ಇತ್ತೀಚೆಗೆ ಬಿಡುಗಡೆಯಾಗಿರುವ ಚಪಾಕ್ ಸಿನಿಮಾದ ಟ್ರೇಲರ್ ನೋಡಿ ಈ ಹಿಂದೆ ನಮ್ಮ ಕುಟುಂಬಕ್ಕೆ ಆದ ನೋವು ನೆನಪಾಯಿತು ಎಂದು ಕಂಗನಾ ರನೌತ್ ಟ್ವೀಟ್ ಮಾಡಿದ್ದಾರೆ.
ಹೌದು, ಈ ಹಿಂದೆ ಕಂಗನಾ ರನೌತ್ ಸಹೋದರಿ ರಂಗೋಲಿ ಮೇಲೆ ಆ್ಯಸಿಡ್ ದಾಳಿಯಾಗಿತ್ತು. ಆ ವೇಳೆ ಕಂಗನಾ ಮತ್ತು ಕುಟುಂಬ ನೋವಿನಿಂದ ನಲುಗಿತ್ತು. ಆ ಕೆಟ್ಟ ದಿನಗಳನ್ನು ನೆನಪಿಸಿಕೊಂಡಿರುವ ಕಂಗನಾ ರನೌತ್, ಈ ಸಿನಿಮಾದಲ್ಲಿ ಅಭಿನಯ ಮಾಡುತ್ತಿರುವ ದೀಪಿಕಾ ಪಡುಕೋಣೆ ಮತ್ತು ನಿರ್ದೇಶನ ಮಾಡುತ್ತಿರುವ ಮೇಘನಾ ಗುಲ್ಜಾನ್ಗೆ ಧನ್ಯವಾದ ತಿಳಿಸಿದ್ದಾರೆ.