ಬೆಂಗಳೂರು ಎಂಬ ಮೆಟ್ರೋಪಾಲಿಟನ್ ಸಿಟಿಯಲ್ಲಿ ಕನ್ನಡಿಗರು ಹಾಗು ಕನ್ನಡ ಭಾಷೆಯ ಮೇಲೆ ದೌರ್ಜನ್ಯ ಆಗೋದು ಹೊಸತೇನಲ್ಲ. ಯಾಕೆಂದರೆ ಬೆಂಗಳೂರಿನ ಕೆಲವೊಂದು ಮಾಲ್ಗಳಲ್ಲಿ ಕನ್ನಡಿಗರಿಗೆ ಆಗಾಗ ಅನ್ಯಾಯ ಆಗುತ್ತಿದೆ. ಬೆಂಗಳೂರಿನ ಬಹುತೇಕ ಪಬ್ಗಳಲ್ಲಿ ಕನ್ನಡ ಹಾಡುಗಳನ್ನು ಹಾಕೋದಿಲ್ಲ ಎಂಬ ಮಾತುಗಳು ಕೇಳಿ ಬಂದಿವೆ.
ಈ ಮಾತಿಗೆ ಪೂರಕವಾಗರ್ಯಾಪರ್ ಚಂದನ್ ಶೆಟ್ಟಿ ಧ್ವನಿ ಎತ್ತಿದ್ದಾರೆ. ಸಿಲಿಕಾನ್ ಸಿಟಿ ಪಬ್ವೊಂದರಲ್ಲಿ ಕನ್ನಡ ಹಾಡುಗಳನ್ನ ಹಾಕದೇ ಬರೀ ಇಂಗ್ಲಿಷ್ ಹಾಡುಗಳನ್ನು ಹಾಕುತ್ತಿದ್ದ ಪಬ್ಗೆ ಹೋಗಿದ್ದ ಕನ್ನಡ ಅಭಿಮಾನಿಗಳು ಕನ್ನಡ ಹಾಡು ಹಾಕುವಂತೆ ಹೇಳಿದ್ದಾರೆ. ಆದರೆ ಆ ಪಬ್ನ ಸಿಬ್ಬಂದಿ ಕನ್ನಡ ಹಾಡು ಹಾಕೋದಿಲ್ಲ ಅಂತಾ ಹೇಳಿದ್ದಾರೆ.