ಕರ್ನಾಟಕ

karnataka

ETV Bharat / sitara

ಬಾಟಲ್ ಕ್ಯಾಪ್​ ಚಾಲೆಂಜ್ ಸ್ವೀಕರಿಸಿ ಯಶಸ್ವಿಯಾದ ಮರಿ ಚಾಲೆಂಜಿಂಗ್ ಸ್ಟಾರ್​ - undefined

ಗಣೇಶ್, ಅರ್ಜುನ್ ಸರ್ಜಾ, ಚಿರಂಜೀವಿ ಸರ್ಜಾ, ರಚಿತಾ ರಾಮ್​, ಪುನೀತ್ ರಾಜ್​ಕುಮಾರ್, ಯುವರಾಜ್​​​ಕುಮಾರ್ ನಂತರ ಇದೀಗ ದರ್ಶನ್ ಪುತ್ರ ವಿನೀಶ್​​​​​​​​ ಬಾಟಲ್ ಕ್ಯಾಪ್ ಚಾಲೆಂಜ್ ಸ್ವೀಕರಿಸಿ ಅದರಲ್ಲಿ ಯಶಸ್ವಿ ಕೂಡಾ ಆಗಿದ್ದಾರೆ.

ಚಾಲೆಂಜಿಂಗ್ ಸ್ಟಾರ್​

By

Published : Jul 7, 2019, 4:27 PM IST

ಫಿಟ್ನೆಸ್ ಚಾಲೆಂಜ್, ಐಸ್ ಬಕೆಟ್ ಚಾಲೆಂಜ್ ಹೀಗೆ ನಾನಾ ವಿಧವಾದ ಚಾಲೆಂಜ್ ಜೊತೆಗೆ ಇದೀಗ 'ಬಾಟಲ್ ಕ್ಯಾಪ್ ಚಾಲೆಂಜ್' ವೈರಲ್ ಆಗಿದೆ. ಹಾಲಿವುಡ್​​​ನಿಂದ ಹಿಡಿದು ಸ್ಯಾಂಡಲ್​​ವುಡ್​ವರೆಗೆ ಈ ಚಾಲೆಂಜನ್ನು ಒಬ್ಬರ ನಂತರ ಒಬ್ಬರು ಸ್ವೀಕರಿಸುತ್ತಿದ್ದಾರೆ.

ದರ್ಶನ್ ಪುತ್ರ ವಿನೀಶ್ ಬಾಟಲ್ ಕ್ಯಾಪ್​ ಚಾಲೆಂಜ್

ಸ್ಯಾಂಡಲ್​​​​ವುಡ್​​​ನಲ್ಲಿ ಗೋಲ್ಡನ್ ಸ್ಟಾರ್ ಗಣೇಶ್, ಅರ್ಜುನ್ ಸರ್ಜಾ, ಚಿರಂಜೀವಿ ಸರ್ಜಾ, ರಚಿತಾ ರಾಮ್​, ಪುನೀತ್ ರಾಜ್​ಕುಮಾರ್, ಯುವರಾಜ್​​​ಕುಮಾರ್, ನಂತರ ಇದೀಗ ಮರಿ ಚಾಲೆಂಜಿಂಗ್ ಸ್ಟಾರ್ ಅಂದರೆ ನಟ ದರ್ಶನ್ ಪುತ್ರ ವಿನೀತ್ ಸ್ವೀಕರಿಸಿ ಯಶಸ್ವಿಯಾಗಿದ್ದಾರೆ. ಈ ವಿಡಿಯೋ ಕೂಡಾ ವೈರಲ್ ಆಗಿದ್ದು, ದರ್ಶನ್​ ಅಭಿಮಾನಿಗಳಂತೂ ತಮ್ಮ ಡಿಬಾಸ್​ ಪುತ್ರ ಚಾಲೆಂಜ್ ಸ್ವೀಕರಿಸಿ ಗೆದ್ದಿರುವುದಕ್ಕೆ ತಾವೇ ಗೆದ್ದಷ್ಟು ಸಂತೋಷ ವ್ಯಕ್ತಪಡಿಸಿದ್ದಾರೆ. ಮುಂದೆ ಸ್ಯಾಂಡಲ್​​​ವುಡ್​​ನಲ್ಲಿ ಈ ಚಾಲೆಂಜ್ ಸ್ವೀಕರಿಸುವ ಸೆಲಬ್ರಿಟಿ ಯಾರು ಎಂಬುದನ್ನು ಕಾದು ನೋಡಬೇಕಿದೆ.

For All Latest Updates

TAGGED:

ABOUT THE AUTHOR

...view details