ಬಹಳ ವರ್ಷಗಳ ಕಾಲ ಅಮೆರಿಕದಲ್ಲಿ ನೆಲೆಸಿದ್ದ ಚೇತನ್ ಬೆಂಗಳೂರಿಗೆ ಬಂದು ಸಿನಿಮಾಗಳಲ್ಲಿ ನಟಿಸುವುದು ಮಾತ್ರವಲ್ಲ ಸಾಮಾಜಿಕ ಕಾರ್ಯಗಳನ್ನು ಮಾಡುತ್ತಾ ಜನರ ಮನಸ್ಸಿನಲ್ಲಿ ಉತ್ತಮ ಸ್ಥಾನ ಪಡೆದಿದ್ದಾರೆ.
ಹೊಸ 'ಮಾರ್ಗ' ಕಂಡುಹಿಡಿಯಲು ಹೊರಟ ಆ ದಿನಗಳು ಖ್ಯಾತಿಯ ಚೇತನ್ - Puneet will clap for Marga film
ಸಾಮಾಜಿಕ ಕಾರ್ಯಗಳನ್ನು ಮಾಡುತ್ತಾ ಸಿನಿಮಾಗಳಲ್ಲಿ ಕೂಡಾ ಆ್ಯಕ್ಟಿವ್ ಇರುವ ನಟ ಚೇತನ್ ಇದೀಗ 'ಮಾರ್ಗ' ಎಂಬ ಹೊಸ ಚಿತ್ರದಲ್ಲಿ ನಟಿಸುತ್ತಿದ್ದಾರೆ. ನಾಳೆ ಈ ಚಿತ್ರದ ಮುಹೂರ್ತ ಬೆಂಗಳೂರಿನ ದೇವಸ್ಥಾನವೊಂದರಲ್ಲಿ ಜರುಗಲಿದೆ.
ಇದೀಗ ಚೇತನ್ ತಮ್ಮ ವೃತ್ತಿಜೀವನದಲ್ಲಿ ಹೊಸ ಮಾರ್ಗ ಹುಡುಕುತ್ತಿದ್ದಾರೆ. ಅದೇನು ಎಂದು ಆಶ್ಚರ್ಯ ಪಡಬೇಡಿ. ಚೇತನ್, 'ಮಾರ್ಗ' ಎಂಬ ಹೊಸ ಚಿತ್ರದಲ್ಲಿ ಅಭಿನಯಿಸುತ್ತಿದ್ದಾರೆ. ಶುಕ್ರವಾರ, ಅಂದರೆ ಗೌರಿ ಹಬ್ಬದಂದು 'ಮಾರ್ಗ' ಸಿನಿಮಾ ಸೆಟ್ಟೇರುತ್ತಿದೆ. ಪದ್ಮನಾಭನಗರದ ಶ್ರೀ ಬಾನಗಿರಿ ವರಸಿದ್ಧಿ ವಿನಾಯಕ ದೇವಸ್ಥಾನದಲ್ಲಿ ಚಿತ್ರದ ಮುಹೂರ್ತ ಜರುಗಲಿದ್ದು ಪವರ್ ಸ್ಟಾರ್ ಪುನೀತ್ ರಾಜ್ಕುಮಾರ್ ಹಾಗೂ ರಿಯಲ್ ಸ್ಟಾರ್ ಉಪೇಂದ್ರ ಈ ಚಿತ್ರಕ್ಕೆ ಚಾಲನೆ ನೀಡಲಿದ್ದಾರೆ. ಮಂಗಳ ಮೂರುತಿ ಪ್ರೊಡಕ್ಷನ್ಸ್ ಬ್ಯಾನರ್ ಅಡಿಯಲ್ಲಿ ಗೌತಮ್ ಅರ್ಪಿಸುವ ಈ ಚಿತ್ರಕ್ಕೆ ಮೋಹನ್ ಕಥೆ, ಚಿತ್ರಕಥೆ ಬರೆದು ನಿರ್ದೇಶನ ಮಾಡುತ್ತಿದ್ದಾರೆ. ಎಸ್.ಕೆ. ರಾವ್ ಛಾಯಾಗ್ರಹಣ, ಬಿ. ಅಜನೀಶ್ ಲೋಕನಾಥ್ ಸಂಗೀತ, ಶಂಕರ್ ರಾಮನ್ ಸಂಭಾಷಣೆ, ವಿಕ್ರಮ್ ಮೋರ್ ಸಾಹಸ, ಕಲೈ ನೃತ್ಯ ನಿರ್ದೇಶನ ಈ ಚಿತ್ರಕ್ಕಿದೆ.