ಈ ಹಿಂದೆ ಲಕ್ಷ್ಮಿ ಬಾರಮ್ಮ ಸೀರಿಯಲ್ನಲ್ಲಿ ಜೋಡಿಯಾಗಿ ಖ್ಯಾತಿ ಗಳಿಸಿದ್ದ ನಟಿ ಕವಿತಾ ಗೌಡ ಹಾಗೂ ನಟ ಚಂದನ್ ಕುಮಾರ್ ಇದೀಗ ನಿಜ ಜೀವನದಲ್ಲೂ ಜೋಡಿಯಾಗಿದ್ದಾರೆ.
ಗುರು ಹಿರಿಯರ ಸಮ್ಮುಖದಲ್ಲಿ ಉಂಗುರ ಬದಲಿಸಿಕೊಂಡ ಚಂದನ್ - ಕವಿತಾ - Actor Chandan Kumar
ಇಂದು ಗುರು ಹಿರಿಯರು ಹಾಗೂ ಕುಟುಂಬಸ್ಥರ ಸಮ್ಮುಖದಲ್ಲಿ ಚಂದನ್ ಹಾಗೂ ಕವಿತಾ ಅವರ ವಿವಾಹ ನಿಶ್ಚಿತಾರ್ಥ ನಡೆದಿದೆ. ಇಷ್ಟು ದಿನ ರೀಲ್ನಲ್ಲಿ ಜೋಡಿಯಾಗಿದ್ದ ಈ ಜೋಡಿ ಇದೀಗ ರಿಯಲ್ ಆಗಿ ಒಂದಾಗಿದ್ದಾರೆ.
ಇಂದು ಗುರು ಹಿರಿಯರು ಹಾಗೂ ಕುಟುಂಬಸ್ಥರ ಸಮ್ಮುಖದಲ್ಲಿ ಚಂದನ್ ಹಾಗೂ ಕವಿತಾ ಅವರ ವಿವಾಹ ನಿಶ್ಚಿತಾರ್ಥ ನೆರವೇರಿದೆ. ಇಷ್ಟು ದಿನ ರೀಲ್ನಲ್ಲಿ ಜೋಡಿಯಾಗಿದ್ದ ಈ ಜೋಡಿ ಇದೀಗ ರಿಯಲ್ ಆಗಿ ಒಂದಾಗಿದ್ದಾರೆ.
ಇಂದು ನಮ್ಮಿಬ್ಬರ ನಿಶ್ಚಿತಾರ್ಥ ನಡೆಯುತ್ತಿದೆ. ನನ್ನ ಹಾಗೂ ಕವಿತಾ ಗೌಡ ಅವರ ಮೊದಲ ಭೇಟಿಯಾಗಿದ್ದು ಲಕ್ಷ್ಮಿ ಬಾರಮ್ಮ ಧಾರಾವಾಹಿಯಲ್ಲಿ. ಎಂಟು ವರ್ಷದ ಹಿಂದೆ ನಮ್ಮಿಬ್ಬರ ಪರಿಚಯವಾಗಿತ್ತು. ಅಲ್ಲಿಂದ ನಾವು ಸ್ನೇಹಿತರಾಗಿದ್ದೆವು. ಮುಂದೆ ನಿಧಾನವಾಗಿ ನಮ್ಮಿಬ್ಬರ ನಡುವೆ ಪ್ರೀತಿಯೂ ಬೆಳೆಯಿತು. ಇದೀಗ ನಾವು ದಾಂಪತ್ಯ ಜೀವನಕ್ಕೆ ಕಾಲಿರಿಸುವ ನಿರ್ಧಾರ ಮಾಡಿದ್ದೇವೆ. ಮೇ ತಿಂಗಳಿನಲ್ಲಿ ವಿವಾಹ ಜರುಗಲಿದೆ. ದಿನಾಂಕ ಇನ್ನಷ್ಟೇ ನಿಗದಿಯಾಗಬೇಕಿದೆ ಎಂದು ಚಂದನ್ ಹೇಳಿದ್ದಾರೆ.