ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ 50 ನೇ ಚಿತ್ರ 'ಕುರುಕ್ಷೇತ್ರ' ಗಲ್ಲಾಪೆಟ್ಟಿಗೆಯಲ್ಲಿ ಅಬ್ಬರಿಸಿದೆ. ದುರ್ಯೋಧನನ ಅರ್ಭಟಕ್ಕೆ ಬಾಕ್ಸ್ ಆಫೀಸ್ ಶೇಕ್ ಆಗಿದ್ದು ದಾಸನ ಭಕ್ತಗಣ ಪುಲ್ ಖುಷ್ ಆಗಿದ್ದಾರೆ. 'ಕುರುಕ್ಷೇತ್ರ' ಸಿನಿಮಾ ರಿಲೀಸ್ ಆದ ಮೂರೇ ವಾರಕ್ಕೆ ಬಾಕ್ಸ್ ಆಫೀಸಿನಲ್ಲಿ ನೂರು ಕೋಟಿ ರೂಪಾಯಿ ಕ್ಲಬ್ ಸೇರಿದೆ.
ದರ್ಶನ್ 50 ನೇ ಚಿತ್ರದ ಅಬ್ಬರಕ್ಕೆ ಅಲ್ಲಾಡಿದ ಬಾಕ್ಸ್ ಆಫೀಸ್...ದಾಸನ ಭಕ್ತಗಣ ಫುಲ್ಖುಷ್ - ಬಾಕ್ಸ್ ಆಫೀಸ್
ಬಹುತಾರಾಗಣದ 'ಕುರುಕ್ಷೇತ್ರ' ಸಿನಿಮಾ ಬಿಡುಗಡೆಯಾದ ನಾಲ್ಕು ವಾರಗಳಲ್ಲಿ 100 ಕೋಟಿ ರೂಪಾಯಿ ಕ್ಲಬ್ ಸೇರಿದ್ದು ಚಿತ್ರತಂಡ ಮಾತ್ರವಲ್ಲ ದರ್ಶನ್ ಅಭಿಮಾನಿಗಳು ಕೂಡಾ ಖುಷಿಪಟ್ಟಿದೆ. ಚಿತ್ರಮಂದಿರದ ಮುಂದೆ ತಮಟೆ, ನಗಾರಿ ಬಾರಿಸಿ ಡ್ಯಾನ್ಸ್ ಮಾಡುವ ಮೂಲಕ ಸಂಭ್ರಮಪಟ್ಟಿದ್ದಾರೆ.
ನಾಲ್ಕನೇ ವಾರದಲ್ಲಿ ಕೂಡಾ ಥಿಯೇಟರ್ನಲ್ಲಿ ದುರ್ಯೋಧನನ ದರ್ಬಾರ್ ಜೋರಾಗಿದೆ. ಇನ್ನು ಕುರುಕ್ಷೇತ್ರ ನೂರು ಕೋಟಿ ಕ್ಲಬ್ ಸೇರಿದ ಹಿನ್ನೆಲೆ ಈಗಾಗಲೇ ದರ್ಶನ್ ತಮ್ಮ ಅಭಿಮಾನಿಗಳ ಜೊತೆ ಕೇಕ್ ಕಟ್ ಮಾಡಿ ಸಂಭ್ರಮಿಸಿದ್ದರು. ಈಗ ದಾಸನ ಭಕ್ತಗಣ 'ಕುರುಕ್ಷೇತ್ರ' ಚಿತ್ರ ನೂರು ಕೋಟಿ ಬಾಚಿರುವ ಖುಷಿಯಲ್ಲಿ ದೇವನಹಳ್ಳಿಯ ವಿಜಿಪುರದ ಶ್ರೀ ಗೌರಿಶಂಕರ್ ಚಿತ್ರಮಂದಿರದಲ್ಲಿ ತಮಟೆ, ನಗಾರಿ ವಾದ್ಯಗಳೊಂದಿಗೆ ಚಿತ್ರಮಂದಿರದ ಬಳಿ ಕುಣಿದು ಕುಪ್ಪಳಿಸಿದ್ದಾರೆ ಅಲ್ಲದೆ ಸಿಹಿ ಹಂಚಿ ಸಂಭ್ರಮಿಸಿದ್ದಾರೆ. ಒಟ್ಟಿನಲ್ಲಿ ದರ್ಶನ್ ಕುರುಕ್ಷೇತ್ರ ಚಿತ್ರದ ಮೂಲಕ ಮತ್ತೆ ಬಾಕ್ಸ್ ಆಫೀಸ್ ಸುಲ್ತಾನ ಅನ್ನೋದನ್ನು ಪ್ರೂವ್ ಮಾಡಿದ್ದಾರೆ.