ಕಲರ್ಸ್ ಕನ್ನಡ ವಾಹಿನಿಯಲ್ಲಿ ಕಳೆದ ಏಳು ವರುಷಗಳಿಂದ ಪ್ರಸಾರವಾಗುತ್ತಿದ್ದ ಲಕ್ಷ್ಮಿ ಬಾರಮ್ಮ ಧಾರಾವಾಹಿ ಮುಕ್ತಾಯ ಕಂಡಿರುವುದು ವೀಕ್ಷಕರಿಗೆಲ್ಲಾ ತಿಳಿದೇ ಇದೆ. ಲಕ್ಷ್ಮಿ ಬಾರಮ್ಮದಲ್ಲಿ ನಾಯಕನಾಗಿ ಅಭಿನಯಿಸಿದ್ದ ಚಂದು ಇದೀಗ ತೆಲುಗು ಕಿರುತೆರೆಗೆ ಪಾದಾರ್ಪಣೆ ಮಾಡಲಿದ್ದಾರೆ.
ತೆಲುಗು ಕಿರುತೆರೆಗೆ ಎಂಟ್ರಿ ಕೊಟ್ಟ ಲಕ್ಷ್ಮಿ ಬಾರಮ್ಮ ಧಾರಾವಾಹಿಯ ಚಂದು - ತೆಲುಗು ಕಿರುತೆರೆಗೆ ಎಂಟ್ರಿ ಕೊಟ್ಟ ಲಕ್ಷ್ಮಿ ಬಾರಮ್ಮ ಧಾರಾವಾಹಿಯ ಚಂದು
ಲಕ್ಷ್ಮಿ ಬಾರಮ್ಮ ಧಾರಾವಾಹಿ ಮುಕ್ತಾಯ ಕಂಡಿರುವುದು ವೀಕ್ಷಕರಿಗೆಲ್ಲಾ ತಿಳಿದೇ ಇದೆ. ಲಕ್ಷ್ಮಿ ಬಾರಮ್ಮದಲ್ಲಿ ನಾಯಕನಾಗಿ ಅಭಿನಯಿಸಿದ್ದ ಚಂದು ಇದೀಗ ತೆಲುಗು ಕಿರುತೆರೆಗೆ ಪಾದಾರ್ಪಣೆ ಮಾಡಲಿದ್ದಾರೆ.
ತೆಲುಗಿನ 'ತ್ರಿನೇನಿ' ಧಾರಾವಾಹಿಯಲ್ಲಿ ಲೀಡ್ ರೋಲ್ ಪ್ಲೇ ಮಾಡಲಿದ್ದಾರೆ. "ನನಗೆ ತಮಿಳು ಮತ್ತು ತೆಲುಗು ಭಾಷೆಯಿಂದ ಸಾಕಷ್ಟು ಅವಕಾಶಗಳು ಬರುತ್ತಿತ್ತು. ಇದೀಗ ನಾನು ತ್ರಿನೇನಿ ಧಾರಾವಾಹಿಯನ್ನು ಒಪ್ಪಿಕೊಂಡಿದ್ದೇನೆ. ತ್ರಿನೇನಿ ಧಾರಾವಾಹಿ ಪ್ರತಿಷ್ಠಿತ ಬ್ಯಾನರ್ನಿಂದ ಮೂಡಿ ಬರಲಿದೆ. ಅಲ್ಲದೆ ಎಲ್ಲದಕ್ಕಿಂತ ಮುಖ್ಯವಾಗಿ ನನಗೆ ಧಾರಾವಾಹಿಯ ಸ್ಟೋರಿ ಲೈನ್ ತುಂಬಾ ಇಷ್ಟವಾಗಿದೆ. ಆದ್ದರಿಂದ ಒಪ್ಪಿಕೊಂಡೆ" ಎಂದು ಚಂದು ಹೇಳಿದ್ದಾರೆ.
ತೆಲುಗು ಧಾರಾವಾಹಿ ಎಂದ ಮೇಲೆ ಶೂಟಿಂಗ್ ಎಲ್ಲಾ ದೂರದ ಹೈದರಾಬಾದ್ನಲ್ಲಿ ನಡೆಯುತ್ತದೆ. ಹೆಚ್ಚಿನ ಸಮಯ ಅಲ್ಲೇ ಕಳೆಯಬೇಕಾಗುತ್ತದೆ. "ನಾನು ತೆಲುಗು ಭಾಷೆಯ ಸೀರಿಯಲ್ನಲ್ಲಿ ನಟಿಸುತ್ತೇನೆ ನಿಜ. ಆದರೆ ನಾನೆಂದು ಕನ್ನಡ ಭಾಷೆಯನ್ನು ಮರೆಯುವುದಿಲ್ಲ ಅಂತ ಚಂದು ಹೇಳಿದ್ದಾರೆ.