ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ 'ಲಕ್ಷ್ಮಿ ಬಾರಮ್ಮ' ಧಾರಾವಾಹಿಯಲ್ಲಿ ನಾಯಕ ಚಂದನ್ ಆಗಿ ಅಭಿನಯಿಸಿದ್ದ ಚಂದು ಗೌಡ ಸಿಹಿ ಸುದ್ದಿಯೊಂದನ್ನು ನೀಡಿದ್ದಾರೆ. ಚಂದು ಗೌಡ ದಾಂಪತ್ಯ ಜೀವನಕ್ಕೆ ಕಾಲಿರಿಸುತ್ತಿದ್ದಾರೆ. ಇದೇ ತಿಂಗಳು 29 ರಂದು ಬೆಂಗಳೂರಿನಲ್ಲಿ ಶಾಲಿನಿ ನಾರಾಯಣ್ ಅವರೊಂದಿಗೆ ಚಂದು ವೈವಾಹಿಕ ಜೀವನಕ್ಕೆ ಕಾಲಿಡುತ್ತಿದ್ದಾರೆ.
ಪ್ರೇಯಸಿಯೊಂದಿಗೆ ವೈವಾಹಿಕ ಜೀವನಕ್ಕೆ ಕಾಲಿಡುತ್ತಿರುವ ಚಂದು ಗೌಡ - ಲಕ್ಷ್ಮಿ ಬಾರಮ್ಮ ಖ್ಯಾತಿಯ ಚಂದುಗೌಡ
ನಾಲ್ಕು ವರ್ಷಗಳಿಂದ ಪ್ರೀತಿಸುತ್ತಿರುವ ಶಾಲಿನಿ ನಾರಾಯಣ್ ಎಂಬುವರನ್ನು ಚಂದುಗೌಡ ಮದುವೆಯಾಗುತ್ತಿದ್ದಾರೆ. ಇದೇ ತಿಂಗಳ 29 ರಂದು ಶಾಲಿನಿ ಹಾಗೂ ಚಂದು ಗೌಡ ಮದುವೆ ಬೆಂಗಳೂರಿನಲ್ಲಿ ಸರಳವಾಗಿ ಜರುಗುತ್ತಿದೆ.
ಕೊರೊನಾ ಭೀತಿ ಇರುವ ಕಾರಣ ಬಹಳ ಸರಳವಾಗಿ ಚಂದು ಗೌಡ ವಿವಾಹ ಕಾರ್ಯಕ್ರಮ ನಡೆಯಲಿದೆ. ಕಳೆದ 4 ವರ್ಷಗಳಿಂದ ಪ್ರೀತಿಸುತ್ತಿರುವ ಚಂದು ಹಾಗೂ ಶಾಲಿನಿ ಇದೀಗ ಹಿರಿಯರ ಒಪ್ಪಿಗೆ ಪಡೆದು ಮದುವೆಯಾಗಲಿದ್ದಾರೆ. ಚಂದುಗೆ ಸ್ನೇಹಿತರೊಬ್ಬರ ಮೂಲಕ ಶಾಲಿನಿ ಪರಿಚಯವಾಗಿತ್ತು. ಈ ಪರಿಚಯ ಸ್ನೇಹಕ್ಕೆ ತಿರುಗಿ ನಂತರ ಇಬ್ಬರೂ ಪ್ರೀತಿಸಲಾರಂಭಿಸಿದ್ದಾರೆ.
ಚಂದು ಸದ್ಯಕ್ಕೆ ತೆಲುಗಿನ 'ತ್ರಿನಯಿನಿ' ಧಾರಾವಾಹಿಯಲ್ಲಿ ನಾಯಕರಾಗಿ ಅಭಿನಯಿಸುತ್ತಿದ್ದಾರೆ. ಬ್ಯುಸಿ ಶೆಡ್ಯೂಲ್ ನಡುವೆ ಬಿಡುವು ಮಾಡಿಕೊಂಡು ಚಂದು ವೈವಾಹಿಕ ಜೀವನಕ್ಕೆ ಕಾಲಿಡುತ್ತಿದ್ದಾರೆ. ವಿವಾಹದ ನಂತರ ಯಾವುದೇ ಆರತಕ್ಷತೆ ಕಾರ್ಯಕ್ರಮವನ್ನು ಈ ಜೋಡಿ ಪ್ಲ್ಯಾನ್ ಮಾಡಿಲ್ಲ. ಕಿರುತೆರೆ ಜೊತೆಗೆ ಬೆಳ್ಳಿತೆರೆಯಲ್ಲೂ ಚಂದು ಬ್ಯುಸಿಯಾಗಿದ್ದಾರೆ. ದರ್ಶನ್ ಅಭಿನಯದ 'ರಾಬರ್ಟ್' ಸಿನಿಮಾದಲ್ಲಿ ನೆಗೆಟಿವ್ ರೋಲ್ನಲ್ಲಿ ಚಂದು ಕಾಣಿಸಿಕೊಂಡಿದ್ದಾರೆ. ಇದರ ಜೊತೆಗೆ ಕುಷ್ಕ, ಜಾಕ್ ಪಾಟ್, ಕಮರೊಟ್ಟು ಚೆಕ್ ಪೋಸ್ಟ್, ದ್ವಿಪಾತ್ರ, ಶ್ರೀ ಸಿನಿಮಾಗಳಲ್ಲೂ ಅವರು ನಟಿಸಿದ್ದಾರೆ.