ಕರ್ನಾಟಕ

karnataka

By

Published : Jan 5, 2020, 5:30 PM IST

ETV Bharat / sitara

ಬಿಗ್‌ಬಾಸ್​​​ ಚಂದನ್​ ಆಚಾರ್​ಗೆ ಹೆಚ್ಚುತ್ತಿದೆಯಾ ಜನಪ್ರಿಯತೆ?

ಬಿಗ್​ ಬಾಸ್​​ ಮನೆಯ ಚಂದನ್​ ಆಚಾರ್​​ ಜನಪ್ರಿಯತೆ ದಿನದಿಂದ ದಿನಕ್ಕೆ ಇಮ್ಮಡಿಯಾಗುತ್ತಿದೆ. 11 ಬಾರಿ ನಾಮಿನೇಟ್​​ ಆದ್ರೂ ಈ ವಾರ ಕಿಚ್ಚನಿಂದ ಚಪ್ಪಾಳೆ ಗಿಟ್ಟಿಸಿಕೊಂಡು ಎಲ್ಲರ ಹುಬ್ಬೇರುವಂತೆ ಮಾಡಿದ್ದಾರೆ.

chandan popularity  in big boss house
ಬಿಗ್​​​ ಬಾಸ್​​​ ಚಂದನ್​ ಆಚಾರ್

ಕೇವಲ ಎರಡು ವಾರ ಇರುವ ಬಿಗ್​ ಬಾಸ್​​ ಮನೆಯ ಸದಸ್ಯರ ಮೇಲೆ ಎಲ್ಲರ ಕಣ್ಣು ನೆಟ್ಟಿದೆ. ಬಿಗ್​​ ಬಾಸ್​ ಪ್ರಾರಂಭದ ಹಂತದಲ್ಲಿ ಯಾರೆಲ್ಲ ಸ್ಪರ್ಧಿಗಳು ಮನೆಯಲ್ಲಿ ಜಾಸ್ತಿ ದಿನ ಉಳಿಯುವುದಿಲ್ಲ ಎಂದು ಪ್ರೇಕ್ಷಕರು ಅಂದುಕೊಂಡಿದ್ದರೋ ಅವರೇ ಮನೆಯಲ್ಲಿ ಹೆಚ್ಚು ದಿನ ಉಳಿದುಕೊಳ್ಳುತ್ತಿದ್ದಾರೆ. ಅಂತವರ ಸಾಲಿನಲ್ಲಿ ಚಂದನ್​ ಆಚಾರ್​ ಕೂಡ ಒಬ್ಬರು.

ಪ್ರಾರಂಭದ ದಿನಗಳಿಂದ ಈವರೆಗೆ ಬರೋಬ್ಬರು 11 ಬಾರಿ ಚಂದನ್​ ನಾಮಿನೇಟ್​ ಆಗಿದ್ದಾರೆ. ಇವರ ವರ್ತನೆ ಬಿಗ್​ ಬಾಸ್​​ ಮನೆಯಲ್ಲಿ ಕೆಲ ಬಾರಿ ಕೋಲಾಹಲ ಉಂಟು ಮಾಡಿತ್ತು.

ವಿಶೇಷ ಏನಂದ್ರೆ ಈ ವಾರ ನಾಮೀನೇಟ್​​ ಆದ ಸ್ಪರ್ಧಿಗಳಲ್ಲಿ ಅತಿ ಹೆಚ್ಚು ವೋಟ್ ಪಡೆದ ಮೊದಲ ಸ್ಪರ್ಧಿ ಚಂದನ್. ಅಲ್ಲದೆ ಎಲಿಮೆನೇಷನ್​ನಿಂದ ಸೇಫ್​ ಆಗಿದ್ದಾರೆ. ಚಂದನ್ ಆಚಾರ್ ತಾಯಿ ಮನೆಯೊಳಗೆ ಬಂದ ನಂತರ ಚಂದನ್ ಕೊಂಚ ಬದಲಾಗಿದ್ದಾರೆ. ತಾಯಿ ಹೇಳಿದ ಮಾತುಗಳು ಮನಸ್ಸಿನಲ್ಲಿ ಬೇರೂರಿರುವ ಲಕ್ಷಣಗಳು ಗೋಚರವಾಗುತ್ತಿವೆ. ಇತ್ತೀಚೆಗೆ ಕೋಪ ಕಡಿಮೆ ಮಾಡಿಕೊಂಡು ಎಲ್ಲರೊಂದಿಗೆ ನಗುತ್ತಿರುವ ಚಂದನ್​​​ಗೆ ಈ ವಾರದ ಕಿಚ್ಚನ ಚಪ್ಪಾಳೆ ಸಹ ಸಿಕ್ಕಿದೆ.

ಬಿಗ್​ ಬಾಸ್​​ ಆಟ ಮುಗಿಯುತ್ತಾ ಬಂದಂತೆ ನೋಡುಗರ ಕುತೂಹಲ ಇಮ್ಮಡಿಯಾಗುತ್ತಿದೆ. ಇಷ್ಟು ದಿನಗಳ ಕಾಲ ಎಲ್ಲರನ್ನು ಕಾಡಿಸುತ್ತಿದ್ದ ಚಂದನ್​ ಆಚಾರ್​​ ಫೈನಲ್​ಗೂ ಬಂದ್ರೂ ಆಶ್ಚರ್ಯ ಇಲ್ಲ ಅಂತಾರೆ ಬಿಗ್​ ಬಾಸ್​​ ನೋಡುಗರು.

ABOUT THE AUTHOR

...view details