ಕರ್ನಾಟಕ

karnataka

ETV Bharat / sitara

'ಮುದ್ದು ಗೊಂಬೆ' ನಿವೇದಿತಾ ಗೌಡ ಮನೆಯಲ್ಲಿ ಚಪ್ಪರ ಶಾಸ್ತ್ರ ಸಂಭ್ರಮ - ಚಂದನ್​ ಶೆಟ್ಟಿ ಮತ್ತು ನಿವೇದಿತಾ ಗೌಡ ಮದುವೆ

ನಾಳೆ ನಿವೇದಿತಾ ಗೌಡ ಹಾಗೂ ಕನ್ನಡದ ರ್ಯಾಪರ್​ ಚಂದನ್ ಶೆಟ್ಟಿ ವಿವಾಹ ನಡೆಯಲಿದ್ದು, ಈ ಹಿನ್ನೆಲೆ ಇಂದು ನಿವೇದಿತಾ ಗೌಡ ಮನೆಯಲ್ಲಿ ಚಪ್ಪರದ ಕಾರ್ಯ ನೆರವೇರಿತು.

chandan sheet niveditha gowda marraige
ನಿವೇದಿತಾ ಗೌಡ ಮನೆಯಲ್ಲಿ ಚಪ್ಪರ ಶಾಸ್ತ್ರ

By

Published : Feb 25, 2020, 2:33 PM IST

ಮೈಸೂರು:ನಾಳೆ ನಿವೇದಿತಾ ಗೌಡ ಹಾಗೂ ಕನ್ನಡದ ರ್ಯಾಪರ್​ ಚಂದನ್ ಶೆಟ್ಟಿ ವಿವಾಹ ನಡೆಯಲಿದ್ದು, ಈ ಹಿನ್ನೆಲೆ ಇಂದು ನಿವೇದಿತಾ ಗೌಡ ಮನೆಯಲ್ಲಿ ಚಪ್ಪರದ ಕಾರ್ಯ ನೆರವೇರಿತು.

ನಾಳೆ ನಗರದ ಖಾಸಗಿ ಕಲ್ಯಾಣ ಮಂಟಪದಲ್ಲಿ ನಿವೇದಿತಾ ಗೌಡ ಹಾಗೂ ಚಂದನ್ ಶೆಟ್ಟಿ ವಿವಾಹ ನಡೆಯಲಿದ್ದು, ಮದುವೆ ಮುನ್ನಾ ದಿನ ಹೆಣ್ಣಿನ ಮನೆಯಲ್ಲಿ ನಡೆಸಲಾಗುವ ಚಪ್ಪರದ ಕಾರ್ಯಗಳು ಸಂಪ್ರದಾಯದಂತೆ ನೆರವೇರಿತು.

ಈ ಕಾರ್ಯದಲ್ಲಿ ಕುಟುಂಬಸ್ಥರು ಹಾಗೂ ಸಂಬಂಧಿಕರು ಪಾಲ್ಗೊಂಡು ಹೆಣ್ಣಿಗೆ ಆರತಿ ಶಾಸ್ತ್ರ ಮಾಡಿದರು. ಇಂದು ಚಪ್ಪರದ ಕಾರ್ಯ ಮುಗಿಸಿಕೊಂಡು ನಿವೇದಿತಾ ಕುಟುಂಬ ಕಲ್ಯಾಣ ಮಂಟಪಕ್ಕೆ ಹೊರಟಿದ್ದು, ಸಂಜೆ ಆರತಕ್ಷತೆ ಕಾರ್ಯ ನಡೆಯಲಿದೆ. ಕಾರ್ಯಕ್ರಮಕ್ಕೆ ಸ್ಯಾಂಡಲ್ ವುಡ್ ನಟ ನಟಿಯರು, ಸಂಗೀತ ನಿರ್ದೇಶಕರು ಸೇರಿದಂತೆ ಚಿತ್ರರಂಗದ ಹಲವರು ಭಾಗವಹಿಸುವ ನಿರೀಕ್ಷೆ ಇದೆ.

For All Latest Updates

ABOUT THE AUTHOR

...view details