ಚಾಲೆಂಜಿಂಗ್ ಸ್ಟಾರ್ ದರ್ಶನ್ ಸ್ಯಾಂಡಲ್ವುಡ್ನಲ್ಲಿರುವ ತಮ್ಮ ಸ್ನೇಹಿತರಿಗೆ ಹಾಗೂ ಹೊಸ ಪ್ರತಿಭೆಗಳಿಗೆ ಪ್ರೋತ್ಸಾಹ ನೀಡುತ್ತಾ ಬಂದಿದ್ದಾರೆ. ಇತ್ತೀಚೆಗೆ ಅವರು ಚಿರಂಜೀವಿ ಸರ್ಜಾ ಅಭಿನಯದ 'ಸಿಂಗ' ಸಿನಿಮಾದ ಹಾಡುಗಳ ಸಕ್ಸಸ್ ಮೀಟ್ಗೆ ತೆರಳಿ ಚಿತ್ರತಂಡಕ್ಕೆ ಶುಭ ಕೋರಿ ಬಂದಿದ್ದರು.
ಡಿ ಬಾಸ್ಗೆ ಇಷ್ಟವಾದ ಸ್ಪೆಷಲ್ ಗಿಫ್ಟ್ ಕೊಟ್ರು ಚಿರಂಜೀವಿ ಸರ್ಜಾ ದಂಪತಿ - undefined
ಚಿರಂಜೀವಿ ಸರ್ಜಾ ಹಾಗೂ ಮೇಘನಾ ರಾಜ್ ದಂಪತಿ ಚಾಲೆಂಜಿಂಗ್ ಸ್ಟಾರ್ ದರ್ಶನ್ಗೆ ಒಂದು ಮುದ್ದಾದ ನಾಯಿಮರಿಯನ್ನು ಗಿಫ್ಟ್ ನೀಡಿದ್ದಾರೆ. ದರ್ಶನ್ ನಮ್ಮ ಮನೆಯ ಸದಸ್ಯರಿದ್ದಂತೆ, ಅವರು ನಮಗೆ ಯಾವಾಗಲೂ ಪ್ರೋತ್ಸಾಹ ನೀಡುತ್ತಾರೆ. ಆದ್ದರಿಂದ ಇದು ನಮ್ಮ ಕಡೆಯಿಂದ ಅವರಿಗೆ ಚಿಕ್ಕ ಗಿಫ್ಟ್ ಎಂದು ಮೇಘನಾ ರಾಜ್ ಹೇಳಿಕೊಂಡಿದ್ದಾರೆ.
'ಕುರುಕ್ಷೇತ್ರ' ಸಿನಿಮಾದಲ್ಲಿ ಕೂಡಾ ಚಿರು ಪತ್ನಿ ಮೇಘನಾ ರಾಜ್ ದರ್ಶನ್ ಜೋಡಿಯಾಗಿ ನಟಿಸಿದ್ದಾರೆ. ಇನ್ನು ದರ್ಶನ್ ಪ್ರಾಣಿಪ್ರಿಯ ಆಗಿರುವುದರಿಂದ ಕಿರುಕಾಣಿಕೆಯಾಗಿ ಚಿರಂಜೀವಿ ಸರ್ಜಾ ಹಾಗೂ ಪತ್ನಿ ಮೇಘನಾ ರಾಜ್ ದರ್ಶನ್ಗೆ ಒಂದು ನಾಯಿಮರಿಯನ್ನು ಉಡುಗೊರೆಯಾಗಿ ನೀಡಿದ್ದಾರೆ. ತಮ್ಮ ಮನೆಯ 'ಭೀಮಾ' ಎಂಬ ಮುದ್ದಾದ ನಾಯಿಮರಿಯನ್ನು ದರ್ಶನ್ಗೆ ಗಿಫ್ಟ್ ಆಗಿ ನೀಡಿದ್ದಾರೆ. ಇದೇ ಮೊದಲಲ್ಲ, ದರ್ಶನ್ಗೆ ಈ ರೀತಿಯ ಗಿಫ್ಟ್ಗಳು ಆಗಾಗ್ಗೆ ಸಾಕಷ್ಟು ಬರುತ್ತಿರುತ್ತವೆ.
ದರ್ಶನ್ ಸರ್ ನಮ್ಮ ಕುಟುಂಬದ ಸದಸ್ಯರಿದ್ದ ಹಾಗೆ. ಅವರು ನಮಗೆ ಸದಾ ಪ್ರೋತ್ಸಾಹ ನೀಡುತ್ತಾರೆ. ಅವರ ಪ್ರೋತ್ಸಾಹಕ್ಕೆ ನಮ್ಮ ಪುಟ್ಟ ಉಡುಗೊರೆ ಇದು ಎಂದು ಮೇಘನಾ ಸರ್ಜಾ ತಮ್ಮ ಇನ್ಸ್ಟಾಗ್ರಾಮ್ನಲ್ಲಿ ಬರೆದುಕೊಂಡಿದ್ದಾರೆ.