ಕರ್ನಾಟಕ

karnataka

ETV Bharat / sitara

ಕೀನ್ಯಾದ ಕಾಡಿನಲ್ಲಿ ಏರ್ ಬಲೂನ್​​ ಹತ್ತಿ ಫೊಟೋಗ್ರಫಿ ಮಾಡುತ್ತಿರುವ ದರ್ಶನ್ - ದರ್ಶನ್

ರಾಬರ್ಟ್ ಸಿನಿಮಾ ಶೂಟಿಂಗ್​​​​​​ಗೆ ಬ್ರೇಕ್ ನೀಡಿರುವ ಚಾಲೆಂಜಿಂಗ್ ಸ್ಟಾರ್ ದರ್ಶನ್ ಕೀನ್ಯಾ ದೇಶಕ್ಕೆ ತೆರಳಿದ್ದಾರೆ. ಅಲ್ಲಿನ ಪ್ರಸಿದ್ಧ ಮಸಾಯಿ ಮಾರೋ ಎಂಬ ರಾಷ್ಟ್ರೀಯ ಉದ್ಯಾನವನದ ವೈಲ್ಡ್​ ಲೈಫ್ ಫೊಟೋಗ್ರಫಿಯಲ್ಲಿ ಪಾಲ್ಗೊಂಡಿರುವ ದಚ್ಚುಗೆ ಸ್ನೇಹಿತರು ಸಾಥ್ ನೀಡಿದ್ದಾರೆ.

ದರ್ಶನ್

By

Published : Sep 27, 2019, 9:49 AM IST

ಚಾಲೆಂಜಿಂಗ್ ಸ್ಟಾರ್ ದರ್ಶನ್​ಗೆ ಪ್ರಾಣಿ-ಪಕ್ಷಿಗಳು ಅಂದ್ರೆ ಇನ್ನಿಲ್ಲದ ಪ್ರೀತಿ. ಶೂಟಿಂಗ್​​​ ಬ್ಯುಸಿ ಶೆಡ್ಯೂಲ್​​​​ ನಡುವೆಯೂ ಬಿಡುವು ಮಾಡಿಕೊಂಡು ತಮ್ಮ ಫಾರ್ಮ್​ಹೌಸ್​​​ನಲ್ಲಿ ಪ್ರಾಣಿ-ಪಕ್ಷಿಗಳ ಜೊತೆ ಕಾಲ ಕಳೆಯುತ್ತಾರೆ. ಅಲ್ಲದೆ ಪೊಟೋಗ್ರಫಿ ಕ್ರೇಜ್ ಇರುವ ದಾಸ, ಸಮಯ ದೊರೆತಾಗಲೆಲ್ಲಾ ಕ್ಯಾಮರಾ ಹಿಡಿದು ಕಾಡಿನತ್ತ ಹೆಜ್ಜೆ ಹಾಕುತ್ತಾರೆ.

ಏರ್ ಬಲೂನ್​​ ಹತ್ತಿ ಫೋಟೋಗ್ರಫಿ ಮಾಡುತ್ತಿರುವ ದರ್ಶನ್

ತರುಣ್ ಸುಧೀರ್ ಅಭಿನಯದ 'ರಾಬರ್ಟ್' ಚಿತ್ರದ ಶೂಟಿಂಗ್​​​ಗೆ ಬ್ರೇಕ್ ಹಾಕಿರುವ ದರ್ಶನ್‌, ವನ್ಯಜೀವಿಗಳ ಫೊಟೋಗ್ರಫಿ ಮಾಡುವ ಉದ್ದೇಶದಿಂದ ಪುತ್ರ ವಿನೀಶ್ ಜೊತೆ ಪೂರ್ವ ಆಫ್ರಿಕಾದಲ್ಲಿರುವ ಕೀನ್ಯಾಗೆ ಹೋಗಿದ್ದಾರೆ. ಸ್ನೇಹಿತರೊಂದಿಗೆ ಹಾಟ್ ಏರ್ ಬಲೂನಿನಲ್ಲಿ ಕುಳಿತು ಆಫ್ರಿಕನ್ ಕಾಡುಗಳಲ್ಲಿ ಪ್ರಾಣಿ, ಪಕ್ಷಿಗಳ ಫೋಟೋ ಕ್ಲಿಕ್ಕಿಸಿ ಎಂಜಾಯ್ ಮಾಡುತ್ತಿದ್ದಾರೆ.

ಪ್ರಸಿದ್ಧ ಮಸಾಯಿ ಮಾರೋ ಎಂಬ ರಾಷ್ಟ್ರೀಯ ಉದ್ಯಾನವನದ ವೈಲ್ಡ್​ ಲೈಫ್ ಫೊಟೋಗ್ರಫಿಯಲ್ಲಿ ಪಾಲ್ಗೊಂಡಿರುವ ದಚ್ಚುಗೆ ಸ್ನೇಹಿತರು ಸಾಥ್ ನೀಡಿದ್ದಾರೆ. ದರ್ಶನ್ ಜೊತೆಗೆ ಅವರ ಮೈಸೂರಿನ ಸ್ನೇಹಿತರಾದ ರಾಜೇಶ್‌, ಮೋಹನ್‌, ಸುನಿ, ಬೆಂಗಳೂರಿನ ಖ್ಯಾತ ವೈಲ್ಡ್‌ ಲೈಫ್‌ ಫೊಟೋಗ್ರಾಫರ್‌ ಪ್ರದೀಪ್‌ ಶಿವರಾಮ್‌ ಕೂಡಾ ಇದ್ದಾರೆ ಎನ್ನಲಾಗಿದೆ.

ABOUT THE AUTHOR

...view details