ಕನ್ನಡ ಚಿತ್ರರಂಗದಲ್ಲಿ ಡ್ರಗ್ಸ್ ಜಾಲದ ನಂಟು ಇರುವ ಬಗ್ಗೆ ಆರೋಪ-ಪ್ರತ್ಯಾರೋಪಗಳು ಕೇಳಿ ಬರುತ್ತಿವೆ. ಇದರ ಬೆನ್ನಲ್ಲೇ ಆ ದಿನಗಳು ಸಿನಿಮಾ ಖ್ಯಾತಿಯ ಚೇತನ್ ಸ್ಟಾರ್ ನಟರ ಜಾಹೀರಾತಿನ ಬಗ್ಗೆ ಪ್ರಶ್ನೆ ಮಾಡಿದ್ದಾರೆ.
ಸ್ಟಾರ್ ನಟರ ಜಾಹೀರಾತಿನ ಬಗ್ಗೆ ಆ ದಿನಗಳು ಚೇತನ್ ಪ್ರಶ್ನೆ.. ಚಿಂತನೆ ಮಾಡಬೇಕಲ್ವೇ!? - ಚೇತನ್
ತಮ್ಮ ಫೇಸ್ಬುಕ್ನಲ್ಲಿ ಈ ಬಗ್ಗೆ ಬರೆದುಕೊಂಡಿರುವ ಅವರು, ಕೇವಲ ಹಣಕ್ಕಾಗಿ ಮದ್ಯ, ಗುಟ್ಕಾ, ಜೂಜು ಬಗ್ಗೆ ಜಾಹೀರಾತು ನೀಡುವ ಸ್ಟಾರ್ಗಳದ್ದೂ ದುಷ್ಕೃತ್ಯವಲ್ಲವೇ? ಯಾಕೆ ಅವರ ಮೇಲೆ ಬೆರಳು ತೋರಿಸದಿರುವುದು, ಅದು ಮೋಸ ಅಲ್ಲವೇ..
ತಮ್ಮ ಫೇಸ್ಬುಕ್ನಲ್ಲಿ ಈ ಬಗ್ಗೆ ಬರೆದುಕೊಂಡಿರುವ ಅವರು, ಕೇವಲ ಹಣಕ್ಕಾಗಿ ಮದ್ಯ, ಗುಟ್ಕಾ, ಜೂಜು ಬಗ್ಗೆ ಜಾಹೀರಾತು ನೀಡುವ ಸ್ಟಾರ್ಗಳದ್ದೂ ದುಷ್ಕೃತ್ಯವಲ್ಲವೇ? ಯಾಕೆ ಅವರ ಮೇಲೆ ಬೆರಳು ತೋರಿಸದಿರುವುದು, ಅದು ಮೋಸ ಅಲ್ಲವೇ ಎಂದು ನಟ ಚೇತನ್ ಪ್ರಶ್ನೆ ಮಾಡಿದ್ದಾರೆ.
ಇನ್ನು, ಇವರು ಸಾಮಾಜಿಕ ದುಷ್ಕೃತ್ಯಗಳ ರಾಯಭಾರಿಗಳಲ್ಲವೇ ಎಂದು ಸಾಮಾಜಿಕ ಜಾಲ ತಾಣದಲ್ಲಿ ಚೇತನ್ ಪ್ರಶ್ನೆ ಕೇಳಿದ್ದಾರೆ. ಚೇತನ್ ಅವರ ಪೋಸ್ಟ್‌ಗೆ ಸಾಕಷ್ಟು ಜನರು ಕೂಡ ಸಹಮತ ವ್ಯಕ್ತಪಡಿಸಿದ್ದಾರೆ. ನೀವು ನೂರಕ್ಕೆ ನೂರು ಉತ್ತಮ ಪ್ರಶ್ನೆಯನ್ನ ಕೇಳಿದ್ದೀರಾ, ಸಿನಿಮಾ ರಂಗದವರು ಸಮಾಜಕ್ಕೆ ಮಾದರಿಯಾಗಬೇಕು ಅಂತಾ ನೆಟ್ಟಿಗರು ಕಾಮೆಂಟ್ ಹಾಕುವ ಮೂಲಕ ಚೇತನ್ ಮಾತಿಗೆ ಸಪೋರ್ಟ್ ಮಾಡಿದ್ದಾರೆ.