ಬಾಲಿವುಡ್ನ ಇತ್ತೀಚಿನ ಹಲವು ಸಿನಿಮಾಗಳು ನೈಜ ಘಟನೆಯನ್ನು ಆಧರಿಸಿ ನಿರ್ಮಾಣವಾಗುತ್ತಿವೆ. ಇದೀಗ ಇದೇ ಸಾಲಿಗೆ ನಿಲ್ಲಲು ದೀಪಿಕ ಪಡುಕೋಣೆ ನಟಿಸುತ್ತಿರುವ 'ಚಪಾಕ್' ಎಂಬ ಸಿನಿಮಾ ಬರುತ್ತಿದೆ. ಈ ಸಿನಿಮಾದ ಟ್ರೇಲರ್ ರಿಲೀಸ್ ಆಗಿದೆ.
ಹೌದು ದೆಹಲಿಯಲ್ಲಿ 2005ರಲ್ಲಿ ಲಕ್ಷ್ಮಿ ಎಂಬುವವರ ಮೇಲೆ ಆಕೆ ಪರಿಚಯದವರೇ ಆ್ಯಸಿಡ್ ದಾಳಿ ಮಾಡಿದ್ದರು. ಇದಾದ ಮೇಲೆ ತನ್ನ ಜೀವನಕ್ಕಾಗಿ ಲಕ್ಷ್ಮಿ ಅಗರ್ವಾಲ್ ತುಂಬಾ ಹೋರಾಟ ಮಾಡಿದ್ದರು. ನ್ಯಾಯಕ್ಕಾಗಿ ಹೋರಾಟ ಮಾಡಿದ ಲಕ್ಷ್ಮಿ ಜೀವನವನ್ನೇ ಆಧಾರವಾಗಿಟ್ಟುಕೊಂಡು ಚಪಾಕ್ ಸಿನಿಮಾವನ್ನು ಮಾಡಲಾಗುತ್ತಿದೆ.