ಸ್ಯಾಂಡಲ್ವುಡ್ನಲ್ಲಿ ಆಲ್ಬಂ ಸಾಂಗ್ಗಳ ಜಮಾನ ಶುರುವಾಗಿದೆ. ಸಿನಿಮಾ ಹಾಡುಗಳ ರೇಂಜ್ನಲ್ಲಿ ಆಲ್ಬಂ ಸಾಂಗ್ಗಳನ್ನ ಅದ್ದೂರಿ ವೆಚ್ಚದಲ್ಲಿ ಚಿತ್ರೀಕರಣ ಮಾಡಲಾಗುತ್ತಿದೆ.
ಹೊಸ ವರ್ಷಕ್ಕೆ ಪಾರ್ಟಿ ಫ್ರೀಕ್ ಎಂಬ ಆಲ್ಬಂ ಹಾಡಿನ ಮೂಲಕ ಚಂದನ್ ಶೆಟ್ಟಿ ಮಸ್ತ್ ಪಾರ್ಟಿ ಹಾಡನ್ನ ಮಾಡಿದ್ರು. ಇದೀಗ ನೋಡು ಶಿವ ಎಂಬ ಆಲ್ಬಂ ಸಾಂಗ್ ರೆಡಿ ಮಾಡುತ್ತಿದ್ದಾರೆ.
ಈ ಹಾಡಿನಲ್ಲಿ ಚಂದನ್ ಜತೆಗೆ 'ಜೊತೆ ಜೊತೆಯಾಲಿ' ಖ್ಯಾತಿಯ ಮೇಘಾ ಶೆಟ್ಟಿ ಮತ್ತು ಸುಮಿತ್ ಎಂ.ಕೆ ಮುಖ್ಯ ಭೂಮಿಕೆಯಲ್ಲಿ ಕಾಣಿಸಿಕೊಂಡಿದ್ದಾರೆ. ಈ ಹಾಡಿನಲ್ಲಿ ಚಂದನ್ ಶೆಟ್ಟಿ ಅತಿಥಿ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ.
ಇತ್ತೀಚೆಗೆ ಬನ್ನೇರುಘಟ್ಟ ರಸ್ತೆಯ ಎಎಂಸಿ ಇಂಜಿನಿಯರಿಂಗ್ ಕಾಲೇಜ್ ಆವರಣದಲ್ಲಿ 'ನೋಡು ಶಿವ' ಎಂಬ ಹಾಡಿನ ಚಿತ್ರೀಕರಣ ಮಾಡಲಾಗಿದೆ. ಈ ಆಲ್ಬಂನಲ್ಲಿ ನಟಿಸಿರುವ ಸುಮಿತ್ ಎಂ.ಕೆ ಈ ಹಿಂದೆ ಪರಾರಿ ಚಿತ್ರವನ್ನ ನಿರ್ಮಿಸಿದ್ದರು.
'ನೋಡು ಶಿವ' ಆಲ್ಬಂ ಸಾಂಗ್ ಶೂಟಿಂಗ್ನಲ್ಲಿ ಚಂದನ್ ಶೆಟ್ಟಿ : ವಿಡಿಯೋ ಸುಮಿತ್ ಅವರೇ ಗೀತ ರಚನೆ ಮಾಡಿದ್ದು, ಚಂದನ್ ಶೆಟ್ಟಿ ಸಂಗೀತ ನೀಡಿ, ಇಂಪಾಗಿ ಹಾಡಿದ್ದಾರೆ. ಸುಮಾರು 60 ನೃತ್ಯ ಕಲಾವಿದರು ಹಾಗೂ 150ಕ್ಕೂ ಅಧಿಕ ಸಹ ಕಲಾವಿದರು ಈ ಆಲ್ಬಂ ಸಾಂಗ್ನಲ್ಲಿ ಅಭಿನಯಿಸಿದ್ದು, ಕನ್ನಡದ ಮಟ್ಟಿಗೆ ಇಷ್ಟು ಅದ್ದೂರಿಯಾಗಿ ಮೂಡಿ ಬಂದಿರುವ ಮೊದಲ ಆಲ್ಬಂ ಸಾಂಗ್ ಇದಾಗಿದೆಯಂತೆ.
ಭಜರಂಗಿ ಮೋಹನ್ ಈ ಆಲ್ಬಂ ಹಾಡನ್ನ ನೃತ್ಯ ನಿರ್ದೇಶನ ಮಾಡಿದ್ದು, ಹೆಬ್ಬುಲಿ ಖ್ಯಾತಿಯ ಕರುಣಾಕರ್ ಅವರ ಛಾಯಾಗ್ರಹಣವಿದೆ. ಮೂರುವರೆ ನಿಮಿಷಗಳ ಅವಧಿಯ ಈ ಆಲ್ಬಂ ಸಾಂಗ್ ಇದೇ ತಿಂಗಳಲ್ಲಿ ಆನಂದ್ ಆಡಿಯೋ ಯೂಟ್ಯೂಬ್ ಚಾನಲ್ನಲ್ಲಿ ಬಿಡುಗಡೆಯಾಗಲಿದೆ.