜೀವಿ ಸರ್ಜಾ ತಮ್ಮ ಅಭಿಮಾನಿಗಳನ್ನು ಮಾತನಾಡಿಸುತ್ತಿದ್ದರು. ಈಗ ಕೇಂದ್ರ ಸರ್ಕಾರ ಕೂಡಾ ಟಿಕ್ ಟಾಕ್​ ಬ್ಯಾನ್ ಮಾಡಿದೆ. ಚಿರು ಕೂಡಾ ಇಲ್ಲ, ಅವರು ಇಷ್ಟಪಟ್ಟು ಮಾಡುತ್ತಿದ್ದ ಟಿಕ್​ಟಾಕ್​ ಕೂಡಾ ಇಲ್ಲ ಎಂದು ಅಭಿಮಾನಿಗಳು ಬೇಸರ ವ್ಯಕ್ತಪಡಿಸುತ್ತಿದ್ದಾರೆ.

ABOUT THE AUTHOR

...view details