ಕಿರಿಕ್ ಪಾರ್ಟಿ, ಕೆಮಿಸ್ಟ್ರಿ ಆಫ್ ಕರಿಯಪ್ಪ ಸಿನಿಮಾ ಮೂಲಕ ಸ್ಯಾಂಡಲ್ವುಡ್ನಲ್ಲಿ ಗಮನ ಸೆಳೆದ ಯುವ ಪ್ರತಿಭೆ ಚಂದನ್ ಆಚಾರ್. ಬಿಗ್ಬಾಸ್ ಸೀಸನ್ 7ರಲ್ಲಿ ಕಾಣಿಸಿಕೊಂಡಿದ್ದ ಚಂದನ್ ಆಚಾರ್ 'ಮಂಗಳವಾರ ರಜಾದಿನ' ಎಂಬ ಮತ್ತೊಂದು ಕಾಮಿಡಿ ಜಾನರ್ ಸಿನಿಮಾ ಮೂಲಕ ಸ್ಯಾಂಡಲ್ವುಡ್ಗೆ ವಾಪಸ್ ಬಂದಿದ್ದಾರೆ.
ಚಂದನ್ ಆಚಾರ್ಗೆ ಸುದೀಪ್ ಅವರಿಗೆ ಹೇರ್ಸ್ಟೈಲ್ ಮಾಡುವ ಆಸೆಯಂತೆ...! - ಚಂದನ್ಗೆ ಸುದೀಪ್ಗೆ ಹೇರ್ಸ್ಟೈಲ್ ಮಾಡುವ ಆಸೆಯಂತೆ
ಚಂದನ್ ಆಚಾರ್ ನಾಯಕನಾಗಿ ನಟಿಸಿರುವ ಮಂಗಳವಾರ ರಜಾದಿನ ಎಂಬ ಸಿನಿಮಾ ಟ್ರೇಲರ್ ಬಿಡುಗಡೆ ಆಗಿದೆ. ಈ ಟ್ರೇಲರ್ ನೋಡಲು ಬಹಳ ಚೆನ್ನಾಗಿದೆ. ನಾಯಕ ಈ ಚಿತ್ರದಲ್ಲಿ ಸುದೀಪ್ ಅವರ ದೊಡ್ಡ ಅಭಿಮಾನಿ. ಮೆಚ್ಚಿನ ನಟನಿಗೆ ಒಂದು ಬಾರಿ ಹೇರ್ ಸ್ಟೈಲ್ ಮಾಡಬೇಕೆಂಬ ಆಸೆ ಚಂದನ್ಗೆ.
ಚಂದನ್ ಆಚಾರ್ ನಾಯಕನಾಗಿ ನಟಿಸಿರುವ ಮಂಗಳವಾರ ರಜಾದಿನ ಎಂಬ ಸಿನಿಮಾ ಟ್ರೇಲರ್ ಬಿಡುಗಡೆ ಆಗಿದೆ. ಈ ಟ್ರೇಲರ್ ನೋಡಲು ಬಹಳ ಚೆನ್ನಾಗಿದೆ. ನಾಯಕ ಈ ಚಿತ್ರದಲ್ಲಿ ಸುದೀಪ್ ಅವರ ದೊಡ್ಡ ಅಭಿಮಾನಿ. ಮೆಚ್ಚಿನ ನಟನಿಗೆ ಒಂದು ಬಾರಿ ಹೇರ್ ಸ್ಟೈಲ್ ಮಾಡಬೇಕೆಂಬ ಆಸೆ ಚಂದನ್ಗೆ. ನಾಯಕನ ಆಸೆ ಈಡೇರುವುದಾ ಎನ್ನುವುದು ಚಿತ್ರದ ಕಥೆ. ಈ ಹೊಸಬರ ಚಿತ್ರಕ್ಕೆ ಕಿಚ್ಚ ಸುದೀಪ್ ಕೂಡಾ ಟ್ವಿಟರ್ ಮೂಲಕ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಚಂದನ್ ಆಚಾರ್ ಈ ಚಿತ್ರದಲ್ಲಿ ಕ್ಷೌರಿಕನ ಪಾತ್ರ ನಿರ್ವಹಿಸಿದ್ದಾರೆ. ಬಿಗ್ ಬಾಸ್ ಖ್ಯಾತಿಯ ಲಾಸ್ಯ ನಾಗರಾಜ್ ಚಂದನ್ಗೆ ಜೋಡಿಯಾಗಿದ್ದಾರೆ. ಇವರ ಜೊತೆಗೆ ಖ್ಯಾತ ಹಾಸ್ಯ ನಟ ಜಹಾಂಗೀರ್, ರಜನಿಕಾಂತ್, ಗೋಪಾಲಕೃಷ್ಣ ದೇಶಪಾಂಡೆ, ನಂದನ್ ರಾಜ್ ಹಾಗೂ ಇನ್ನಿತರರು ನಟಿಸಿದ್ದಾರೆ. ಪ್ರಜೋತ್ ಡೇಸಾ ಚಿತ್ರದ ಹಾಡುಗಳಿಗೆ ಸಂಗೀತ ನೀಡಿದ್ದು ಯೋಗರಾಜ್ ಭಟ್, ವಿ. ನಾಗೇಂದ್ರ ಪ್ರಸಾದ್, ಯುವಿನ್ ಸಾಹಿತ್ಯ ರಚಿಸಿದ್ದಾರೆ. ಉದಯ್ ಲೀಲಾ ಛಾಯಾಗ್ರಹಣ, ಮಧು ತುಂಬಕೆರೆ ಸಂಕಲನ ಹಾಗೂ ಭೂಷಣ್ ಅವರ ನೃತ್ಯ ನಿರ್ದೇಶನ ಈ ಚಿತ್ರಕ್ಕಿದೆ. ಇನ್ನು ಈ ಚಿತ್ರವನ್ನು ಯುವ ನಿರ್ದೇಶಕ ಯುವಿನ್ ನಿರ್ದೇಶಿಸಿದ್ದಾರೆ. ತ್ರಿವರ್ಗ ಫಿಲಂಸ್ ಬ್ಯಾನರ್ ಅಡಿ ಸಿನಿಮಾ ನಿರ್ಮಾಣವಾಗಿದೆ.