ಬೆಂಗಳೂರು: ನಟ ಚಿರಂಜೀವಿ ಸರ್ಜಾ ಸಮಾಧಿಗೆ ಮೂರನೇ ದಿನ ಹಾಲು ತುಪ್ಪ ಬಿಡುವ ಕಾರ್ಯ ನಡೆಯಿತು.
ಚಿರು ಸಮಾಧಿಗೆ ಕುಟುಂಬಸ್ಥರಿಂದ ಹಾಲು ತುಪ್ಪ - ಚಿರು ಸಮಾಧಿಗೆ ಹಾಲು-ತುಪ್ಪ ಬಿಟ್ಟ ಕುಟುಂಬಸ್ಥರು
ಯುವನಟ ದಿ. ಚಿರಂಜೀವಿ ಸರ್ಜಾ ಸಮಾಧಿಗೆ ಇಂದು ಅವರ ಕುಟುಂಬಸ್ಥರು ತೆರಳಿ ಹಾಲು ತುಪ್ಪ ಬಿಟ್ಟು 3ನೇ ದಿನದ ಪೂಜಾ ಕಾರ್ಯ ನೆರವೇರಿಸಿದ್ದಾರೆ.
ಚಿರು ಸಮಾಧಿಗೆ ಹಾಲು-ತುಪ್ಪ ಬಿಟ್ಟ ಕುಟುಂಬಸ್ಥರು
ಚಿರು ಅಂತ್ಯಕ್ರಿಯೆ ವಿಧಿ ವಿಧಾನ ನಡೆಸಿಕೊಟ್ಟ ಮೋಹನ್ ಪುರೋಹಿತರಿಂದಲೇ ಹಾಲು ತುಪ್ಪ ಕಾರ್ಯ ನೆರವೇರಿತು. ಕನಕಪುರ ರಸ್ತೆ ನೆಲಗುಳಿ ಗ್ರಾಮದಲ್ಲಿರೋ ಧ್ರುವ ಸರ್ಜಾ ಫಾರ್ಮ್ ಹೌಸ್‌ನಲ್ಲಿ ನಿನ್ನೆ ಸಂಜೆ 6 ಗಂಟೆಗೆ ಹಿಂದೂ ಸಂಪ್ರದಾಯದಂತೆ ಚಿರಂಜೀವಿ ಸರ್ಜಾ ಅಂತ್ಯಕ್ರಿಯೆ ನೆರವೇರಿತ್ತು.
ಸ್ಯಾಂಡಲ್ವುಡ್ನ ಯುವನಟರಾಗಿದ್ದ ಚಿರಂಜೀವಿ ಸರ್ಜಾ ಭಾನುವಾರ ಮಧ್ಯಾಹ್ನ ತೀವ್ರ ಹೃದಯಾಘಾತದಿಂದ ಕೊನೆಯುಸಿರೆಳೆದಿದ್ದರು.
Last Updated : Jun 9, 2020, 10:36 AM IST