ಕರ್ನಾಟಕ

karnataka

ETV Bharat / sitara

ಮಾಂಗಲ್ಯ ಕಟ್ಟದೇ ಸರಳವಾಗಿ ಮದುವೆಯಾದ ನಟ ಚೇತನ್​​! - Chethan megha Rigister marriage

ಚೇತನ್ ತನ್ನ ಪ್ರೇಯಸಿ ಮೇಘಾ ಜೊತೆ ಸರಳವಾಗಿ ರಿಜಿಸ್ಟರ್ ಮ್ಯಾರೇಜ್ ಆಗಿದ್ದಾರೆ. ವಿಶೇಷ ಅಂದ್ರೆ ಮಾಂಗಲ್ಯ ಧಾರಣೆ ಕೂಡ ಮಾಡದೆ ಸಂವಿಧಾನ ಓದಿ ಮೇಘ ಜೊತೆ ಚೇತನ್​ ಸಪ್ತಪದಿ ತುಳಿದಿದ್ದಾರೆ.

Chethan megha Rigister marriage
ಮಾಂಗಲ್ಯ ಕಟ್ಟದೇ ಸರಳವಾಗಿ ಮದುವೆಯಾದ ನಟ ಚೇತನ್​​!

By

Published : Feb 1, 2020, 5:14 PM IST

ನಟ ಚೇತನ್ ತನ್ನ ಪ್ರೇಯಸಿ ಮೇಘಾ ಜೊತೆ ಸರಳವಾಗಿ ರಿಜಿಸ್ಟರ್ ಮ್ಯಾರೇಜ್ ಆಗಿದ್ದಾರೆ. ವಿಶೇಷ ಅಂದ್ರೆ ಮಾಂಗಲ್ಯ ಧಾರಣೆ ಕೂಡ ಮಾಡದೆ ಸಂವಿಧಾನ ಓದಿ ಮೇಘಾ ಜೊತೆ ಸಪ್ತಪದಿ ತುಳಿದಿದ್ದಾರೆ. ಇನ್ನು ಚೇತನ್ ಮೇಘಾ ಮದುವೆಯಲ್ಲಿ ಚೇತನ್​ ಕುಟುಂಬದವರು, ಮೇಘಾ ಕುಟುಂಬದವರು ಹಾಗೂ ಚೇತನ್​ ಅಮೆರಿಕಾ ಸ್ನೇಹಿತರು ಭಾಗಿಯಾಗಿದ್ರು.

ಮಾಂಗಲ್ಯ ಕಟ್ಟದೇ ಸರಳವಾಗಿ ಮದುವೆಯಾದ ನಟ ಚೇತನ್​​!

ನಂತರ ಈಟಿವಿ ಭಾರತ ಜೊತೆಗೆ ಮಾತನಾಡಿದ ನವ ವಧು-ವರರು ಸರಳ ವಿವಾಹವಾಗಿದ್ದಕ್ಕೆ ಸಂತಸವನ್ನು ಹಂಚಿಕೊಂಡ್ರು. ನಾಳೆ ನಡೆಯುವ ಸಂತೋಷ ಕೂಟಕ್ಕೆ ಬರುವ ಎಲ್ಲರಿಗೂ ಸಂವಿಧಾನದ ಓದು ಪುಸ್ತಕವನ್ನು ಉಡುಗೊರೆ ನೀಡುತ್ತಿದ್ದೇವೆ ಎಂದು ಚೇತನ್ ಹೇಳಿದ್ರು.

ರೇಷ್ಮೆ ಪಂಚೆ, ರೆಷ್ಮೆ ಶರ್ಟ್ ಧರಿಸಿದ್ದ ಚೇತನ್ ರೈತರನ್ನು ಪ್ರತಿಬಿಂಬಿಸುವ ಹಸಿರು ಶಾಲು ತೊಟ್ಟಿದ್ರು. ನಾವು ಎರಡು ವರ್ಷದ ಹಿಂದೆಯೆ ಈ ಸರಳ ವಿವಾಹವಾಗಲು ಪ್ಲಾನ್​​ ಮಾಡಿಕೊಂಡಿದ್ದೆವು. ಅದೇ ರೀತಿ ಈಗ ರಿಜಿಸ್ಟರ್ ಮ್ಯಾರೇಜ್ ಆಗಿದ್ದೇವೆ. ಕರ್ನಾಟಕ ಹಾಗೂ ಕನ್ನಡ ಭಾಷೆಯ ಮೇಲೆ ನನಗೆ ತುಂಬಾ ಗೌರವವಿದೆ ಎಂದು ಮೇಘಾ ತಮ್ಮ ಸಂತಸವನ್ನು ಹಂಚಿಕೊಂಡರು.

ನಾಳೆ ಚೇತನ್-ಮೇಘಾ ಅನಾಥಾಶ್ರಮದಲ್ಲಿ ಮಕ್ಕಳೊಂದಿಗೆ ವಿಶೇಷ ಕಾರ್ಯಕ್ರಮ ನಡೆಸುವ ಮೂಲಕ ಸಂತೋಷ ಕೂಟ ಏರ್ಪಡಿಸಿದ್ದಾರೆ. ಈ ಕಾರ್ಯಕ್ರಮಕ್ಕೆ ಚಿತ್ರರಂಗದ ಗಣ್ಯರು ಹಾಗೂ ರಾಜಕಾರಣಿಗಳು ಆಗಮಿಸಲಿದ್ದಾರೆ.

ABOUT THE AUTHOR

...view details