ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷ ಚಿನ್ನೇಗೌಡ್ರು ಇತ್ತೀಚೆಗಷ್ಟೇ 75ನೇ ವರ್ಷದ ಹುಟ್ಟುಹಬ್ಬ ಹಾಗೂ ವಿವಾಹದ ಸುವರ್ಣ ಮಹೋತ್ಸವ ಆಚರಿಸಿದ್ದರು. ಇದೀಗ ಅವರು ವಾಣಿಜ್ಯ ಮಂಡಳಿ ಅಧ್ಯಕ್ಷರಾಗಿ ಯಶಸ್ವಿ ಒಂದು ವರ್ಷ ಅಧಿಕಾರಾವಧಿ ಪೂರೈಸಿದ ಖುಷಿಯಲ್ಲಿದ್ದಾರೆ.
ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷರಾಗಿ 1 ವರ್ಷ ಪೂರೈಸಿದ ಚಿನ್ನೇಗೌಡ್ರು.. - undefined
ಇತ್ತೀಚೆಗಷ್ಟೇ ತಮ್ಮ ವಿವಾಹದ ಸುವರ್ಣ ಮಹೋತ್ಸವ ಹಾಗೂ ತಮ್ಮ 75ನೇ ವರ್ಷದ ಹುಟ್ಟುಹಬ್ಬ ಆಚರಿಸಿದ್ದ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷ ಚಿನ್ನೇಗೌಡ್ರು ಒಂದು ವರ್ಷ ಅಧಿಕಾರಾವಧಿಯನ್ನು ಯಶಸ್ವಿಯಾಗಿ ಪೂರೈಸಿದ್ದಾರೆ.

ಜೂನ್ 10 ರಂದು ಚಿನ್ನೇಗೌಡರ ಅಧಿಕಾರಾವಧಿ ಕೊನೆಗೊಳ್ಳಲಿದೆ. ಅಲ್ಲದೆ ಅದೇ ದಿನ ಅವರ ಅಧಿಕಾರಾವಧಿಯ ಕೊನೆಯ ಕಾರ್ಯಕಾರಿ ಸಮಿತಿಯ ಸಭೆ ನಡೆಯಲಿದೆ. 2019-20ನೇ ಸಾಲಿನ ಚುನಾವಣೆಯ ಬಗ್ಗೆ ಕೂಡಾ ಅದೇ ದಿನ ಚರ್ಚಿಸಲಾಗುವುದು ಎಂದು ಚಿನ್ನೇಗೌಡ್ರು ಹೇಳಿದ್ದಾರೆ. ಅಲ್ಲದೆ ವಾಣಿಜ್ಯ ಮಂಡಳಿ ಬೈಲಾ ಪ್ರಕಾರ ಪ್ರತಿವರ್ಷ ಜೂನ್ 29 ರಂದು ಚುನಾವಣೆ ನಡೆಯುತ್ತದೆ. ಅದೇ ರೀತಿ ಈ ವರ್ಷವೂ ಸಹ ಜೂನ್ 29 ಕ್ಕೆ ಚುನಾವಣೆ ನಡೆಯಲಿದೆ. ಅಲ್ಲದೆ ಇದೇ 10 ರಂದು ಇಸಿ ಕಮಿಟಿ ಮೀಟಿಂಗ್ ನಡೆಯಲಿದ್ದು, ಜೂನ್ 29 ರಂದು ಚುನಾವಣೆ ನಡೆಸುವ ಬಗ್ಗೆ ಎಲ್ಲರ ಜೊತೆ ಚರ್ಚಿಸುತ್ತೇನೆ ಎಂದು ತಿಳಿಸಿದ್ರು. ವಾಣಿಜ್ಯ ಮಂಡಳಿ ಬೈಲಾ ಪ್ರಕಾರ ಈ ವರ್ಷ ಸಿನಿಮಾ ಪ್ರದರ್ಶಕರಲ್ಲಿ ಒಬ್ಬರು ವಾಣಿಜ್ಯ ಮಂಡಳಿ ಅಧ್ಯಕ್ಷರಾಗಲಿದ್ದಾರೆ ಎಂದು ತಿಳಿಸಿದ ಚಿನ್ನೇಗೌಡ್ರು, ತಮ್ಮ ಅಧಿಕಾರಾವಧಿಯಲ್ಲಿ ಸಹಕರಿಸಿದ ಎಲ್ಲರಿಗೂ ಧನ್ಯವಾದ ತಿಳಿಸಿದರು.