ಕಳೆದ ವರ್ಷದ ‘ಕೆಮಿಸ್ಟ್ರಿ ಆಫ್ ಕರಿಯಪ್ಪ’ ನಿರ್ಮಾಪಕರ ಪಾಲಿಗೆ ‘ಏಕನಾಮಿಕ್ಸ್’ ಅಲ್ಲಿ ಸಹ ಗೆದ್ದಿತು. ಅರ್ಥಾತ್ ಕೆಮಿಸ್ಟ್ರಿ ಆಫ್ ಕರಿಯಪ್ಪ ಹಣ ತಂದುಕೊಟ್ಟಿತು. ಹಾಸ್ಯ ನಟ ತಬಲಾ ನಾಣಿ ಹಾಗೂ ಅಪೂರ್ವ ಜೋಡಿ ಸಹ ಹಿಟ್ ಆಗಿತ್ತು. ಈಗ ಮತ್ತೆ ಪ್ರೇಕ್ಷಕರನ್ನು ರಂಜಿಸಲು ಈ ಜೋಡಿ ಒಂದಾಗಿದೆ.
‘ಕೆಮಿಸ್ಟ್ರಿ ಆಫ್ ಕರಿಯಪ್ಪ’ ನಾಯಕ ಚಂದನ್ ಆಚಾರ್ ಹಾಗೂ ನಾಯಕಿ ಸಂಜನ ಆನಂದ್ ಸಹ ಈ ಚಿತ್ರದಲ್ಲಿ ಅತಿಥಿ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ.
ವಾಡಿಕೆ ಅಂತೆ ಹಿಟ್ ಆದ ಜೋಡಿಗಳನ್ನು ಮುಂದುವರೆಸಿವುದು ಮಾಯಲೋಕದ ನಿರ್ಧಾರ. ಟೆನ್ನಿಸ್ ಕೃಷ್ಣ ಹಾಗೂ ರೇಖಾ ದಾಸ್ ಕಾಮಿಡಿ ಜೋಡಿ 100 ಸಿನಿಮಾಗಳಲ್ಲಿ ಅಭಿನಯಿಸಿದ್ದು ಒಂದು ರೆಕಾರ್ಡ್ ಸಹ ಆಗಿದೆ. ಆದರೆ ಈಗ ತಬಲಾ ನಾಣಿ ಹಾಗೂ ಅಪೂರ್ವ ಜೋಡಿ ಮತ್ತೆ ‘ಪ್ರೆಸೆಂಟ್ ಪ್ರಪಂಚ 0% ಲವ್’ ಚಿತ್ರದಲ್ಲೂ ತಮ್ಮ ಕೆಮೆಸ್ಟ್ರಿ ಮುಂದುವರೆಸಲಿದೆ.
ತಬಲಾ ನಾಣಿ ಅವರ ಪಾತ್ರವನ್ನು ಈ ‘ಪ್ರೆಸೆಂಟ್ ಪ್ರಪಂಚ 0% ಲವ್’ ಚಿತ್ರದಲ್ಲಿ ಗೌಪ್ಯವಾಗಿ ಇಡಲಾಗಿದೆ. ಫ್ರೆಂಡ್ಸ್ ಮೀಡಿಯಾ ಪ್ರೊಡಕ್ಷನ್ ಅಡಿಯಲ್ಲಿ ಕೃಷ್ಣಮೂರ್ತಿ ಹಾಗೂ ರವಿಕುಮಾರ್ ಈ ಚಿತ್ರವನ್ನೂ ನಿರ್ಮಾಣ ಮಾಡಿದ್ದಾರೆ.