ಚಿರಂಜೀವಿ ಸಹೋದರ ನಾಗಬಾಬು ಪುತ್ರಿ ನಿಹಾರಿಕಾ ಮತ್ತು ಚೈತನ್ಯ ಮದುವೆ ಅದ್ಧೂರಿಯಾಗಿ ನಡೆಯುತ್ತಿದೆ. ಕಳೆದ ಮೂರು ದಿನಗಳಿಂದ ನಡೆಯುತ್ತಿರುವ ಸಮಾರಂಭದಲ್ಲಿ ಮೆಗಾ ಸ್ಟಾರ್ ಇಡೀ ಫ್ಯಾಮಿಲಿ ಭಾಗಿಯಾಗಿದೆ. ಡಿಸೆಂಬರ್ 7ರಂದು ಸಂಗೀತ ಕಾರ್ಯಕ್ರಮ, ಡಿಸೆಂಬರ್ 8ರಂದು ಮೆಹಂದಿ ಮತ್ತು ಅರಿಶಿಣ ಶಾಸ್ತ್ರ ಸಮಾರಂಭವನ್ನು ಅದ್ಧೂರಿಯಾಗಿ ಮಾಡಲಾಗಿದೆ. ಸಮಾರಂಭದ ಫೋಟೋಗಳು ಇದೀಗ ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗುತ್ತಿವೆ.
ನಿಹಾರಿಕಾಗೆ ದುಬಾರಿ ಗಿಫ್ಟ್ ಕೊಟ್ಟ ಚಿರಂಜೀವಿ! - niharika wedding
ದೊಡ್ಡಪ್ಪ ಮೆಗಾ ಸ್ಟಾರ್ ಚಿರಂಜೀವಿ ನಿಹಾರಿಕಾಗೆ ಬಹು ಬೆಲೆ ಬಾಳುವ ಉಡುಗೊರೆ ನೀಡಿದ್ದಾರೆ. ಹೌದು, ಚಿರಂಜೀವಿ ನಿಹಾರಿಕಾಗೆ ನೆಕ್ಲೇಸ್ ಕೊಟ್ಟಿದ್ದು, ಅದರ ಬೆಲೆ ಬರೋಬ್ಬರಿ 2 ಕೋಟಿಯಂತೆ.
![ನಿಹಾರಿಕಾಗೆ ದುಬಾರಿ ಗಿಫ್ಟ್ ಕೊಟ್ಟ ಚಿರಂಜೀವಿ! Chiranjeevi has given an expensive gift to Niharika](https://etvbharatimages.akamaized.net/etvbharat/prod-images/768-512-9818650-thumbnail-3x2-giri.jpg)
ನಿಹಾರಿಕಾಗೆ ದುಬಾರಿ ಗಿಫ್ಟ್ ಕೊಟ್ಟ ಚಿರಂಜೀವಿ : ಅದರ ಬೆಲೆ ಎಷ್ಟು ಗೊತ್ತಾ?
ಮತ್ತೊಂದು ವಿಶೇಷ ಅಂದ್ರೆ ನಿಹಾರಿಕಾ ದೊಡ್ಡಪ್ಪ ಮೆಗಾಸ್ಟಾರ್ ಚಿರಂಜೀವಿ ನಿಹಾರಿಕಾಗೆ ಬಹು ಬೆಲೆ ಬಾಳುವ ಉಡುಗೊರೆಯನ್ನು ನೀಡಿದ್ದಾರೆ. ಹೌದು ಚಿರಂಜೀವಿ ನಿಹಾರಿಕಾಗೆ ನೆಕ್ಲೇಸ್ ಕೊಟ್ಟಿದ್ದು, ಅದರ ಬೆಲೆ ಬರೋಬ್ಬರಿ 2 ಕೋಟಿಯಂತೆ. ಈ ನೆಕ್ಲೇಸ್ಅನ್ನು ವಿಶೇಷ ವಿನ್ಯಾಸದಿಂದ ತಯಾರಿಸಲಾಗಿದ್ದು, ಮೆಗಾಸ್ಟಾರ್ ಉಡುಗೊರೆಯಾಗಿ ನೀಡಿದ್ದಾರೆ.
ನಿಹಾರಿಕಾ-ಚೈತನ್ಯ ಮದುವೆ ರಾಜಸ್ಥಾನದ ಉದಯಪುರದಲ್ಲಿ ನಡೆದಿದ್ದು, ಕಾರ್ಯಕ್ರಮದಲ್ಲಿ ಚಿರಂಜೀವಿ, ರಾಮ್ ಚರಣ್, ಉಪಾಸನ, ಅಲ್ಲು ಅರ್ಜನ್, ಸ್ನೇಹಾ ಸೇರಿದಂತೆ ಮೆಗಾ ಕುಟುಂಬ ಭಾಗಿಯಾಗಿ ಸಖತ್ ಎಂಜಾಯ್ ಮಾಡಿದೆ.