ಮೆಗಾಸ್ಟಾರ್ ಚಿರಂಜೀವಿ ಕುಟುಂಬದಲ್ಲಿ ಶೀಘ್ರದಲ್ಲೇ ಮತ್ತೊಂದು ಮದುವೆ ನಡೆಯಲಿದೆ. ಚಿರಂಜೀವಿ ಸಹೋದರ ನಾಗಬಾಬು ಪುತ್ರಿ ನಿಹಾರಿಕ ನಿಶ್ಚಿತಾರ್ಥ ಚೈತನ್ಯ ಜೊನ್ನಲಗಡ್ಡಎಂಬುವರೊಂದಿಗೆ ಇತ್ತೀಚೆಗೆ ನಡೆದಿದ್ದು, ಡಿಸೆಂಬರ್ 9 ರಂದು ಮದುವೆ ಅದ್ಧೂರಿಯಾಗಿ ನಡೆಯುತ್ತಿದೆ. ಮದುವೆಗಾಗಿ ನಾಗಬಾಬು ಕುಟುಂಬ ಸಕಲ ಸಿದ್ಧತೆ ಮಾಡಿಕೊಳ್ಳುತ್ತಿದೆ.
ಏಷ್ಯಾದ ದೊಡ್ಡ ಹೋಟೆಲ್ನಲ್ಲಿ ಅದ್ಧೂರಿಯಾಗಿ ನಡೆಯಲಿದೆ ಚಿರಂಜೀವಿ ಪುತ್ರಿ ಮದುವೆ..! - Niharika marriage is in Udaypur palace Hotel
ರಾಜಸ್ಥಾನದ ಒಬೆರಾಯ್ ಉದಯ್ ಪ್ಯಾಲೇಸ್ ಹೋಟೆಲ್ನಲ್ಲಿ ಮೆಗಾಸ್ಟಾರ್ ಚಿರಂಜೀವಿ ಸಹೋದರ, ನಟ ನಾಗಬಾಬು ಪುತ್ರಿಯ ಮದುವೆ ನಡೆಯುತ್ತಿದೆ. ಡಿಸೆಂಬರ್ 9 ರಂದು ಈ ಮದುವೆ ನಡೆಯುತ್ತಿದ್ದು ಚಿರಂಜೀವಿ ಕುಟುಂಬ ಮದುವೆ ದಿನಕ್ಕಾಗಿ ಎದುರು ನೋಡುತ್ತಿದೆ.
ನಾಗಬಾಬು ಮನೆಯಲ್ಲಿ ಇದು ಮೊದಲ ಮದುವೆಯಾದ್ದರಿಂದ ಈ ಆನಂದದ ಕ್ಷಣ ಕೊನೆಯವರೆಗೂ ಇರಬೇಕು ಎಂಬ ಕಾರಣಕ್ಕೆ ಏಷ್ಯಾದಲ್ಲಿ ದೊಡ್ಡ ಹೋಟೆಲ್ ಎಂದು ಹೆಸರಾದ ರಾಜಸ್ಥಾನದ ಉದಯಪುರದಲ್ಲಿರುವ ಒಬೆರಾಯ್ ಉದಯ್ ವಿಲಾಸ್ ಪ್ಯಾಲೇಸ್ನಲ್ಲಿ ಈ ಮದುವೆ ಮಾಡಲು ಕುಟುಂಬ ನಿರ್ಧರಿಸಿದೆ. ಕೊರೊನಾ ಸಮಯದಲ್ಲಿ ಡೆಸ್ಟಿನೇಷನ್ ವೆಡ್ಡಿಂಗ್ ಸೂಕ್ತ ಎಂಬ ಕಾರಣಕ್ಕೆ ರಾಜಸ್ಥಾನದಲ್ಲಿ ಈ ಮದುವೆ ಏರ್ಪಾಡು ಮಾಡಲಾಗುತ್ತಿದೆ. ನಿಹಾರಿಕಾ ಹಾಗೂ ಚೈತನ್ಯ ಕುಟುಂಬದ ಕೆಲವರು ಹಾಗೂ ಆಪ್ತರು ಮಾತ್ರ ಈ ಮದುವೆಯಲ್ಲಿ ಪಾಲ್ಗೊಳ್ಳುತ್ತಿದ್ದಾರೆ.
ವಿಶ್ವದ 5 ಅತ್ಯುತ್ತಮ ವೈಭವೋಪೇತ ಹೋಟೆಲ್ಗಳಲ್ಲಿ ಒಬೆರಾಯ್ ಉದಯ್ ವಿಲಾಸ್ ಪ್ಯಾಲೇಸ್ ಕೂಡಾ ಒಂದು. ಮುಖೇಶ್ ಅಂಬಾನಿ ಪತ್ರಿ ಇಶಾ ಮದುವೆ ಸಂಗೀತ್ ಕಾರ್ಯಕ್ರಮ ಕೂಡಾ ಇದೇ ಹೋಟೆಲ್ನಲ್ಲಿ ಜರುಗಿತ್ತು. ಈ ಹೋಟೆಲ್ನಲ್ಲಿ ಇದೀಗ ನಾಗಬಾಬು ತಮ್ಮ ಮುದ್ದಿನ ಪುತ್ರಿಯ ಮದುವೆ ಮಾಡಲು ಮುಂದಾಗಿದ್ದಾರೆ. ನಿಹಾರಿಕಾ ಹಾಗೂ ಚೈತನ್ಯ ಫೋಟೋಶೂಟ್ ಮಾಡಿಸಲು ಈಗಾಗಲೇ ಈ ಹೋಟೆಲ್ಗೆ ತೆರಳಿದ್ದಾರೆ ಎನ್ನಲಾಗಿದೆ.