12 ನೇ ಬೆಂಗಳೂರು ಅಂತಾರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ಸಿನಿಪ್ರಿಯರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಚಿತ್ರಗಳನ್ನು ವೀಕ್ಷಿಸುತ್ತಿದ್ದಾರೆ. ಮಾರ್ಚ್ 4 ವರೆಗೂ ಈ ಚಲನಚಿತ್ರೋತ್ಸವ ಜರುಗಲಿದೆ. ಜ್ಯೂರಿ ವಿಭಾಗದಲ್ಲಿ ಪ್ರದರ್ಶನಗೊಳ್ಳಲು 'ನಿರ್ಮಲ' ಮಕ್ಕಳ ಚಿತ್ರ ಕೂಡಾ ಆಯ್ಕೆಯಾಗಿದೆ.
12ನೇ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ 'ನಿರ್ಮಲ' ಮಕ್ಕಳ ಚಿತ್ರ ಪ್ರದರ್ಶನ - ಚಿತ್ರೋತ್ಸವದಲ್ಲಿ ಪ್ರದರ್ಶನಗೊಂಡ ನಿರ್ಮಲ ಸಿನಿಮಾ
'ನಿರ್ಮಲ' ಸಿನಿಮಾ ಬಯಲು ಶೌಚ ಮುಕ್ತ ಕಥೆಯನ್ನು ಹೊಂದಿದ್ದು ಈ ಚಿತ್ರವನ್ನು ಮಕ್ಕಳೇ ನಿರ್ದೇಶಿಸಿ, ಸಂಕಲನ ಮಾಡುವುದರ ಜೊತೆಗೆ ಆ್ಯಕ್ಟಿಂಗ್ ಕೂಡಾ ಮಾಡಿರುವುದು ಚಿತ್ರದ ವಿಶೇಷವಾಗಿದೆ. ಅಲ್ಲದೆ ಈ ಚಿತ್ರಕ್ಕೆ ಸಾಹಿತ್ಯ, ಸಂಗೀತ, ಕೋರಿಯೋಗ್ರಫಿ ಹಾಗೂ ಪೋಸ್ಟರ್ ಡಿಸೈನ್ ಕೂಡಾ ಮಕ್ಕಳೇ ಮಾಡಿದ್ದಾರೆ.

ಇಂದು ಬೆಳಗ್ಗೆ 11 ಗಂಟೆಗೆ ಈ ಸಿನಿಮಾ ಪ್ರದರ್ಶನವಾಗಿದೆ. 'ನಿರ್ಮಲ' ಸಿನಿಮಾ ಬಯಲು ಶೌಚ ಮುಕ್ತ ಕಥೆಯನ್ನು ಹೊಂದಿದ್ದು ಈ ಚಿತ್ರವನ್ನು ಮಕ್ಕಳೇ ನಿರ್ದೇಶಿಸಿ, ಸಂಕಲನ ಮಾಡುವುದರ ಜೊತೆಗೆ ಆ್ಯಕ್ಟಿಂಗ್ ಕೂಡಾ ಮಾಡಿರುವುದು ಚಿತ್ರದ ವಿಶೇಷವಾಗಿದೆ. ಅಲ್ಲದೆ ಈ ಚಿತ್ರಕ್ಕೆ ಸಾಹಿತ್ಯ, ಸಂಗೀತ, ಕೋರಿಯೋಗ್ರಫಿ ಹಾಗೂ ಪೋಸ್ಟರ್ ಡಿಸೈನ್ ಕೂಡಾ ಮಕ್ಕಳೇ ಮಾಡಿದ್ದಾರೆ. ಚಿತ್ರವನ್ನು ನಿರ್ಮಾಪಕ ಬಾ.ಮಾ ಹರೀಶ್ ಪುತ್ರ ಉಲ್ಲಾಸ್ ನಿರ್ಮಿಸಿದ್ದು ವಿದ್ಯಾರ್ಥಿ ಲೋಹಿತ್ ಪ್ರಕಾಶ್, ಆ್ಯಕ್ಷನ್ ಕಟ್ ಹೇಳಿದ್ದಾರೆ. ಈ ಮಕ್ಕಳು ಇದಕ್ಕೂ ಮುನ್ನ ಮೊಬೈಲ್ನಲ್ಲಿ ಕಿರುಚಿತ್ರವನ್ನು ಶೂಟ್ ಮಾಡಿದ್ದರು. ಇದರಿಂದ ಸ್ಫೂರ್ತಿಗೊಂಡ ಉಲ್ಲಾಸ್ ಈ ಕಿರುಚಿತ್ರವನ್ನು ನಿರ್ಮಿಸಿದ್ದಾರೆ. ಇಂದು ಬೆಳಗ್ಗೆ 11 ಗಂಟೆಗೆ ಈ ಸಿನಿಮಾ ಬೆಂಗಳೂರಿನ ನವರಂಗ್ ಚಿತ್ರಮಂದಿರದಲ್ಲಿ ಪ್ರದರ್ಶನವಾಗಲಿದೆ.