ನವದೆಹಲಿ: ಭಾರತದ ಕೊರೊನಾ ವಿರುದ್ಧದ ಹೋರಾಟಕ್ಕೆ ನಟ ಜಾಕಿ ಚಾನ್ ವಿಡಿಯೊ ಮೂಲಕ ಶುಭ ಹಾರೈಸಿದ್ದಾರೆ.
ಜಾಕಿ ಚಾನ್ ಅವರ ವಿಡಿಯೋ ಸಂದೇಶವನ್ನು ಭಾರತದ ಚೀನಾ ರಾಯಭಾರಿ ಸನ್ ವೀಡಾಂಗ್ ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.
ನವದೆಹಲಿ: ಭಾರತದ ಕೊರೊನಾ ವಿರುದ್ಧದ ಹೋರಾಟಕ್ಕೆ ನಟ ಜಾಕಿ ಚಾನ್ ವಿಡಿಯೊ ಮೂಲಕ ಶುಭ ಹಾರೈಸಿದ್ದಾರೆ.
ಜಾಕಿ ಚಾನ್ ಅವರ ವಿಡಿಯೋ ಸಂದೇಶವನ್ನು ಭಾರತದ ಚೀನಾ ರಾಯಭಾರಿ ಸನ್ ವೀಡಾಂಗ್ ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.
ನೀಲಿ ಬಣ್ಣದ ಜಾಕೆಟ್ ಧರಿಸಿ ವಿಡಿಯೋ ಸಂದೇಶ ನೀಡಿರುವ ನಟ ಜಾಕಿಚಾನ್ , "ನಮಸ್ತೆ , ಹಲೋ. ನಾನು ಜಾಕಿ ಚಾನ್ ಪ್ರತಿಯೊಬ್ಬ ಭಾರತೀಯರಿಗೂ ನನ್ನ ಪ್ರೀತಿಯ ಶುಭಾಶಯಗಳನ್ನು ಹೇಳಲು ಬಯಸುತ್ತೇನೆ. ನಾವೆಲ್ಲರೂ ಇದೀಗ ಬಹಳ ಕಷ್ಟದ ಸಮಯವನ್ನು ಎದುರಿಸುತ್ತಿದ್ದೇವೆ ಎಂದು ನನಗೆ ತಿಳಿದಿದೆ. ಎಲ್ಲರೂ ನಿಮ್ಮ ದೇಶದ ನಿಯಮಗಳನ್ನು ಪಾಲಿಸಿ. ನಿಮ್ಮ ಸುರಕ್ಷತೆ ನಿಮ್ಮ ಕುಟುಂಬದ ಸುರಕ್ಷತೆ ಎಂದಿದ್ದಾರೆ.
ಆದರೆ, ಭಾರತೀಯ ಟ್ವಿಟ್ಟರಿಗರು ಈ ವಿಡಿಯೋ ಸಂದೇಶವನ್ನು ಚೀನಾದ ಗಿಮಿಕ್ ಎಂದಿದ್ದು, ನಿಮ್ಮ ಕಾಳಜಿ ಮಾತಿನಲ್ಲಿ ಮಾತ್ರವಲ್ಲ, ನಿಮ್ಮ ಕಾರ್ಯಗಳಲ್ಲೂ ತೋರಿಸಿ ಎಂದು ಓರ್ವ ಟ್ವಟ್ಟರಿಗ ಕಮೆಂಟ್ ಮಾಡಿದ್ದಾರೆ.