ಕರ್ನಾಟಕ

karnataka

ETV Bharat / sitara

ಫುಲ್​​​​​ಟೈಮ್​​​ ಕಾಮಿಡಿ ಹೀರೋ ಆಗಿ ಚಿಕ್ಕಣ್ಣ ಎಂಟ್ರಿ.. ಸಿನಿಮಾ ಟೈಟಲ್​ ಏನ್​ ಗೊತ್ತಾ? - ಫುಲ್​​​​​ಟೈಮ್​​​ ಕಾಮಿಡಿ ಹೀರೋ ಆಗಿ ಚಿಕ್ಕಣ್ಣ

ಹೆಬ್ಬುಲಿ, ರಾಬರ್ಟ್ ಸಿನಿಮಾಗಳ ನಿರ್ಮಾಪಕ ಉಮಾಪತಿ ಈ ಸಿನಿಮಾವನ್ನು ನಿರ್ಮಾಣ ಮಾಡುತ್ತಿದ್ದಾರೆ. ಈ ಹಿಂದೆ ಚಿಕ್ಕಣ್ಣ ಹಾಗು ನಿರ್ದೇಶಕ ಮಂಜು ಮಾಂಡವ್ಯ ಜೊತೆ ಸಿನಿಮಾ ಮಾತುಕತೆ ಆಗಿತ್ತು. ಆದರೆ ಮಂಜು ಮಾಂಡವ್ಯ ಉಪೇಂದ್ರ ಸಿನಿಮಾದಲ್ಲಿ ಬ್ಯುಸಿ ಇರುವ ಕಾರಣ, ಈಗ ಚಂದ್ರಮೋಹನ್​​​ಗೆ ಚಿಕ್ಕಣ್ಣನ ಸಿನಿಮಾ ನಿರ್ದೇಶನ ಮಾಡಲು ಅವಕಾಶ ಸಿಕ್ಕಿದೆ.

chikkanna-turned-as-a-full-time-comedy-hero-dot-new-movie-launched
ಫುಲ್​​​​​ಟೈಮ್​​​ ಕಾಮಿಡಿ ಹೀರೋ ಆಗಿ ಚಿಕ್ಕಣ್ಣ ಎಂಟ್ರಿ..ಸಿನಿಮಾ ಟೈಟಲ್​ ಏನ್​ ಗೊತ್ತಾ..?

By

Published : Oct 19, 2020, 2:09 PM IST

ಈ ಸಿನಿಮಾ ಅನ್ನೋ ಗ್ಲ್ಯಾಮರ್ ಲೋಕದಲ್ಲಿ ಕಣ್ಣು ಮುಚ್ಚಿ, ಕಣ್ಣು ಬಿಡುವಷ್ಟರಲ್ಲಿ ಏನು ಬೇಕಾದರೂ ಆಗಿರುತ್ತೆ. ಅಂತೆಯೇ ಕನ್ನಡ ಚಿತ್ರರಂಗದಲ್ಲಿ ಹಾಸ್ಯ ಕಲಾವಿದರಾಗಿ ಬಂದು ಹೀರೋಗಳು ಆಗಿರುವ ಉದಾಹರಣೆ ಸಾಕಷ್ಟಿವೆ.

ಈ ಸಾಲಿಗೆ ಹೊಸದಾಗಿ ಹಾಸ್ಯ ನಟ ಚಿಕ್ಕಣ್ಣ ಹೊಸದಾಗಿ ಸೇರ್ಪಡೆಗೊಂಡಿದ್ದಾರೆ. ಫುಲ್​​​ಟೈಮ್​ ಕಾಮಿಡಿ ಚಿತ್ರದ ಹೀರೋ ಆಗಿ ಚಿಕ್ಕಣ್ಣ ನಟಿಸಲಿದ್ದು, ಚಿತ್ರಕ್ಕೆ ‘ಉಪಾಧ್ಯಕ್ಷ’ ಎಂದು ಹೆಸರಿಡಲಾಗಿದೆ. ಈ ಚಿತ್ರದ ಟೈಟಲ್ ಹಾಗೂ ಸ್ಕ್ರಿಪ್ಟ್ ಪೂಜೆಯನ್ನು ಸಂಗೀತ ನಿರ್ದೇಶಕ ಅರ್ಜುನ್ ಜನ್ಯರ ಸ್ಟುಡಿಯೋದಲ್ಲಿ ಸರಳವಾಗಿ ನೆರವೇರಿಸಲಾಗಿದೆ. ಬಾಂಬೆ ಮಿಠಾಯಿ, ಡಬಲ್ ಇಂಜಿನ್ ಸಿನಿಮಾಗಳನ್ನು ನಿರ್ದೇಶನ ಮಾಡಿರುವ ಚಂದ್ರಮೋಹನ್, ಈ ಚಿತ್ರಕ್ಕೆ ಆ್ಯಕ್ಷನ್ ಕಟ್ ಹೇಳುತ್ತಿದ್ದಾರೆ‌.

ಚಿತ್ರತಂಡದಿಂದ ಟೈಟಲ್ ರಿವೀಲ್​​​​

ಹೆಬ್ಬುಲಿ, ರಾಬರ್ಟ್ ಸಿನಿಮಾಗಳ ನಿರ್ಮಾಪಕ ಉಮಾಪತಿ ಈ ಸಿನಿಮಾವನ್ನು ನಿರ್ಮಾಣ ಮಾಡುತ್ತಿದ್ದಾರೆ. ಈ ಹಿಂದೆ ಚಿಕ್ಕಣ್ಣ ಹಾಗೂ ನಿರ್ದೇಶಕ ಮಂಜು ಮಾಂಡವ್ಯ ಜೊತೆ ಸಿನಿಮಾ ಮಾತುಕತೆ ಆಗಿತ್ತು. ಆದರೆ ಮಂಜು ಮಾಂಡವ್ಯ ಉಪೇಂದ್ರ ಸಿನಿಮಾದಲ್ಲಿ ಬ್ಯುಸಿ ಇರುವ ಕಾರಣ, ಈಗ ಚಂದ್ರಮೋಹನ್​​​ಗೆ ಚಿಕ್ಕಣ್ಣನ ಸಿನಿಮಾ ನಿರ್ದೇಶನ ಮಾಡಲು ಅವಕಾಶ ಸಿಕ್ಕಿದೆ.

ಚಿತ್ರತಂಡದಿಂದ ಟೈಟಲ್ ರಿವೀಲ್​​​​

ಸದ್ಯ ಸ್ಕ್ರಿಪ್ಟ್ ಪೂಜೆ ಹಾಗೂ ಚಿತ್ರದ ಟೈಟಲ್ ರಿವೀಲ್ ಮಾಡಲಾಗಿದೆ. ಇನ್ನು ಚಿಕ್ಕಣ್ಣನಿಗೆ ದೊಡ್ಡ ಮಟ್ಟದ ಖ್ಯಾತಿ ತಂದುಕೊಟ್ಟ ಪಾತ್ರದ ಹೆಸರನ್ನು ಶೀರ್ಷಿಕೆ ಮಾಡಿಕೊಂಡಿರುವುದು ಮತ್ತೊಂದು ವಿಶೇಷ. ಚಿತ್ರಕ್ಕೆ ಅರ್ಜುನ್ ಜನ್ಯ ಸಂಗೀತ ನೀಡುತ್ತಿದ್ದಾರೆ. ಸರಳವಾಗಿ ಪೂಜೆ ಮುಗಿಸಿ ಚಿತ್ರದ ಟೈಟಲ್ ಅನಾವರಣ ಮಾಡಿರುವ ಚಿತ್ರತಂಡ, ಸದ್ಯದಲ್ಲೇ ಚಿತ್ರದ ನಾಯಕಿ ಯಾರು? ಚಿಕ್ಕಣ್ಣ ಜೊತೆಗೆ ಇನ್ನುಳಿದ ಪಾತ್ರಗಳು ಯಾರೆಲ್ಲ ಇರ್ತಾರೆ ಎಂಬುದನ್ನು ರಿವೀಲ್ ಮಾಡಲಿದೆ.

ಸ್ಕ್ರಿಪ್ಟ್​​​​ ಪೂಜೆ ನೆರವೇರಿಸಿದ ಚಿತ್ರತಂಡ

ABOUT THE AUTHOR

...view details