ಶಿಕ್ಷಣ ಕ್ಷೇತ್ರದಲ್ಲೂ ಹೂಡಿಕೆ: ಅಂತಾರಾಷ್ಟ್ರೀಯ ಶಾಲೆ ತೆರೆದ ಮೆಗಾಸ್ಟಾರ್ - undefined
ನಟರು ಸಿನಿಮಾದಲ್ಲಿ ನಟಿಸುವುದರ ಜೊತೆಗೆ ಸಾಮಾನ್ಯವಾಗಿ ಸೈಡ್ ಬ್ಯುಸಿನೆಸ್ಗಳನ್ನೂ ಹೊಂದಿರುತ್ತಾರೆ. ಜಿಮ್, ಯೋಗ ಸೆಂಟರ್, ಥಿಯೇಟರ್, ಶಾಪಿಂಗ್ ಮಾಲ್, ರಿಯಲ್ ಎಸ್ಟೇಟ್ ಹೀಗೆ ನಾನಾ ರೀತಿಯ ಬ್ಯುಸಿನೆಸ್ಗಳಿಗೆ ಹಣ ಹೂಡಿಕೆ ಮಾಡುತ್ತಾರೆ. ಇಂತಹುದೇ ಹೊಸ ಪ್ರಯತ್ನ ಮಾಡಿದ್ದಾರೆ ಮೆಗಾಸ್ಟಾರ್ ಚಿರಂಜೀವಿ

ಚಿರಂಜೀವಿ
ಟಾಲಿವುಡ್ ಖ್ಯಾತ ನಟ ಮೆಗಾಸ್ಟಾರ್ ಚಿರಂಜೀವಿ ಕೂಡಾ ವಿವಿಧ ಕ್ಷೇತ್ರಗಳಲ್ಲಿ ಹಣ ಹೂಡಿದ್ದಾರೆ. ಆದರೆ ಶಿಕ್ಷಣಕ್ಕೆ ಸಂಬಂಧಿಸಿದಂತೆ ಅವರು ಯಾವುದೇ ಹಣ ಹೂಡಿರಲಿಲ್ಲ. ಇದೀಗ ಅವರು ಅಂತಾರಾಷ್ಟ್ರೀಯ ಮಟ್ಟದ ಶಾಲೆಯೊಂದನ್ನು ತೆರೆಯಲು ಹೊರಟಿದ್ದಾರೆ. ಇದು ಈಗ ಟಾಲಿವುಡ್ನಲ್ಲಿ ಚರ್ಚೆಯಲ್ಲಿರುವ ಹಾಟ್ ಟಾಪಿಕ್. ರಾಮ್ ಚರಣ್, ಉಪಾಸನಾ, ಚಿರಂಜೀವಿ ಸಹೋದರ ನಾಗಬಾಬು ಸೇರಿದಂತೆ ಮೆಗಾ ಫ್ಯಾಮಿಲಿ ಸದಸ್ಯರು ಶಿಕ್ಷಣ ಕ್ಷೇತ್ರದಲ್ಲಿ ಹೂಡಿಕೆ ಮಾಡಲಿದ್ದಾರೆ. ಶ್ರೀಕಾಕುಲಂ ಜಿಲ್ಲೆಯಲ್ಲಿ ಈ ಶಾಲೆಯನ್ನು ಕಟ್ಟಲಾಗಿದ್ದು ಈ ಶೈಕ್ಷಣಿಕ ವರ್ಷದಿಂದ ಶಾಲೆ ಆರಂಭವಾಗಲಿದೆ ಎನ್ನಲಾಗಿದೆ.