ಖಾಸಗಿ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಧಾರವಾಹಿಯಲ್ಲಿ ಬಂಡವಾಳ ಹೂಡಿದ್ದು, ಆದರೆ ಧಾರವಾಹಿ ನಿರ್ದೇಶಕ ಅರವಿಂದ್ ಕೌಶಿಕ್ ಮೋಸ ಮಾಡಿದ್ದಾರೆ ಎಂದು ನಗರ ಪೊಲೀಸ್ ಆಯುಕ್ತ ಭಾಸ್ಕರ್ ರಾವ್ ಅವರಿಗೆ ಧಾರವಾಹಿ ನಿರ್ಮಾಪಕ ರೋಹಿತ್ ದೂರು ನೀಡಿದ್ದಾರೆ.
ಧಾರಾವಾಹಿ ನಿರ್ದೇಶಕನಿಂದ ನಿರ್ಮಾಪಕನಿಗೆ ಮೋಸ : ಲಕ್ಷ ಲಕ್ಷ ವಂಚನೆ! - ಕಮಲಿ ಧಾರಾವಾಹಿ
ನನಗೆ ಧಾರಾವಾಹಿ ನಿರ್ದೇಶಕ ಅರವಿಂದ್ ಕೌಶಿಕ್ ಮೋಸ ಮಾಡಿದ್ದಾರೆಂದು ನಗರ ಪೊಲೀಸ್ ಆಯುಕ್ತ ಭಾಸ್ಕರ್ ರಾವ್ ಅವರಿಗೆ ಧಾರಾವಾಹಿ ನಿರ್ಮಾಪಕ ರೋಹಿತ್ ದೂರು ನೀಡಿದ್ದಾರೆ.
ಧಾರಾವಾಹಿ ನಿರ್ದೇಶಕನಿಂದ ನಿರ್ಮಾಪಕನಿಗೆ ಮೋಸ
ಧಾರಾವಾಹಿಗೆ ಮೊದಲು 73 ಲಕ್ಷ ಬಂಡವಾಳ ಹೂಡಿಕೆ ಮಾಡಿದ್ದು, ಹೂಡಿಕೆಯ ನಂತರ ಹೂಡಿದ ಲಾಭಾಂಶ ಹಾಗೂ ಬಂಡವಾಳ ವಾಪಸ್ ನೀಡಿಲ್ಲ. 28 ಮೇ 2018 ರಂದು ಧಾರಾವಾಹಿ ಶುರುವಾಗಿತ್ತು. ಸುಮಾರು 287 ಸಂಚಿಕೆಗಳ ಕಾಲ ನಾನೇ ನಿರ್ಮಾಪಕ ಎಂದು ತೋರಿಸಲಾಗಿತ್ತು.
ನಂತರ ಧಾರಾವಾಹಿಯ ಟೈಟಲ್ ಕಾರ್ಡ್ನಿಂದ ಧಾರಾವಾಹಿ ತಂಡ ನನ್ನ ಹೆಸರನ್ನ ತೆಗೆದು ನಿರ್ದೇಶಕ ಪತ್ನಿ ಹೆಸರಿನಲ್ಲಿ ಸತ್ವ ಮೀಡಿಯಾ ಎಂದು ಅಗ್ರಿಮೆಂಟ್ ಮಾಡಿಕೊಂಡು ಲಾಭ ಮಾಡಿದ್ದಾರೆ. ಹಾಗೆ
73 ಲಕ್ಷ ಹಣ ಹೂಡಿಕೆ ಮಾಡಿದ ನನ್ನ ಗಮನಕ್ಕೆ ತರದೇ ವಂಚನೆ ಮಾಡಿದ್ದಾರೆಂದು ದೂರಿನಲ್ಲಿ ತಿಳಿಸಿದ್ದಾರೆ.