ಒಳ್ಳೆಯ ಕಂಟೆಂಟ್ನ ಸಿನಿಮಾಗಳನ್ನು ಕನ್ನಡಿಗರೂ ಯಾವತ್ತೂ ಕೈ ಬಿಡಲ್ಲ ಎಂಬುದು ಸಾಕಷ್ಟು ಬಾರಿ ಸಾಬೀತಾಗಿದೆ. ಇದನ್ನು ಫ್ಯಾಮಿಲಿ ಡ್ರಾಮಾ ಹಿನ್ನೆಲೆಯ ಹಾಸ್ಯಮಯ 'ಕೆಮಿಸ್ಟ್ರಿ ಆಪ್ ಕರಿಯಪ್ಪ' ಸಿನಿಮಾ ಮತ್ತೊಮ್ಮೆ ನಿರೂಪಿಸಿದೆ.
ಕರಿಯಪ್ಪನ ಕೈ ಹಿಡಿದ ಕನ್ನಡಿಗರು...ಸಿನಿ ಪ್ರಿಯರಿಗೆ ಧನ್ಯವಾದ ತಿಳಿಸಿದ ಕೆಮಿಸ್ಟ್ರಿ ಕುಟುಂಬ - undefined
ಮುಖ್ಯಪಾತ್ರದಲ್ಲಿ ನಟ ತಬಲಾನಾಣಿ, ನಾಯಕನಾಗಿ ಕಿರಿಕ್ ಪಾರ್ಟಿಯ ಚಂದನ್ ಆಚಾರ್ಯ ಅಭಿನಯದ 'ಕೆಮಿಸ್ಟ್ರಿ ಆಪ್ ಕರಿಯಪ್ಪ' ಚಿತ್ರವನ್ನು ಕನ್ನಡ ಸಿನಿಪ್ರಿಯರು ಮನಸಾರಿ ಒಪ್ಪಿಕೊಂಡು ಅಪ್ಪಿಕೊಂಡಿದ್ದಾರೆ. ಈ ಚಿತ್ರ ಯಶಸ್ವಿಯಾಗಿ 63 ದಿನಗಳ ಕಾಲ ಥಿಯೇಟರ್ಗಳಲ್ಲಿ ಅಮೋಘ ಪ್ರದರ್ಶನ ಕಂಡಿದೆ.
![ಕರಿಯಪ್ಪನ ಕೈ ಹಿಡಿದ ಕನ್ನಡಿಗರು...ಸಿನಿ ಪ್ರಿಯರಿಗೆ ಧನ್ಯವಾದ ತಿಳಿಸಿದ ಕೆಮಿಸ್ಟ್ರಿ ಕುಟುಂಬ](https://etvbharatimages.akamaized.net/etvbharat/prod-images/768-512-3341096-thumbnail-3x2-chemistry.jpg)
ಕೆಮಿಸ್ಟ್ರಿ ಆಪ್ ಕರಿಯಪ್ಪ
ಮುಖ್ಯಪಾತ್ರದಲ್ಲಿ ನಟ ತಬಲಾನಾಣಿ, ನಾಯಕನಾಗಿ ಕಿರಿಕ್ ಪಾರ್ಟಿಯ ಚಂದನ್ ಆಚಾರ್ಯ ಅಭಿನಯದ 'ಕೆಮಿಸ್ಟ್ರಿ ಆಪ್ ಕರಿಯಪ್ಪ' ಚಿತ್ರವನ್ನು ಕನ್ನಡ ಸಿನಿಪ್ರಿಯರು ಮನಸಾರೆ ಒಪ್ಪಿಕೊಂಡು ಅಪ್ಪಿಕೊಂಡಿದ್ದಾರೆ. ಈ ಚಿತ್ರ ಯಶಸ್ವಿಯಾಗಿ 63 ದಿನಗಳ ಕಾಲ ಥಿಯೇಟರ್ಗಳಲ್ಲಿ ಅಮೋಘ ಪ್ರದರ್ಶನ ಕಂಡಿದೆ.
ಕೆಮಿಸ್ಟ್ರಿ ಆಪ್ ಕರಿಯಪ್ಪ' ಸಿನಿಮಾ ಸಕ್ಸಸ್ ಮೀಟ್
ಈ ಖುಷಿಯನ್ನು ಕರಿಯಪ್ಪನ ಕುಟಂಬ ಒಂದೇ ಕಡೆ ಸೇರಿ ಸಂಭ್ರಮಿಸಿತು. ನಿನ್ನೆ ಕಲಾವಿದ ಸಂಘದಲ್ಲಿ ನಡೆದ ಈ ಸಂತೋಷ ಕೂಟದಲ್ಲಿ ನಟ ನಿನಾಸಂ ಸತೀಶ್, ನಿರ್ದೇಶಕರಾದ ಚೇತನ್ ಕುಮಾರ್, ಮಹೇಶ್, ಸಂಗೀತ ನಿರ್ದೇಶಕ ನವೀನ್ ಸಜ್ಜು ಪಾಲ್ಗೊಂಡು, ಚಿತ್ರತಂಡಕ್ಕೆ ಶುಭಾಶಯ ತಿಳಿಸಿದರು.