ರೀಲ್ ಲೈಫ್ನಲ್ಲಿ ಜೊತೆಯಾಗಿ ಕಾಣಿಸಿಕೊಂಡಿದ್ದ ಒಂದಷ್ಡು ಜೋಡಿಗಳು ರಿಯಲ್ ಲೈಫ್ನಲ್ಲೂ ಜೊತೆಯಾಗಿ ಕಾಣಿಸಿಕೊಂಡಿದ್ದಾರೆ. ಭವಾನಿ ಸಿಂಗ್- ಪಂಕಜಾ ಶಿವಣ್ಣ, ಅಮೃತಾ ರಾಮಮೂರ್ತಿ - ರಘು, ದೀಪಿಕಾ- ಆಕರ್ಷ್ ಹೀಗೆ ಕಿರುತೆರೆಯಲ್ಲಿ ರೀಲ್ ಲೈಫ್ನಲ್ಲಿ ಜೊತೆಯಾಗಿ ಕಾಣಿಸಿಕೊಂಡಿದ್ದ ಇವರು ರಿಯಲ್ ಲೈಫ್ನಲ್ಲೂ ಒಂದಾಗಿ ಜೀವನ ಸಾಗಿಸುತ್ತಿದ್ದಾರೆ. ಈ ಸಾಲಿಗೆ ಹೊಸದೊಂದು ಜೋಡಿ ಸೇರ್ಪಡೆಯಾಗಲಿದೆಯೇನೋ ಎಂಬ ಕುತೂಹಲ ವೀಕ್ಷಕರಿಗಿದೆ.
ಅಂದ ಹಾಗೇ ಆ ಜೋಡಿ ಬೇರಾರೂ ಅಲ್ಲ. ಕವಿತಾ ಗೌಡ ಮತ್ತು ಚಂದನ್ ಕುಮಾರ್. ಲಕ್ಷ್ಮಿ ಬಾರಮ್ಮ ಧಾರಾವಾಹಿಯಲ್ಲಿ ಚಂದು ಮತ್ತು ಚಿನ್ನು ಆಗಿ ತೆರೆ ಮೇಲೆ ಕಾಣಿಸಿಕೊಂಡಿರುವ ಕವಿತಾ ಗೌಡ ಮತ್ತು ಚಂದನ್ ಕುಮಾರ್ ಬಗ್ಗೆ ಇದೀಗ ಸಾಕಷ್ಟು ಗಾಸಿಪ್ಗಳು ಹರಿದಾಡುತ್ತಿದೆ. ಲಾಕ್ ಡೌನ್ ಸಮಯದಲ್ಲಿ ಇವರಿಬ್ಬರೂ ವಿಡಿಯೋ ಕಾಲ್ ಮಾಡಿದ್ದನ್ನು ಸ್ಕ್ರೀನ್ ಶಾಟ್ ತೆಗೆದು ಸ್ವತಃ ಚಂದನ್ ಕುಮಾರ್ ಅವರೇ ಹಂಚಿಕೊಂಡಿದ್ದರು. ಇದರ ಜೊತೆಗೆ ಕವಿತಾ ಬರ್ತ್ ಡೇಗೆ ಚಂದನ್ ಮಧ್ಯರಾತ್ರಿ ಹೋಗಿ ಸರ್ಪ್ರೈಸ್ ವಿಶ್ ಮಾಡಿದ್ದರು.