ಚಾರ್ಲಿ 777 ಚಿತ್ರವು ಜನಪ್ರಿಯ ನಾಯಕ, ನಿರ್ದೇಶಕ ಹಾಗೂ ನಿರ್ಮಾಪಕ ರಕ್ಷಿತ್ ಶೆಟ್ಟಿ ಅವರ ಮುಂದಿನ ಸಿನಿಮಾವಾಗಿದೆ. ಅವರ ಜನುಮ ದಿನದಂದು ಚಿತ್ರದ ಮೋಷನ್ ಪೋಸ್ಟರ್ ಬಿಡುಗಡೆ ಮಾಡಲಾಗಿತ್ತು. ಕುತೂಹಲಕಾರಿ ಕಥಾಹಂದರ ಹೊಂದಿರುವ ಚಾರ್ಲಿ 777 ಚಿತ್ರೀಕರಣ ಚಾಲ್ತಿಯಲ್ಲಿದೆ.
ಕುತೂಹಲಗಳ ಹೊತ್ತು ತರುತ್ತಿದೆ ಶ್ರೀಮನ್ನಾರಾಯಣನ ಚಾರ್ಲಿ 777 ಸಿನಿಮಾದ ನಾಯಕಿ ಸಂಗೀತ ಶೃಂಗೇರಿಯವರು ‘ಹರ ಹರ ಮಹಾದೇವ’ ಪೌರಾಣಿಕ ಧಾರಾವಾಹಿಯಲ್ಲಿ ಅಭಿನಯಿಸುವುದರ ಮೂಲಕ ಪರದೆಯಲ್ಲಿ ಕಾಣಿಸಿಕೊಂಡರು. ಆನಂತರ ತೆಲುಗು ಸಿನಿಮಾ ಮನಮೂಲು ನಲ್ಲಿ ಅಭಿನಯಿಸಿದ ಮೇಲೆ ಕನ್ನಡದ ಎ+ ಸಿನಿಮಾದಲ್ಲಿ ನಟಿಸಿದ್ದರು. ಇದೀಗ ‘ಚಾರ್ಲಿ 777’ನಲ್ಲಿ ಈಕೆ ನಾಯಕಿಯಾಗಿ ಕಾಣಿಸಿಕೊಳ್ಳಲಿದ್ದಾಳೆ.
ಚಾರ್ಲಿಯಲ್ಲಿ ನಟಿ ಸಂಗೀತ ಶೃಂಗೇರಿ, ದೇವಕಿ ಹೆಸರಿನಲ್ಲಿ ಶಾಲೆ, ಕಾಲೇಜು, ಉದ್ಯೋಗ – ಹೀಗೆ ಮೂರು ಹಂತದಲ್ಲಿನ ಪಾತ್ರಗಳನ್ನು ನಿರ್ವಹಿಸಲಿದ್ದಾರೆ. ಕಿರಣ್ ರಾಜ್ ಕೆ. ಪ್ರಥಮ ನಿರ್ದೇಶನದ ಚಿತ್ರದಲ್ಲಿ ಒಂದು ಮೊಟ್ಟೆಯ ಕಥೆ ರಾಜ್ ಬಿ ಶೆಟ್ಟಿ ಸಹ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳದ್ದಾರೆ.
ಕುತೂಹಲಗಳ ಹೊತ್ತು ತರುತ್ತಿದೆ ಶ್ರೀಮನ್ನಾರಾಯಣನ ಚಾರ್ಲಿ 777 ಸದ್ಯ ರಾಜಸ್ಥಾನ, ಪಂಜಾಬ್, ಗುಜರಾತ್ ಸ್ಥಳಗಳಲ್ಲಿ ಚಿತ್ರಿಕರಣ ಮಾಡಲಾಗಿದೆ. ಲಾಕ್ ಡೌನ್ ತೆರೆವಾದ ನಂತರ ಶಿಮ್ಲಾ, ಕಾಶ್ಮೀರ, ಹಿಮಾಚಲ ಪ್ರದೇಶ, ಕೊಡೈಕ್ಯಾನಲ್ ಸುಂದರ ತಾಣಗಳಲ್ಲಿ 30 ದಿವಸಗಳ ಚಿತ್ರೀಕರಣ ಮಾಡಲಾಗುವುದು. ಚಿತ್ರದ ಮತ್ತೊಂದು ವಿಶೇಷ ಅಂದ್ರೆ ಇದರಲ್ಲಿ ಮನುಷ್ಯ ಹಾಗೂ ನಾಯಿಯ ಸಂಬಂಧವನ್ನು ಅಚ್ಚುಕಟ್ಟಾಗಿ ತೋರಿಸಲಾಗಿದೆ. ಇದಕ್ಕಾಗಿಯೇ ಒಂದು ತರಬೇತಿ ಪಡೆದ ಲಬ್ರಡಾರ್ ತಳಿಯ ನಾಯಿಯನ್ನೂ ಸಹ ಪಾತ್ರವರ್ಗದಲ್ಲಿರಿಸಲಾಗಿದೆ.
ಈ ಚಿತ್ರವನ್ನೂ ಪರಂವಾ ಸ್ಟುಡಿಯೋ ಹಾಗೂ ಪುಷ್ಕರ್ ಫಿಲ್ಮ್ಸ್ ಬ್ಯಾನ್ನರ್ ಅಡಿಯಲ್ಲಿ ರಕ್ಷಿತ್ ಶೆಟ್ಟಿ ಹಾಗೂ ಜಿ. ಎಸ್. ಗುಪ್ತಾ ನಿರ್ಮಾಣ ಮಾಡುತ್ತಿದ್ದಾರೆ. ಚಿತ್ರಕ್ಕೆ ನೋಬಿನ್ ಪಾಲ್ ಸಂಗೀತ, ರಾಜ್ ಬಿ ಶೆಟ್ಟಿ ಸಂಭಾಷಣೆ, ಅರವಿಂದ್ ಎಸ್ ಕಶ್ಯಪ್ ಛಾಯಾಗ್ರಹಣ, ಪ್ರತೀಕ್ ಶೆಟ್ಟಿ ಸಂಕಲನ, ಕಿರಣ್ ರಾಜ್, ಕಿರಣ್ ಕವೆರಪ್ಪ, ನಾಗರ್ಜುನ ಶರ್ಮ, ಕೀರ್ತನ್ ಬಂಡಾರಿ ಗೀತ ಸಾಹಿತ್ಯ ನೀಡಿದ್ದಾರೆ. ಪ್ರಗತಿ ರಿಷಬ್ ಶೆಟ್ಟಿ ವಸ್ತ್ರ ವಿನ್ಯಾಸ, ಉಲ್ಲಾಸ್ ಹೈದೂರ್ ಸಾಹಸ ನಿರ್ವಹಿಸಿದ್ದಾರೆ.