ಕರ್ನಾಟಕ

karnataka

ETV Bharat / sitara

ಸಿನಿಮಾ ಆಗ್ತಿದೆ ಜುಗಾರಿ ಕ್ರಾಸ್... ಚಿರಂಜೀವಿ ಸರ್ಜಾ ಚಿತ್ರಕ್ಕೆ ಯಶ್​​​​- ಅಪ್ಪು ವಿಶ್​ - ಪುನೀತ್ ರಾಜ್‍ಕುಮಾರ್

ಜಯನಗರದ ಆರನೇ ಹಂತದಲ್ಲಿರುವ ನಿಮಿಷಾಂಭ ದೇವಾಲಯದಲ್ಲಿ ಚಿತ್ರದ ಮುಹೂರ್ತ ನೆರವೇರಿತು. ಕಾರ್ಯಕ್ರಮಕ್ಕೆ ಪವರ್ ಸ್ಟಾರ್ ಪುನೀತ್ ರಾಜ್‍ಕುಮಾರ್ ಹಾಗೂ ರಾಕಿಂಗ್​​​​ಸ್ಟಾರ್ ಯಶ್ ಆಗಮಿಸಿದ್ದರು.

ಚಿರಂಜೀವಿ ಸರ್ಜಾ

By

Published : Feb 10, 2019, 7:38 PM IST

ಯುವ ಸಾಮ್ರಾಟ್ ಚಿರಂಜೀವಿ ಸರ್ಜಾ ಅಭಿನಯದ ಹಿರಿಯ ನಿರ್ದೇಶಕ ಟಿಎಸ್ ನಾಗಭರಣ ನಿರ್ದೇಶನದ ಜುಗಾರಿ ಕ್ರಾಸ್ ಸಿನಿಮಾ ಇಂದು ಸೆಟ್ಟೇರಿದೆ.

ಜಯನಗರದ ಆರನೇ ಹಂತದಲ್ಲಿರುವ ನಿಮಿಷಾಂಭ ದೇವಾಲಯದಲ್ಲಿ ಚಿತ್ರದ ಮುಹೂರ್ತ ನೇರವೇರಿತು. ಕಾರ್ಯಕ್ರಮಕ್ಕೆ ಪವರ್ ಸ್ಟಾರ್ ಪುನೀತ್ ರಾಜ್‍ಕುಮಾರ್ ಹಾಗೂ ರಾಕಿಂಗ್​​​​ಸ್ಟಾರ್ ಯಶ್ ಆಗಮಿಸಿದ್ದರು.

ಜುಗಾರಿ ಕ್ರಾಸ್

ಪವರ್ ಸ್ಟಾರ್ ಕ್ಲಾಪ್ ಮಾಡಿದ್ರೆ, ರಾಕಿಂಗ್ ಸ್ಟಾರ್ ಕ್ಯಾಮರಾಗೆ ಚಾಲನೆ ನೀಡುವ ಮೂಲಕ ಜುಗಾರಿ ಕ್ರಾಸ್ ಚಿತ್ರತಂಡಕ್ಕೆ ವಿಶ್ ಮಾಡಿದರು.

ಜುಗಾರಿ ಕ್ರಾಸ್ ಚಿತ್ರವು ಪೂರ್ಣಚಂದ್ರ ತೇಜಸ್ವಿ ಅವರ ಕಾದಂಬರಿ ಜುಗಾರಿ ಕ್ರಾಸ್ ಆಧಾರಿತ ಸಿನಿಮಾವಾಗಿದೆ ಎಂದು ನಿರ್ದೇಶಕ ಟಿ.ಎಸ್ ನಾಗಾಭರಣ ತಿಳಿಸಿದರು. ಈ ಕಾದಂಬರಿಯನ್ನು ತುಂಬಾ ದಿನಗಳಿಂದ ಸಿನಿಮಾ ಮಾಡ್ಬೇಕು ಎಂದುಕೊಂಡಿದ್ದೆ. ಈಗ ನನ್ನ ಬಹುದಿನಗಳ ಕನಸು ನನಸಾಗಿದೆ ಎಂದು ನಾಗಾಭರಣ ಹೇಳಿದರು.

ಇನ್ನು ಚಿರಂಜೀವಿ ಸರ್ಜಾಗೆ ಇದು ಮೊದಲ ಕಾದಂಬರಿ ಆಧಾರಿತ ಚಿತ್ರವಾಗಿದ್ದು, ಈ ಚಿತ್ರದ ಮೇಲೆ ಚಿರುಗೆ ಸಾಕಷ್ಟು ನಿರೀಕ್ಷೆ ಇದೆಯಂತೆ. ಅಲ್ಲದೆ ಈ ಚಿತ್ರಕ್ಕಾಗಿ ಹೊಸ ಗೆಟಪ್ ಇರಲಿದ್ದು, ಸಾಕಷ್ಟು ತಯಾರಿಯೊಂದಿಗೆ ಚಿತ್ರದ ಶೂಟಿಂಗ್​​ಗಾಗಿ ಕಾಯುತ್ತಿದ್ದಾರೆ.

ಚಿತ್ರವನ್ನು ಕಡ್ಡಿಪುಡಿ ಚಿತ್ರವನ್ನು ನಿರ್ಮಿಸಿದ್ದ ಚಂದ್ರು ನಿರ್ಮಾಣ ಮಾಡಲಿದ್ದು, ವೇಣು ಅವರ ಕ್ಯಾಮರಾ ವರ್ಕ್ ಇರಲಿದೆ. ಮುಂದಿನ ತಿಂಗಳು ಶೂಟಿಂಗ್ ಆರಂಭವಾಗಲಿದ್ದು, ಚಿತ್ರತಂಡ ನಾಯಕಿಯ ಹುಡುಕಾಟದಲ್ಲಿದೆ.

ನಾಗಾಭರಣ ಅವರು ನಿರ್ದೇಶಿಸಿರುವ ಕಾದಂಬರಿ ಆಧಾರಿತ ಬಹುತೇಕ ಚಿತ್ರಗಳು ಹಿಟ್​​ಲಿಸ್ಟ್ ಸೇರಿದ್ದು, ಈಗ ಈ ಚಿತ್ರದ ಮೇಲೆ ಸಾಕಷ್ಟು ನಿರೀಕ್ಷೆ ಇದೆ. ಇತ್ತ ಚಿರಂಜೀವಿ ಸರ್ಜಾಗೂ ಸಹ ಒಂದೊಳ್ಳೆ ಬ್ರೇಕ್​ನ ಅಗತ್ಯವಿದೆ.

ABOUT THE AUTHOR

...view details