ಕರ್ನಾಟಕ

karnataka

ETV Bharat / sitara

ಅಮ್ಮನಿಗೆ ಪೆಸರಟ್ಟು ಮಾಡಿ ಬಡಿಸಿದ ಮೆಗಾಸ್ಟಾರ್...ಮಗನಿಗೆ ತುತ್ತು ತಿನ್ನಿಸಿದ ಅಂಜನಾದೇವಿ - Chiranjeevi made pesarattu for his mother

ಹೋಂ ಕ್ವಾರಂಟೈನ್​​​ನಲ್ಲಿರುವ ಚಿರಂಜೀವಿ ತಮ್ಮ ಅಮ್ಮನಿಗೆ ಅಡುಗೆ ಮಾಡಿ ಬಡಿಸಿದ್ದಾರೆ. ಅಡುಗೆ ಮನೆಯಲ್ಲಿ ಸ್ಟೌ ಹೊತ್ತಿಸಿ, ತವಾದಲ್ಲಿ ಪೆಸರಟ್ಟು ಹೊಯ್ದು ಅಲ್ಲೇ ಸಮೀಪದ ಡೈನಿಂಗ್ ಟೇಬಲ್​​​ನಲ್ಲಿ ತಿಂಡಿ ತಿನ್ನುತ್ತಿರುವ ಅಮ್ಮನಿಗೆ ಬಡಿಸಿದ್ದಾರೆ. ಅಂಜನಾದೇವಿ ಅವರು ಮಗನಿಗೂ ತುತ್ತು ತಿನ್ನಿಸಿ ತಾವೂ ತಿಂದಿದ್ದಾರೆ.

Chiranjeevi
ಮೆಗಾಸ್ಟಾರ್

By

Published : Apr 25, 2020, 6:07 PM IST

ಮಕ್ಕಳು ಬೆಳೆದು ಎಷ್ಟು ದೊಡ್ಡವರಾದರೂ ಹೆತ್ತವರಿಗೆ ಅವರು ಪುಟ್ಟ ಮಕ್ಕಳೇ. ಊರಿಗೆ ಅರಸನಾದವನು ಕೂಡಾ ಅಮ್ಮನ ಮಮತೆಯ ಮುಂದೆ ತಲೆ ಬಾಗಲೇಬೇಕು. ಬಾಲ್ಯದಲ್ಲಿರುವಾಗ ತಮಗೆ ಸರಿಯಾಗಿ ಊಟ, ತಿಂಡಿ ಇಲ್ಲದಿದ್ದರೂ ಮಕ್ಕಳು ಹಸಿವಿನಿಂದ ಇರಬಾರದು ಎಂಬ ಉದ್ದೇಶದಿಂದ ತಾಯಿ ಮಕ್ಕಳನ್ನು ಬಹಳ ಅಕ್ಕರೆಯಿಂದ ನೋಡಿಕೊಳ್ಳುತ್ತಾಳೆ. ಅದೇ ಮಕ್ಕಳು ಬೆಳೆದು ದೊಡ್ಡವರಾದಾಗ ಯಾವುದಾದರೂ ಕ್ಷೇತ್ರದಲ್ಲಿ ಸಾಧನೆ ಮಾಡಿ ತಾಯಿಯನ್ನು ರಾಣಿಯಂತೆ ನೋಡಿಕೊಂಡರೆ ಆಕೆಗೆ ಆಗುವ ಆನಂದ ಅಷ್ಟಿಷ್ಟಲ್ಲ.

ಟಾಲಿವುಡ್ ನಟ ಮೆಗಾಸ್ಟಾರ್ ಚಿರಂಜೀವಿ ಅವರು 2 ದಿನಗಳ ಹಿಂದೆ ತಮ್ಮ ಇನ್ಸ್​ಟಾಗ್ರಾಮ್​​​ನಲ್ಲಿ ಹಂಚಿಕೊಂಡಿರುವ ವಿಡಿಯೋ ನೋಡಿದರೆ ಅವರು ತಮ್ಮ ತಾಯಿಯನ್ನು ಎಷ್ಟು ಚೆನ್ನಾಗಿ ನೋಡಿಕೊಳ್ಳುತ್ತಿದ್ದಾರೆ ಎಂಬುದು ತಿಳಿಯುತ್ತದೆ. ಸದ್ಯಕ್ಕೆ ಚಿರಂಜೀವಿ ಎಲ್ಲರಂತೆ ಹೋಂ ಕ್ವಾರಂಟೈನ್​​​ನಲ್ಲಿದ್ದಾರೆ. ಆದರೆ ಅವರು ಸುಮ್ಮನೆ ಕುಳಿತಿಲ್ಲ. ತಮ್ಮ ಗಾರ್ಡನ್​​ನಲ್ಲಿರುವ ಗಿಡಗಳಿಗೆ ನೀರು ಹಾಕುವುದು, ಮನೆಯಲ್ಲಿದ್ದುಕೊಂಡೇ ಕೊರೊನಾ ಬಗ್ಗೆ ಜಾಗೃತಿ ಮೂಡಿಸುವ ಕಾರ್ಯಗಳಲ್ಲಿ ಪಾಲ್ಗೊಳ್ಳುತ್ತಿದ್ದಾರೆ. ಇದರೊಂದಿಗೆ ಚಿರಂಜೀವಿ ಅಡುಗೆ ಕೂಡಾ ಮಾಡುತ್ತಿದ್ದಾರೆ. ಅಡುಗೆ ಮನೆಯಲ್ಲಿ ಸ್ಟೌ ಹೊತ್ತಿಸಿ, ತವಾದಲ್ಲಿ ಪೆಸರಟ್ಟು ಹೊಯ್ದುಅಲ್ಲೇ ಸಮೀಪದ ಡೈನಿಂಗ್ ಟೇಬಲ್​​​ನಲ್ಲಿ ತಿಂಡಿ ತಿನ್ನುತ್ತಿರುವ ಅಮ್ಮನಿಗೆ ಬಡಿಸಿದ್ದಾರೆ. ಅಂಜನಾದೇವಿ ಅವರು ಮಗನಿಗೂ ತುತ್ತು ತಿನ್ನಿಸಿ ತಾವೂ ತಿಂದಿದ್ದಾರೆ. ಈ ವಿಡಿಯೋವನ್ನು ಚಿರು ತಮ್ಮ ಇನ್ಸ್​​​ಟಾಗ್ರಾಮ್​​ನಲ್ಲಿ ಷೇರ್ ಮಾಡಿಕೊಂಡಿದ್ದಾರೆ. ಅಮ್ಮ-ಮಗನ ಈ ಬಾಂಧವ್ಯದ ವಿಡಿಯೋ ನೋಡಿ ನೆಟಿಜನ್ಸ್ ಕೂಡಾ ಸಂತೋಷ ವ್ಯಕ್ತಪಡಿಸಿದ್ದಾರೆ.

ಅಂಜನಾದೇವಿ, ಚಿರಂಜೀವಿ

For All Latest Updates

TAGGED:

ABOUT THE AUTHOR

...view details