ಕರ್ನಾಟಕ

karnataka

ETV Bharat / sitara

'ಪಿಚ್ಚಕ್ಕಾರನ್-2' ಕನ್ನಡಕ್ಕೆ ರೀಮೇಕ್ ಆಗಲಿದ್ಯಾ...ಚಿರು ಬದಲು ನಟಿಸೋರು ಯಾರು..? - Vijay antony starring Pichaikkaaran

ಚಿರಂಜೀವಿ ಸರ್ಜಾ ಹಾಗೂ ಸಿತಾರ ಅಭಿನಯದ 'ಅಮ್ಮ ಐ ಲವ್ ಯು' ಸಿನಿಮಾ ತಮಿಳಿನ 'ಪಿಚ್ಚಕ್ಕಾರನ್' ರೀಮೇಕ್ ಆಗಿದ್ದು ಇದೀಗ ತಮಿಳಿನಲ್ಲಿ ಈ ಸಿನಿಮಾ ಸೀಕ್ವೆಲ್ ಮಾಡಲಾಗುತ್ತಿದೆ. ಹಾಗಾದರೆ ಕನ್ನಡದಲ್ಲಿ 'ಅಮ್ಮ ಐ ಲವ್ ಯು' ಭಾಗ 2 ಬರಲಿದೆಯೇ ಎಂಬುದನ್ನು ಕಾದು ನೋಡಬೇಕು.

Chiranjeevi sarja amma i love you
ಚಿರು

By

Published : Jul 25, 2020, 11:51 AM IST

ಪರಭಾಷೆಯ ಅನೇಕ ಸಿನಿಮಾಗಳು ಕನ್ನಡಕ್ಕೆ ರೀಮೇಕ್ ಆಗಿವೆ. ಕೆಲವೊಂದು ಸೀಕ್ವೆಲ್​​​ಗಳು ಕೂಡಾ ರೀಮೇಕ್ ಆಗಿವೆ. ತಮಿಳಿನಲ್ಲಿ ಸೆಲ್ವ ನಿರ್ದೇಶನದ 'ನಾನ್ ಅವನಿಲ್ಲೈ' ಸಿನಿಮಾ ಎರಡು ಭಾಗಗಳನ್ನು ತಯಾರಿಸಲಾಗಿತ್ತು. ಈ ಸಿನಿಮಾ ಕನ್ನಡದಲ್ಲಿ ಉಪೇಂದ್ರ ಅಭಿನಯದಲ್ಲಿ 'ಬುದ್ಧಿವಂತ' ಆಗಿ ತಯಾರಾಗಿತ್ತು. ಈಗ 'ಬುದ್ಧಿವಂತ-2' ತಯಾರಾಗುತ್ತಿದೆ.

ಚಿರಂಜೀವಿ ಸರ್ಜಾ

ರಾಘವ ಲಾರೆನ್ಸ್ ಅಭಿನಯದ 'ಮುನಿ' ನಾಲ್ಕು ಸೀಕ್ವೆಲ್​​ಗಳಾಗಿ ಬಿಡುಗಡೆಯಾಗಿತ್ತು. ಉಪೇಂದ್ರ ಈ ಚಿತ್ರವನ್ನು ಕನ್ನಡದಲ್ಲಿ ಕಲ್ಪನ ಹೆಸರಿನಲ್ಲಿ ಎರಡು ಭಾಗಗಳನ್ನು ಮಾಡಿದ್ದರು. ಇದೀಗ 2015 ರಲ್ಲಿ ಬಿಡುಗಡೆ ಆದ ತಮಿಳು ಸಿನಿಮಾ 'ಪಿಚ್ಕಕ್ಕಾರನ್' ಸಮಯ. ತಮಿಳಿನಲ್ಲಿ 'ಪಿಚ್ಚಕ್ಕಾರನ್' ಭಾಗ 2 ತಯಾರಿಸುವುದಾಗಿ ವಿಜಯ್ ಆಂಟೋನಿ ಘೋಷಿಸಿದ್ದಾರೆ. ಈ ಸಿನಿಮಾ ತೆಲುಗಿನಲ್ಲಿ 'ಬಿಚ್ಚುಗಾಡು-2' ಆಗಿ ತಯಾರಾಗಲಿದೆ.

ಇಶಾನ್

'ಪಿಚ್ಚಕ್ಕಾರಾನ್' ಸಿನಿಮಾ ಕನ್ನಡಕ್ಕೆ 'ಅಮ್ಮ ಐ ಲವ್​ ಯು' ಹೆಸರನಲ್ಲಿ ತಯಾರಾಗಿತ್ತು. ಈ ಚಿತ್ರದಲ್ಲಿ ಯುವಸಾಮ್ರಾಟ್ ಚಿರಂಜೀವಿ ಸರ್ಜಾ ಹಾಗೂ ಸಿತಾರಾ ಚಿರು ಅಮ್ಮನಾಗಿ ನಟಿಸಿದ್ದರು. ಚಿತ್ರವನ್ನು ದ್ವಾರಕೀಶ್​​​ ಚಿತ್ರ ಬ್ಯಾನರ್​​​ನಲ್ಲಿ ತಯಾರಿಸಲಾಗಿತ್ತು. ಸೀಕ್ವೆಲ್​​​ನಲ್ಲಿ ಅಭಿನಯಿಸಲು ಚಿರಂಜೀವಿ ಸರ್ಜಾ ಇಂದು ನಮ್ಮೊಂದಿಗೆ ಇಲ್ಲ. 'ಪಿಚ್ಚಕಾರನ್ 2' ಕನ್ನಡದಲ್ಲಿ ರೀಮೇಕ್ ಆಗಲಿದೆಯಾ ಅಥವಾ ಡಬ್ ಆಗಿ ಬರಲಿದೆಯೇ ಎಂಬ ಪ್ರಶ್ನೆಗೆ ಇನ್ನೂ ಉತ್ತರ ದೊರೆತಿಲ್ಲ.

ಸಿತಾರಾ, ಚಿರಂಜೀವಿ ಸರ್ಜಾ

ಒಂದು ವೇಳೆ ರಿಮೇಕ್ ಆಗುವುದಾದರೆ ಚಿತ್ರದಲ್ಲಿ ಚಿರು ಜಾಗದಲ್ಲಿ ಇಶಾನ್ ಬರಬಹುದು ಎನ್ನಲಾಗುತ್ತಿದೆ. ಏಕೆಂದರೆ ಈ ಚಿತ್ರಕ್ಕೆ ಮೊದಲು ಆಯ್ಕೆಯಾಗಿದ್ದು ಇಶಾನ್. ಆದರೆ ನಿರ್ದೇಶಕ ಕೆ.ಎಂ. ಚೈತನ್ಯ ಚಿರಂಜೀವಿ ಅವರನ್ನು ಆಯ್ಕೆ ಮಾಡಿಕೊಂಡರು. ಸದ್ಯಕ್ಕೆ ಇಶಾನ್, ಪವನ್ ಒಡೆಯರ್ ನಿರ್ದೇಶನದ 'ರೇಮೊ' ಚಿತ್ರದಲ್ಲಿ ನಟಿಸುತ್ತಿದ್ದಾರೆ. 'ಪಿಚ್ಚಕ್ಕಾರನ್' ಸೀಕ್ವೆಲ್​​​​ ಇಶಾನ್ ಪಾಲಾಗಲಿದೆಯಾ ಕಾದು ನೋಡಬೇಕು.

ABOUT THE AUTHOR

...view details