ಕರ್ನಾಟಕ

karnataka

By

Published : May 28, 2021, 1:03 PM IST

ETV Bharat / sitara

ಚಂದನ್ ಶೆಟ್ಟಿಯ ಹೊಸ ಆಲ್ಬಂ ಸಾಂಗ್ 'ಸಲಿಗೆ' ರಿಲೀಸ್

ಕನ್ನಡದ ರ‍್ಯಾಪರ್‌ ಹಾಗೂ ಗೀತ ರಚನೆಕಾರ ಚಂದನ್ ಶೆಟ್ಟಿ ‘ಸಲಿಗೆ’ ಎಂಬ ಹೊಸ ಆಲ್ಬಂ ಸಾಂಗ್ ಬಿಡುಗಡೆ ಮಾಡಿದ್ದು, ಈ ಹಾಡನ್ನು ಕೆನಡಾದಲ್ಲಿ ಅದ್ಧೂರಿಯಾಗಿ ಶೂಟಿಂಗ್ ಮಾಡಲಾಗಿದೆ.

Chandan Shetty's new album Song Release
ಚಂದನ್ ಶೆಟ್ಟಿಯ ಹೊಸ ಆಲ್ಬಂ ಸಾಂಗ್ 'ಸಲಿಗೆ' ರಿಲೀಸ್

ಕನ್ನಡ ಚಿತ್ರರಂಗದಲ್ಲಿ ವಿಭಿನ್ನ ಹಾಡುಗಳ ಮೂಲಕ ತನ್ನದೇ ಛಾಪು ಮಾಡಿಸಿರುವ ರ್ಯಾಪರ್​​ ಚಂದನ್ ಶೆಟ್ಟಿ ಇಂದು 'ಸಲಿಗೆ' ಎಂಬ ವಿಭಿನ್ನ ಶೈಲಿಯ ಆಲ್ಬಂ ಸಾಂಗ್ ಬಿಡುಗಡೆ ಮಾಡಿದ್ದಾರೆ.

ನಿಖಿಲ್ ಜ್ಯೋಷಿ ಸಲಿಗೆ ಹಾಡಿಗೆ ಸಾಹಿತ್ಯ ಬರೆದಿದ್ದು, ಚಂದನ್ ಶೆಟ್ಟಿ ನಟಿಸಿ ನಿರ್ದೇಶನ ಮಾಡಿದ್ದಾರೆ. 2019ರಲ್ಲಿ ಕೆನಡಾಗೆ ಟೂರ್‌ ಹೋಗಿದ್ದ ವೇಳೆ ಈ ಹಾಡನ್ನು ಟೊರಾಂಟೋ, ಮಾಂಟ್ರಿಯಲ್ ಹಾಗೂ ನಯಾಗರಾ ಜಲಪಾತದ ಬಳಿ ಶೂಟಿಂಗ್ ಮಾಡಲಾಗಿತ್ತು. 3 ಪೆಗ್, ಚಾಕೊಲೇಟ್ ಗರ್ಲ್, ಟಕಿಲಾ, ಫೈರ್ ಮತ್ತು ಪಾರ್ಟಿ ಫ್ರೀಕ್ ಆಲ್ಬಂಗಿಂತ 'ಸಲಿಗೆ' ತುಂಬಾ ವಿಶಿಷ್ಟವಾಗಿದೆ.

ಜನರ ಅಭಿರುಚಿ ಬದಲಾಗುತ್ತಿರುತ್ತದೆ. ಮೊದಲು ಮೈಕಲ್ ಜಾಕ್ಸನ್, ನಂತರ ರೆಟ್ರೋ ಈಗ ಮತ್ತೆ ಫಂಕ್ ಹಾಡುಗಳನ್ನು ಕೇಳಲು ಬಯಸುತ್ತಾರೆ. ಹೀಗಾಗಿ, ಈ ಶೈಲಿಯಲ್ಲಿ ಸಲಿಗೆ ಆಲ್ಬಂ ಬಿಡುಗಡೆ ಮಾಡಲಾಗಿದೆ ಎಂದು ಚಂದನ್​ ತಿಳಿಸಿದ್ದಾರೆ.

ಓದಿ:ಯಶಸ್ವಿ ಮುನ್ನೂರು ಸಂಚಿಕೆ ಪೂರೈಸಿದ ನಾಗಿಣಿ 2 : ತ್ರಿಶೂಲ್ ಪಾತ್ರದಾರಿ ಏನೋ ಹೇಳಿದ್ದಾರೆ ನೋಡಿ?

ABOUT THE AUTHOR

...view details