ನಾವು ಮೊದಲ ಬಾರಿಗೆ ಒಬ್ಬರನೊಬ್ಬರು ನೋಡಿದ್ದು ಬಿಗ್ಬಾಸ್ನಲ್ಲಿ. ನಮ್ಮಿಬ್ಬರನ್ನು ಒಂದು ಮಾಡಿದ ಬಿಗ್ಬಾಸ್ಗೆ ಧನ್ಯವಾದಗಳು ಎಂದು ಸಂಗೀತ ನಿರ್ದೇಶಕ, ರ್‍ಯಾಪರ್ ಚಂದನ್ ಶೆಟ್ಟಿ ಹೇಳಿದ್ದಾರೆ.
ನಿವೇದಿತಾಳೊಂದಿಗೆ ಉಂಗುರ ಬದಲಿಸಿದ ಚಂದನ್ ಇವರಿಗೆ ಹೇಳಿದ್ರು ತುಂಬಾ ತುಂಬಾ ಧನ್ಯವಾದ! - ನಿಶ್ಚಿತಾರ್ಥ ಮಾಡಿಕೊಂಡ ಚಂದನ್ ಶೆಟ್ಟಿ , ನಿವೇದಿತಾ ಗೌಡ
ಬಿಗ್ಬಾಸ್ಗೆ ಹೋಗುವ ಮುನ್ನ ಒಬ್ಬರಿಗೊಬ್ಬರಿಗೆ ಪರಿಚಯ ಇರಲಿಲ್ಲ. ನಮ್ಮಿಬ್ಬರನ್ನೂ ಒಂದು ಮಾಡಿದ ಬಿಗ್ಬಾಸ್ಗೆ ಧನ್ಯವಾದಗಳು ಎಂದು ಚಂದನ್ ಶೆಟ್ಟಿ ಬಿಗ್ಬಾಸ್ ಕಾರ್ಯಕ್ರಮಕ್ಕೆ ಧನ್ಯವಾದ ಹೇಳಿದ್ದಾರೆ.
ಇಂದು ಮೈಸೂರಿನ ಖಾಸಗಿ ಹೋಟೆಲೊಂದರಲ್ಲಿ ಚಂದನ್ ಶೆಟ್ಟಿ ಹಾಗೂ ನಿವೇದಿತಾ ಗೌಡ ಶಾಸ್ತ್ರೋಕ್ತವಾಗಿ ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ. ಇಂದು ನಿಶ್ಚಿತಾರ್ಥಕ್ಕೆ ಒಳ್ಳೆಯ ಮುಹೂರ್ತ ಇದ್ದಿದ್ದರಿಂದ ನಮಗೆ ಇದ್ದ ಕಡಿಮೆ ಸಮಯದಲ್ಲಿ ಎಲ್ಲರಿಗೂ ಆಹ್ವಾನ ನೀಡಲಾಗಲಿಲ್ಲ. ಮದುವೆಗೆ ಎಲ್ಲರನ್ನೂ ಆಹ್ವಾನಿಸುತ್ತೇವೆ. ಮದುವೆ ಬಗ್ಗೆ ಪ್ಲ್ಯಾನ್ ಮಾಡುತ್ತಿದ್ದು ಶೀಘ್ರವೇ ಅದನ್ನೂ ಅನೌನ್ಸ್ ಮಾಡಲಿದ್ದೇವೆ. ಅಂದು ದಸರಾ ವೇದಿಕೆಯಲ್ಲಿ ನಾನು ಪ್ರಪೋಸ್ ಮಾಡಿದ್ದಷ್ಟೇ. ಆದರೆ ಇಂದು ನಾವಿಬ್ಬರೂ ಶಾಸ್ತ್ರಬದ್ಧವಾಗಿ ಎಂಗೇಜ್ಮೆಂಟ್ ಮಾಡಿಕೊಂಡಿದ್ದೇವೆ. ಬಿಗ್ಬಾಸ್ಗೆ ಹೋಗುವ ಮುನ್ನ ಒಬ್ಬರಿಗೊಬ್ಬರಿಗೆ ಪರಿಚಯ ಇರಲಿಲ್ಲ. ನಮ್ಮಿಬ್ಬರನ್ನೂ ಒಂದು ಮಾಡಿದ ಬಿಗ್ಬಾಸ್ಗೆ ಧನ್ಯವಾದಗಳು ಎಂದು ಚಂದನ್ ಶೆಟ್ಟಿ ಬಿಗ್ಬಾಸ್ ಕಾರ್ಯಕ್ರಮಕ್ಕೆ ಧನ್ಯವಾದ ಹೇಳಿದ್ದಾರೆ.