ಈಗಷ್ಟೇ ಮದುವೆಯಾಗಿ ಹನಿಮೂನ್ ಮುಗಿಸಿ ಬಂದ ಸೆಲೆಬ್ರಿಟಿ ದಂಪತಿ ರ‍್ಯಾಪರ್ ಚಂದನ್ ಶೆಟ್ಟಿ ಹಾಗೂ ನಿವೇದಿತಾ ಗೌಡ ಅವರಿಂದ ಕೊರೊನಾ ಹಾಡು ಸಿದ್ಧವಾಗಿದೆ.
ರ‍್ಯಾಪ್ ಸಾಂಗ್ ಮೂಲಕ ಕೊರೊನಾ ತಿಥಿ ಮಾಡಿದ ಚಂದನ್ ಶೆಟ್ಟಿ.. - ಚಂದನ್ ಶೆಟ್ಟಿ ಕೊರೊನಾ ಹಾಡು
ಚಂದನ್ ತಮ್ಮದೇ ಶೈಲಿಯಲ್ಲಿ ಕೊರೊನಾ ಕುರಿತಾಗಿ ರ‍್ಯಾಪ್ ಗೀತೆಯೊಂದನ್ನು ರಚಿಸಿದ್ದಾರೆ. ತಮ್ಮ ಪತ್ನಿ ನಿವೇದಿತಾ ಗೌಡ ಜತೆಗೆ ಚಂದನ್ ಈ ಹಾಡು ಹಾಡಿರೋದು ವಿಶೇಷ.
ಚಂದನ್ ಶೆಟ್ಟಿ ತಮ್ಮ ವಿಭಿನ್ನ ಶೈಲಿಯ ರ‍್ಯಾಪ್ ಸಾಂಗ್‍ಗಳ ಮೂಲಕ ಗಮನ ಸೆಳೆದವರು. ಇದೀಗ ಅದೇ ಚಂದನ್ ತಮ್ಮದೇ ಶೈಲಿಯಲ್ಲಿ ಕೊರೊನಾ ಕುರಿತಾಗಿ ರ‍್ಯಾಪ್ ಗೀತೆಯೊಂದನ್ನು ರಚಿಸಿದ್ದಾರೆ. ತಮ್ಮ ಪತ್ನಿ ನಿವೇದಿತಾ ಗೌಡ ಜತೆಗೆ ಚಂದನ್ ಈ ಹಾಡು ಹಾಡಿರೋದು ವಿಶೇಷ.
ಇದೇ ಹಾಡನ್ನು ತಮ್ಮ ಇನ್‍ಸ್ಟಾಗ್ರಾಮ್‍ನಲ್ಲಿ ಹಂಚಿಕೊಂಡಿರೋ ಚಂದನ್, ರ‍್ಯಾಪ್ ಸಾಂಗ್ ಮೂಲಕ ಜನರಿಗೆ ತಿಳಿ ಹೇಳಿದ್ದಾರೆ. 'ಕೊರೊನಾ.. ಕೊರೊನಾ.. ಕೊರೊನಾ.. ನಿಂಗೆ ಸದ್ಯದಲ್ಲೇ ಮಾಡ್ತೀವಿ ತಿಥಿನಾ.. ' ಎಂಬ ಸಾಲುಗಳು ವೈರಲ್ ಆಗ್ತಿವೆ. ಎಣ್ಣೆ ಸಪ್ಲೈ ಮಾಡ್ಬೋದೇನೋ ಕುಡುಕ್ರೂ ಸ್ವಲ್ಪ ತಡ್ಕಳಿ, ನಾವೆಲ್ಲಾ ಮನೆಲೇ ಇರೋಣ, ಮಿಸ್ ಆದರೆ ಡೈರೆಕ್ಟೂ ಸ್ಮಶಾನ ಎಂಬ ಸಾಲುಗಳು ಯುವಕರನ್ನು ಹೆಚ್ಚು ಸೆಳೆಯುತ್ತವೆ. ಇದರೊಂದಿಗೆ ಮಾಸ್ಕ್, ಗುಂಪು ಸೇರದಂತೆ ಕೇಳಿಕೊಂಡಿದ್ದಾರೆ. ಇದು ಮೇಡ್ ಇನ್ ಚೀನಾ ಎಂದು ಚಂದನ್ ಹಾಡಿದರೆ, ನಿವೇದಿತಾ ಡ್ಯಾನ್ಸ್ ಮಾಡುವ ಮೂಲಕ ಮನೊರಂಜನೆ ಹಾಗೂ ಅರಿವು ಮೂಡಿಸಿದ್ದಾರೆ.