ಕರ್ನಾಟಕ

karnataka

ETV Bharat / sitara

ಹೊರಗೆ ಬಂದ ಮೇಲೂ ಬಿಗ್​​ ಬಾಸ್​​​​​​​​​ ಮಂದಿಗೆ ಸಿಹಿ ಸುದ್ದಿ ಕೊಟ್ಟ ಚಂದನಾ! - ಚಂದನಾ ಇದೀಗ ನಿರೂಪಕಿ

ಕಲರ್ಸ್ ಕನ್ನಡ ವಾಹಿನಿಯಲ್ಲಿ ಆರಂಭವಾಗಲಿರುವ ಹೊಚ್ಚ ಹೊಸ ರಿಯಾಲಿಟಿ ಶೋ 'ಹಾಡು ಕರ್ನಾಟಕ'ದ ನಿರೂಪಕಿಯಾಗಿ ಚಂದದ ಗೊಂಬೆ ಚಂದನಾ ಕಾಣಿಸಿಕೊಳ್ಳಲಿದ್ದಾರೆ.

chandana hadu karnataka anchor
ಎಲಿಮಿನೇಟ್​​ ಆದಮೇಲೂ ಬಿಗ್​ ಬಾಸ್​​ ಮಂದಿಗೆ ಸಿಹಿ ಸುದ್ದಿ ಕೊಟ್ಟ ಚಂದನಾ

By

Published : Jan 18, 2020, 12:50 PM IST

ಬಿಗ್ ಬಾಸ್ ಸೀಸನ್ 7ರ ಸ್ಪರ್ಧಿಯಾಗಿ ದೊಡ್ಮನೆಗೆ ಎಂಟ್ರಿ ಕೊಟ್ಟಿದ್ದ ಚಂದನಾ, ಬಿಗ್​ ಬಾಸ್​​ ಮನೆಯಿಂದ ಹೊರ ಬಂದ ಮೇಲೆ ಇದೀಗ ಕನ್ನಡದ ರಿಯಾಲಿಟಿ ಶೋವೊಂದರ ನಿರೂಪಕಿಯಾಗುತ್ತಿದ್ದಾರೆ.

ಎಲಿಮಿನೇಟ್​​ ಆದ ಮೇಲೂ ಬಿಗ್​ ಬಾಸ್​​ ಮಂದಿಗೆ ಸಿಹಿ ಸುದ್ದಿ ಕೊಟ್ಟ ಚಂದನಾ

ಕಲರ್ಸ್ ಕನ್ನಡ ವಾಹಿನಿಯಲ್ಲಿ ಆರಂಭವಾಗಲಿರುವ ಹೊಚ್ಚ ಹೊಸ ರಿಯಾಲಿಟಿ ಶೋ 'ಹಾಡು ಕರ್ನಾಟಕ'ದ ನಿರೂಪಕಿಯಾಗಿ ಚಂದದ ಗೊಂಬೆ ಚಂದನಾ ಕಾಣಿಸಿಕೊಳ್ಳಲಿದ್ದಾರೆ. ಪುಟ್ಮಲ್ಲಿ ಧಾರಾವಾಹಿಯಲ್ಲಿ ನಾಯಕನ ತಂಗಿಯಾಗಿ ಕಿರುತೆರೆ ಯಾನ ಶುರು ಮಾಡಿದ್ದ ಚಂದನ ಮತ್ತೆ ರಾಜ ರಾಣಿಯ ಮೂಲಕ ನಾಯಕಿಯಾಗಿ ಬಡ್ತಿ ಪಡೆದಿದ್ದರು.

ಎಲಿಮಿನೇಟ್​​ ಆದ ಮೇಲೂ ಬಿಗ್​ ಬಾಸ್​​ ಮಂದಿಗೆ ಸಿಹಿ ಸುದ್ದಿ ಕೊಟ್ಟ ಚಂದನಾ

ದೊಡ್ಮನೆಯೊಳಗೆ ಹೋಗಿ ಸಂತಸ ಹಂಚಿಕೊಂಡ ಚುಕ್ಕಿ!

ಇನ್ನು ನಿರೂಪಕಿಯಾಗಿ ಆಯ್ಕೆಯಾದ ಮೇಲೆ ಮತ್ತೆ ಬಿಗ್​ ಬಾಸ್​​ ಮನೆಗೆ ಹೋಗಿ ಸದಸ್ಯರೊಂದಿಗೆ ಸಂತಸ ಹಂಚಿಕೊಂಡಿದ್ದಾರೆ. ಮನೆಗೆ ನಗುನಗುತ್ತ ಬಂದ ಚಂದನಾ ಎಲ್ಲರಿಗೂ ಒಂದು ಸಿಹಿ ಸುದ್ದಿ ಇದೆ. ಎಲ್ಲರೂ ಲಿವಿಂಗ್ ರೂಮ್​ಗೆ ಬನ್ನಿ ಎಂದು ಕರೆದರು. ನಂತರ ಕಲರ್ಸ್ ಕನ್ನಡ ವಾಹಿನಿಯಲ್ಲಿ ಆರಂಭವಾಗಲಿರುವ ಹೊಸ ಸಿಂಗಿಂಗ್ ಶೋ 'ಹಾಡು ಕರ್ನಾಟಕ'ದ ನಿರೂಪಣೆಯ ಅವಕಾಶ ದೊರೆತಿದೆ ಎಂದು ದೊಡ್ಮನೆಯ ಸದಸ್ಯರೊಂದಿಗೆ ಚಂದನಾ ಖುಷಿ ಹಂಚಿಕೊಂಡರು.

ಹೊಚ್ಚ ಹೊಸ ರಿಯಾಲಿಟಿ ಶೋ 'ಹಾಡು ಕರ್ನಾಟಕ'

ABOUT THE AUTHOR

...view details